ನಿಯಮ ಮೀರಿ ಸೇಲಿಂಗ್​ ಕಾಂಪಿಟೇಷನ್; ನ್ಯೂಸ್​ಫಸ್ಟ್ ವರದಿ ಬೆನ್ನಲ್ಲೇ ಎಚ್ಚೆತ್ತ ಆಯೋಜಕರು

ನಿಯಮ ಮೀರಿ ಸೇಲಿಂಗ್​ ಕಾಂಪಿಟೇಷನ್; ನ್ಯೂಸ್​ಫಸ್ಟ್ ವರದಿ ಬೆನ್ನಲ್ಲೇ ಎಚ್ಚೆತ್ತ ಆಯೋಜಕರು

ಮಂಡ್ಯ: ಜಲಸಂಪನ್ಮೂಲ ಇಲಾಖೆಯಿಂದಲೇ ನಿಯಮ ಉಲ್ಲಂಘಿಸಿ ಕೆಆರ್​ಎಸ್​ ಡ್ಯಾಂ ಹಿನ್ನೀರಿನಲ್ಲಿ ನ್ಯಾಷನಲ್​ ಸೆಲ್ಲಿಂಗ್​ ಕಾಂಪಿಟೇಷನ್​ಗೆ ಅವಕಾಶ ಮಾಡಿಕೊಟ್ಟು, ಸರ್ಕಾರದ ನಿಯಮವನ್ನ ಉಲ್ಲಂಘನೆ ಮಾಡಲಾಗಿತ್ತು. ನ್ಯೂಸ್​ಫಸ್ಟ್​ ವರದಿ ಬೆನ್ನಲ್ಲೇ ಎಚ್ಚೆತ್ತ ಆಯೋಜಕರು ಸ್ಪರ್ಧೆ ಸ್ಥಳಕ್ಕೆ ಆರೋಗ್ಯ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನ ಆಗಸ್ಟ್ 20 ರಿಂದ 25ರವರೆಗೆ ನಿಯೋಜನೆ ಮಾಡಿದ್ದಾರೆ.

ನೀರಾವರಿ ಇಲಾಖೆ ವಿಧಿಸಿರೋ ಷರತ್ತುಗಳನ್ನ ಉಲ್ಲಂಘನೆ ಮಾಡಿ ಸೇಲಿಂಗ್  ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಈ ಬಗ್ಗೆ  ಸ್ಪರ್ಧೆ ಆಯೋಜನೆ ಮಾಡಿದವವರನ್ನು ಪ್ರಶ್ನಿಸಿದರೆ ಉಢಾಪೆ ಉತ್ತರ ನೀಡಿದ್ದರು. ಈ ಕುರಿತು ನ್ಯೂಸ್​ಫಸ್ಟ್​ ನಿನ್ನೆ ವಿಸ್ತೃತ ವರದಿ ಬಿತ್ತರಿಸಿತ್ತು.

ಇನ್ನು ಆರೋಗ್ಯ ಇಲಾಖೆ ಸೇಲಿಂಗ್ ಸ್ಪರ್ಧೆ ಸ್ಥಳದಲ್ಲಿ ಸಿಬ್ಬಂದಿ ನಿಯೋಜಿಸುವುದಾಗಿ, ರಾತ್ರೋ ರಾತ್ರಿ ಅನುಮತಿ ನೀಡಿ ಆದೇಶ ಹೊರಡಿಸಿದೆ. ಯಾರದೋ ಪ್ರಭಾವಕ್ಕೆ ಒಳಗಾಗಿ ತರಾತುರಿಯಲ್ಲಿ ಅನುಮತಿ ನೀಡ್ತಾ? ಎಂಬ ಸಂಶಯ ಹುಟ್ಟು ಹಾಕಿದೆ. ಮತ್ತೊಂದು ಕಡೆ ಕಾರ್ಯಕ್ರಮ ಆರಂಭವಾದ ಆಗಸ್ಟ್ 21 ರಂದು ಸಿಬ್ಬಂದಿ ನಿಯೋಜಿಸದೆ, ವರದಿ ಬಳಿಕ ದಿಢೀರ್ ಸೇಲಿಂಗ್ ಸ್ಪರ್ಧೆ ಸ್ಥಳದಲ್ಲಿ ಸಿಬ್ಬಂದಿ ನಿಯೋಜಿಸುವುದಾಗಿ ಆದೇಶ ನೀಡಿರುವುದು ಅನುಮಾನಕ್ಕೆ ಎಡೆಮಾಡಿ ಕೊಡ್ತಿದೆ.

ಇದನ್ನೂ ಓದಿ: ಜಲಸಂಪನ್ಮೂಲ ಇಲಾಖೆಯಿಂದಲೇ ನಿಯಮ ಉಲ್ಲಂಘನೆ; KRS​ ಹಿನ್ನೀರಿನಲ್ಲಿ ಸೇಲಿಂಗ್​ ಕಾಂಪಿಟೇಷನ್

ಡ್ಯಾಂನ ಹಿನ್ನೀರಿನ 1.5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಚಟುವಟಿಕೆಗಳಿಗೆ ನಿಷೇಧ ಹೇರಿರುವ ನೀರಾವರಿ ಇಲಾಖೆಯ ಆದೇಶವನ್ನ ಧಿಕ್ಕರಿಸಿ ಸೇಲಿಂಗ್ ಸ್ಪರ್ಧೆ ಆಯೋಜನೆಗೆ ಜಲಸಂಪನ್ಮೂಲ ಇಲಾಖೆ ಅವಕಾಶ ನೀಡಿತ್ತು. ಈ ಕುರಿತು ನಿನ್ನೆ ಕಾವೇರಿ ನೀರಾವರಿ ನಿಗಮದ ಅಧಿಕಾರಿ ಅನುಮತಿ ಪತ್ರ ಕೇಳಿದ್ರೆ ಆಯೋಜಕರು ದರ್ಪ ತೋರಿಸಿದ್ದರು. ಸ್ಥಳೀಯ ಮಟ್ಟದ ಇಲಾಖೆಗಳಿಂದ ಅನುಮತಿ ಪಡೆದು ಬಳಿಕ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಿದ್ದರೂ ಆಯೋಜಕರು ಕೇರ್​ ಮಾಡಿರಲಿಲ್ಲ.

ರಾಯಲ್ ಸೆಲ್ಲಿಂಗ್ ಕ್ಲಬ್‌ಗೆ, ಜಲಸಂಪನ್ಮೂಲ ಇಲಾಖೆ, ನ್ಯಾಷನಲ್​ ಸೈಲಿಂಗ್​ಗೆ ಅವಕಾಶ ನೀಡಿದೆ. ನಿನ್ನೆಯಿಂದ ಆರಂಭವಾಗಿರುವ ಸೆಲ್ಲಿಂಗ್ ನೌಕಾಯಾನ ಚಟುವಟಿಕೆ ಮತ್ತು ಒಲಿಂಪಿಕ್​​ನಲ್ಲಿ  ಭಾಗವಹಿಸುವಿಕೆಯನ್ನ ಉತ್ತೇಜಿಸಲು ರಾಷ್ಟ್ರೀಯ ರೆಗಟ್ಟಾ ನಡೆಸಲು ಅವಕಾಶ ನೀಡಿದೆ. ಮೂರು ದಿನಗಳ ಕಾಲ ನಡೆಸಲು ಇಲಾಖೆ ಅವಕಾಶ ನೀಡಿದೆ.

blank

Source: newsfirstlive.com Source link