ಮಧ್ಯರಾತ್ರಿ ಆಪರೇಷನ್ ಇಂಡಿಯನ್ಸ್ – ಕಾಬೂಲ್‍ನಿಂದ ದೋಹಾ ಮೂಲಕ ದೆಹಲಿಗೆ ಭಾರತೀಯರು

– ಕಾಬೂಲ್‍ನಲ್ಲಿ ಉಳಿದವರ ಏರ್ ಲಿಫ್ಟ್ ಗೆ ಕಸರತ್ತು

ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡಲು ಮೋದಿ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಮಧ್ಯರಾತ್ರಿ 135 ಮಂದಿ ಭಾರತೀಯರು ಸೇಫಾಗಿ ದೆಹಲಿಯಲ್ಲಿ ಲ್ಯಾಂಡ್ ಆಗಿದ್ದಾರೆ. ಮೂರು ದಿನಗಳ ಹಿಂದೆ 135 ಭಾರತೀಯರನ್ನು ಕಾಬೂಲ್‍ನಿಂದ ಖತಾರ್ ನ ದೋಹಾಗೆ ಏರ್ ಲಿಫ್ಟ್ ಮಾಡಲಾಗಿತ್ತು. ಅವರನ್ನು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದೋಹದಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ಕರೆತರಲಾಗಿದೆ.

ಅಫ್ಘನ್‍ನಲ್ಲಿ ಸಿಲುಕಿರುವ ಉಳಿದ ಹಿಂದೂಗಳನ್ನು, ಸಿಖ್ಖರನ್ನು, ಮುಸ್ಲಿಮರನ್ನು, ಕ್ರೈಸ್ತರನ್ನು ಕಾಪಾಡಲು ಕಸರತ್ತುಗಳನ್ನು ನಡೆಸಲಾಗ್ತಿದೆ. ಆದ್ರೆ ತಾಲಿಬಾನ್ ಉಗ್ರರು ಅಷ್ಟು ಸುಲಭಕ್ಕೆ ಭಾರತೀಯರನ್ನು ಏರ್ ಪೋರ್ಟ್ ತಲುಪಲು ಬಿಡ್ತಿಲ್ಲ. ಅಲ್ಲಿ ಸಿಲುಕಿರುವ ಭಾರತೀಯರೊಬ್ಬರ ಪ್ರಕಾರ, ಅವರನ್ನು ವಿಮಾನನಿಲ್ದಾಣಕ್ಕೆ ಕರೆದೊಯ್ಯಲು ಕಳೆದ ಎರಡು ದಿನಗಳಿಂದ ನಿರಂತರ ಪ್ರಯತ್ನಗಳು ನಡೆಯತ್ತಿವೆ. ದಾರಿ ಮಧ್ಯೆ ತಾಲಿಬಾನಿ ಉಗ್ರರು ಬಿಡುತ್ತಿಲ್ಲ. ಇದನ್ನೂ ಓದಿ: ತಾಲಿಬಾನಿಗಳನ್ನ RSS, ಬಜರಂಗದಳಕ್ಕೆ ಹೋಲಿಸಿದ ಕವಿ ಮುನ್ವರ್ ರಾಣಾ

ಭಾರತೀಯರು ಇರುವ ಬಸ್ ತಪಾಸಣೆ ನಡೆಸಿದ ಉಗ್ರರು, ಅದರಲ್ಲಿ ಅಫ್ಘಾನಿ ಹಿಂದೂಗಳು, ಸಿಖ್ಖರನ್ನು ಭಾರತೀಯರಿಂದ ಬೇರ್ಪಡಿಸಿ ಫ್ಯಾಕ್ಟರಿಯೊಂದಕ್ಕೆ ಕರೆದೊಯ್ದಿದ್ದಾರೆ. ಕೆಲವರು ಭಯದಿಂದ ಗುರುದ್ವಾರಕ್ಕೆ ವಾಪಸ್ ಆಗಿದ್ದಾರೆ. ಉಳಿದ ಭಾರತೀಯರು ಏರ್ ಪೋರ್ಟ್ ಸಮೀಪದ ಕಲ್ಯಾಣಮಂಟಪದಲ್ಲಿ ಬೀಡುಬಿಟ್ಟಿದ್ದಾರೆ. ಇದರಲ್ಲಿ ಕನ್ನಡಿಗರು ಕೂಡ ಇದ್ದಾರೆ ಎನ್ನಲಾಗಿದೆ. ತಾಲಿಬಾನಿಗಳು ಕೆಲ ಭಾರತೀಯರ ಮೊಬೈಲ್‍ಗಳನ್ನು ಉಡೀಸ್ ಮಾಡಿದ್ದಾರೆ. ಅಲ್ಲದೇ 150 ಭಾರತೀಯರನ್ನು ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿತ್ತು. ಆದ್ರೆ ಇದು ಸುಳ್ಳು ಎಂದು ಸ್ವತಃ ತಾಲಿಬಾನ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು

Source: publictv.in Source link