ಲಂಡನ್​​ನಲ್ಲೇ ಬೀಡು ಬಿಟ್ಟ ಬಿಸಿಸಿಐ ಬಿಗ್​ಬಾಸ್​; ‘ಮಿಷನ್​ ವರ್ಲ್ಡ್​​​ಕಪ್​’ ಪ್ಲಾನ್..! 

ಲಂಡನ್​​ನಲ್ಲೇ ಬೀಡು ಬಿಟ್ಟ ಬಿಸಿಸಿಐ ಬಿಗ್​ಬಾಸ್​; ‘ಮಿಷನ್​ ವರ್ಲ್ಡ್​​​ಕಪ್​’ ಪ್ಲಾನ್..! 

ಐಪಿಎಲ್​.. ನಂತರ ಟಿ-20 ವಿಶ್ವಕಪ್​.. ಈ ಎರಡು ಟೂರ್ನಿಗಳನ್ನ ಕೊರೊನಾ ಸಂಕಷ್ಟದ ನಡುವೆ ಸುರಕ್ಷಿತವಾಗಿ ಆಯೋಜಿಸಬೇಕಾದ ಹೊಣೆ, ಬಿಸಿಸಿಐ ಹೆಗಲೇರಿದೆ. ಈ ಮಹತ್ವದ ಜವಾಬ್ದಾರಿಯ ಹೊರತಾಗಿಯೂ ಬಿಸಿಸಿಐನ ಮುಖ್ಯಸ್ಥರು ಮಾತ್ರ, ಇಂಗ್ಲೆಂಡ್​​ನಲ್ಲಿ ಬೀಡು ಬಿಟ್ಟಿದ್ದಾರೆ. ಬಿಗ್​ ಬಾಸ್​ಗಳು ಇಂಗ್ಲೆಂಡ್​​ನಲ್ಲಿರೋದಕ್ಕೆ, ಬಲವಾದ ಕಾರಣವೂ ಇದೆ.

ಇದನ್ನೂ ಓದಿ: ಹಳೇ ಹೈದ್ರಾಬಾದ್​​ ಗಲ್ಲಿಯಲ್ಲಿ ವೇಗಿ ಮೊಹಮ್ಮದ್ ಸಿರಾಜ್​ ಕಟೌಟ್..!

2ನೇ ಹಂತದ ಐಪಿಎಲ್​ ಆರಂಭಕ್ಕೆ ಕೇವಲ 28 ದಿನಗಳು ಮಾತ್ರ ಬಾಕಿ ಉಳಿದಿದೆ. ಅದರ ಬೆನ್ನಲ್ಲೇ ವಿಶ್ವಕಪ್​ ಟೂರ್ನಿ. ಈ ಎರಡು ಮಹತ್ವದ ಟೂರ್ನಿಗಳನ್ನ ಯಶಸ್ವಿಯಾಗಿ ಆಯೋಜಿಸುವ ಹೊಣೆ ಹೊತ್ತಿರೋದು ಬಿಸಿಸಿಐ. ಯುಎಇನಲ್ಲಿ ನಡೆಯಲಿರುವ ಎರಡೂ ಟೂರ್ನಿಗಳ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದ್ದು, ತಂಡಗಳೆಲ್ಲಾ ಅಭ್ಯಾಸ ಆರಂಭಿಸಿವೆ. ಆದ್ರೆ, ಆಯೋಜನೆಯ ಹೊಣೆ ಹೊತ್ತಿರುವ ಬಿಸಿಸಿಐ ಬಾಸ್​ಗಳು ಮಾತ್ರ, ಯು.ಕೆಯಲ್ಲಿ ಬೀಡು ಬಿಟ್ಟಿದ್ದಾರೆ.

ಇಂಗ್ಲೆಂಡ್​ನಲ್ಲೇ ಬೀಡು ಬಿಟ್ಟ ಬಿಸಿಸಿಐ ಬಾಸ್​ಗಳು..!
‘ಮಿಷನ್​ ವರ್ಲ್ಡ್​​​ಕಪ್​’ ಲಂಡನ್​ನಲ್ಲೇ ತಯಾರಾಗಿದೆ ಪ್ಲಾನ್​ ..!

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಗೆಲ್ಲೋ ಮಹದಾಸೆಯೊಂದಿಗೆ ಇಂಗ್ಲೆಂಡ್​ ಫ್ಲೈಟ್​ ಹತ್ತಿದ್ದ ಟೀಮ್​ ಇಂಡಿಯಾ, ಸೋಲುಂಡು ನಿರಾಸೆ ಅನುಭವಿಸಿತು. ಇದೀಗ ಇಂಗ್ಲೆಂಡ್​​ ವಿರುದ್ಧ ಗೆದ್ದು ಭಾರತ ಶುಭಾರಂಭವನ್ನೂ, ಮಾಡಿದೆ. ಆದ್ರೆ ಐಸಿಸಿ ಟ್ರೋಫಿ ಗೆಲ್ಲಲಾಗದ ಹತಾಶೆ ಕೋಚ್​​ ರವಿ ಶಾಸ್ತ್ರಿ, ನಾಯಕ ವಿರಾಟ್​ ಕೊಹ್ಲಿ ಜೋಡಿಗೆ, ಇನ್ನೂ ಹಾಗೇ ಇದೆ. ಹೀಗಾಗಿ ಟಿ20 ವಿಶ್ವಕಪ್​ನಲ್ಲಾದ್ರೂ ಐಸಿಸಿ ಟ್ರೋಫಿಯ ಬರವನ್ನ ನೀಗಿಸಿಕೊಳ್ಳಬೇಕು ಅನ್ನೋ ನಿಟ್ಟಿನಲ್ಲಿ, ಪ್ಲಾನ್​ ರೂಪಿಸ್ತಿರೋದು.

blank

ಇದನ್ನೂ ಓದಿ: IPL​ ಮರು ಆಯೋಜನೆಯಿಂದ ಬಿಸಿಸಿಐಗೆ ಟೆನ್ಶನ್.. ಫ್ರಾಂಚೈಸಿಗಳಿಗೆ ವಾರ್ನಿಂಗ್​​​!

ಬಿಸಿಸಿಐ ಪ್ರೆಸಿಡೆಂಟ್ ಗಂಗೂಲಿ ಌಂಡ್ ಟೀಮ್, ಇಂಗ್ಲೆಂಡ್​​ನಲ್ಲಿ ಬೀಡು ಬಿಟ್ಟಿರುವ ಹಿಂದಿನ ಉದ್ದೇಶ ಕೂಡ ಇದೇ ಆಗಿದೆ. ಕೋಚ್​​ ರವಿ ಶಾಸ್ತ್ರಿ, ನಾಯಕ ವಿರಾಟ್​ ಕೊಹ್ಲಿಯೊಂದಿಗೆ ಬಿಸಿಸಿಐ ಬಾಸ್​ಗಳು ಮಹತ್ವದ ಸಭೆ ನಡೆಸಿದ್ದಾರೆ ಅನ್ನೋದು, ಈಗ ತಿಳಿದು ಬಂದಿದೆ. ಅಷ್ಟೇ ಅಲ್ಲ..! ಚುಟುಕು ವಿಶ್ವಕಪ್​ ಚಾಂಪಿಯನ್​ ಪಟ್ಟಕ್ಕೆರುವವರೆಗಿನ ರೂಟ್​ ಮ್ಯಾಪ್​ ಕೂಡ, ಈ ಸಭೆಯಲ್ಲಿ ನಿರ್ಧಾರವಾಗಿದೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಜೊತೆಗೆ ತಂಡದ ಆಯ್ಕೆಯ ಬಗ್ಗೆಯೂ ಇದೇ ಸಭೆಯಲ್ಲಿ ಚರ್ಚೆಯಾಗಿದೆಯಂತೆ..!

ಇದನ್ನೂ ಓದಿ: ಶಾಸ್ತ್ರಿ ನಿರ್ಗಮನದಿಂದ ಕೊಹ್ಲಿ ನಾಯಕತ್ವಕ್ಕೆ ಸಂಚಕಾರ..! ನಾಯಕತ್ವದಿಂದ ಕೆಳಗಿಳಿಯುತ್ತಾರಾ ವಿರಾಟ್?

ಟಿ20 ವಿಶ್ವಕಪ್​ಗೆ ಕೇವಲ 2 ತಿಂಗಳುಗಳು ಮಾತ್ರ ಬಾಕಿ. ಎಲ್ಲಾ ತಂಡಗಳು ವಿಶ್ವ ಸಮರಕ್ಕೆ ತಯಾರಿ ನಡೆಸಿದ್ರೆ, ಭಾರತ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿದೆ. ಭಾರತೀಯ ಆಟಗಾರರು ಐಪಿಎಲ್​ ಹೊರತು ಪಡಿಸಿದ್ರೆ, ಉಳಿದಂತೆ ಕಳೆದ 2 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು ತುಂಬಾ ಕಡಿಮೆ. ಹೀಗಾಗಿ ಟಿ20 ವಿಶ್ವಕಪ್​ಗೂ ಮುನ್ನ ನಡೆದಿರುವ ಈ ಸಭೆ ಅತ್ಯಂತ ಮಹತ್ವದ್ದಾಗಿದೆ ಅನ್ನೋದು ಕ್ರಿಕೆಟ್​ ವಲಯದ ಮಾತಾಗಿದೆ.

ಇದನ್ನೂ ಓದಿ:ಟೀಂ ಇಂಡಿಯಾ ಹೆಡ್​ಕೋಚ್​​ ರೇಸ್​​ನಲ್ಲಿ ಅಚ್ಚರಿ ಹೆಸರು; ಇವರು ಬ್ಯಾಟಿಂಗ್ ಮಾಂತ್ರಿಕ

Source: newsfirstlive.com Source link