ಪೈಲಟ್ ಲುಕ್‍ನಲ್ಲಿ ಕಾಣಿಸಿಕೊಂಡ ಗ್ಲಾಮರ್ ಚೆಲುವೆ ಕಂಗನಾ

ಮುಂಬೈ: ಬಾಲಿವುಡ್‍ನಲ್ಲಿ ಒಂದಲ್ಲಾ ಒಂದು ವಿವಾದದ ಮೂಲಕ ಸದ್ದು ಮಾಡುವ ನಟಿ ಕಂಗನಾ ರಣಾವತ್ ವಾಯುಸೇನೆ ಸಮವಸ್ತ್ರದಲ್ಲಿ ಮಿಂಚುತ್ತಿರುವ ಫೋಟೋ ವೈರಲ್ ಆಗುತ್ತಿದೆ.

ಇತ್ತೀಚೆಗಷ್ಟೇ ಯೂರೋಪ್‍ನಲ್ಲಿ ಧಾಕಡ್ ಸಿನಿಮಾದ ಶೂಟಿಂಗ್ ಮುಗಿಸಿ, ಅದೇ ಖುಷಿಯಲ್ಲಿ ಸಣ್ಣದೊಂದು ಪಾರ್ಟಿ ಮಾಡಿ ಕೆಲವೊಂದು ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದ ಕಂಗನಾ, ಇದರ ಬೆನ್ನೆಲ್ಲೇ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೂ ಈ ಸಿನಿಮಾದ ಚಿತ್ರೀಕರಣ ವೇಳೆ ಕಂಗನಾ ವಾಯುಸೇನೆ ಸಮವಸ್ತ್ರದಲ್ಲಿರುವ ಫೋಟೋವನ್ನು ಆಗಸ್ಟ್ 21ರಂದು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Kangana Ranaut (@kanganaranaut)

ಹೌದು, ಸದಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಜೊತೆ ಗ್ಲಾಮರ್ ಲುಕ್‍ನಲ್ಲಿ ಮಿಂಚುತ್ತಿದ್ದ ಕಂಗನಾ ಇದೇ ಮೊದಲ ಬಾರಿಗೆ ತೇಜಸ್ ಸಿನಿಮಾದಲ್ಲಿ ವಾಯು ಸೇನೆಯ ಪೈಲಟ್ ಆಗಿ ಬಣ್ಣಹಚ್ಚುತ್ತಿದ್ದಾರೆ. ಸದ್ಯ ಈ ಸಿನಿಮಾಕ್ಕಾಗಿ ಕಂಗನಾ ಸಿಕ್ಕಾಪಟ್ಟೆ ತಯಾರಿ ನಡೆಸಿದ್ದು, ಚಿತ್ರೀಕರಣದ ವೇಳೆ ಸೆರೆಹಿಡಿಯಲಾದ ಫೋಟೋವೊಂದನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್ – ಅಂತರಾಷ್ಟ್ರೀಯ ಷಡ್ಯಂತ್ರ ಎಂದ ಕಂಗನಾ

 

View this post on Instagram

 

A post shared by Kangana Ranaut (@kanganaranaut)

ಫೋಟೋದಲ್ಲಿ ಕಂಗನಾ ವಾಯು ಸೇನೆಯ ಪೈಲಟ್ ಆಗಿ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಫೋಟೋ ಜೊತೆಗೆ ನನ್ನ ಮುಂದಿನ ಮಿಷನ್ ತೇಜಸ್ ಇಂದಿನಿಂದ ಆರಂಭವಾಗುತ್ತಿದೆ. ಚಿತ್ರತಂಡಕ್ಕೆ ಧನ್ಯವಾದ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಯುರೋಪ್‍ನಲ್ಲಿ ಕಂಗನಾ ಹಾಟ್ ಪೋಸ್ – ಅಭಿಮಾನಿಗಳು ಕ್ಲೀನ್ ಬೋಲ್ಡ್

Source: publictv.in Source link