ಕಾಬೂಲ್​ನಿಂದ ಮತ್ತೆ 107 ಮಂದಿ ಭಾರತೀಯರ ಏರ್​ಲಿಫ್ಟ್​ ಮಾಡಿದ IAF

ಕಾಬೂಲ್​ನಿಂದ ಮತ್ತೆ 107 ಮಂದಿ ಭಾರತೀಯರ ಏರ್​ಲಿಫ್ಟ್​ ಮಾಡಿದ IAF

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನ ಕರೆ ತರುವ ಕೆಲಸ ಜೋರಾಗಿ ನಡೆಯುತ್ತಿದೆ. ಇದೀಗ 107 ಮಂದಿಯನ್ನ ಕಾಬೂಲ್​​ನಿಂದ ದೆಹಲಿಗೆ ಕರೆದುಕೊಂಡು ಬರಲಾಗುತ್ತಿದೆ ಅಂತಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇದರ ಮಧ್ಯೆ 87 ಮಂದಿ ಈಗಾಗಲೇ ದೆಹಲಿಗೆ ಬಂದಿಳಿದಿದ್ದಾರೆ.

ಇದನ್ನೂ ಓದಿ: ಮೋದಿ ರಾಜತಾಂತ್ರಿಕತೆ: ಆಫ್ಘಾನ್​​ನಲ್ಲಿರೋ ಭಾರತೀಯರು ನಿಟ್ಟುಸಿರು ಬಿಡುವ ಸುದ್ದಿ ಕೊಟ್ಟ ಅಮೆರಿಕ

ಇಂಡಿಯನ್ ಏರ್​ಫೋರ್ಸ್​ ಒಟ್ಟು 168 ಮಂದಿಯನ್ನ ಇಂದು ಬೆಳಗ್ಗೆ ಏರ್​ಲಿಫ್ಟ್​ ಮಾಡಿದೆ. ಅದರಲ್ಲಿ 107 ಮಂದಿ ಭಾರತೀಯರು ಇದ್ದಾರೆ ಅಂತಾ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಮಾಹಿತಿ ನೀಡಿದ್ದಾರೆ. ಇಂದಿನಿಂದ ಕಾಬೂಲ್​ಗೆ ಭಾರತದ ಎರಡು ಐಎಎಫ್ ಪ್ಲೇನ್​ಗಳು ಬರಲು ಅಮೆರಿಕ ಸೇನೆ ಅನುಮತಿ ನೀಡಿದೆ.

ಇನ್ನು ವಿಶೇಷ ಅಂದ್ರೆ ಕಳೆದ 24 ಗಂಟೆಯಲ್ಲಿ ಅಮೆರಿಕ 3,800 ನಾಗರಿಕರನ್ನ ಬೇರೆ ಬೇರೆ ದೇಶಗಳಿಗೆ ಕಳುಹಿಸಿಕೊಟ್ಟಿದೆ.

ಇದನ್ನೂ ಓದಿ: ತಾಲಿಬಾನ್ ಜೊತೆಗೆ ಪಾಕ್​ ISI ಮುಖ್ಯಸ್ಥನ ಕಳ್ಳಾಟ.. ಅಫ್ಘಾನ್ ಅರಾಜಕತೆಯ ಹಿಂದೆ ಪಾಕ್ ಕೈವಾಡ?

Source: newsfirstlive.com Source link