ವೈರಲ್ ಆಯ್ತು ಚಿನ್ನದ ಹುಡುಗನ ಮೂರು ವರ್ಷದ ಹಳೆಯ ವೀಡಿಯೋ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಮೂರು ವರ್ಷದ ಹಳೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೀರಜ್ ಚೋಪ್ರಾ ಅವರ ಮಾತುಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಟೋಕಿಯೋದಿಂದ ಭಾರತಕ್ಕೆ ಬಂದ ಬಳಿಕ ನೀರಜ್ ಚೋಪ್ರಾ ಅವರನ್ನು ಸರ್ಕಾರ ಸೇರಿದಂತೆ ವಿವಿಧ ಸಂಘಟನೆಗಳು ಸನ್ಮಾನಿಸುತ್ತಿವೆ. ಇಡೀ ದೇಶದ ತುಂಬೆಲ್ಲ ನೀರಜ್ ಚೋಪ್ರಾ ಅವರಿಗೆ ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತಿವೆ ಎಂದು ವರದಿಯಾಗಿದೆ. ಮೂರು ವರ್ಷಗಳ ಹಿಂದೆ ಕಾಲೇಜಿನ ಕ್ರೀಡಾ ಸಮಾರಂಭದಲ್ಲಿ ನೀರಜ್ ಚೋಪ್ರಾ ಅತಿಥಿಯಾಗಿ ಭಾಗವಹಿಸಿದ್ದರು. ಅಂದು ನೀರಜ್ ಚೋಪ್ರಾ ವಿದ್ಯಾರ್ಥಿ ಜೊತೆ ಮಾತನಾಡಿದ ವೀಡಿಯೋ ಕ್ಲಿಪ್ ವೈರಲ್ ಆಗಿದೆ.

ಅಂದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಇಂಗ್ಲಿಷ್ ನಲ್ಲಿ ನೀರಜ್ ಚೋಪ್ರಾ ಅವರಿಗೆ ಪ್ರಶ್ನೆ ಕೇಳಿದ್ದನು. ಆಗ ನಿಮಗೆ ಹಿಂದಿ ಬರಲ್ಲವಾ ಎಂದು ನೀರಜ್ ಪ್ರಶ್ನೆ ಮಾಡಿದ್ದರು. ಆಗ ವಿದ್ಯಾರ್ಥಿ ಹಿದಿ ಚೆನ್ನಾಗಿಯೇ ಬರುತ್ತೆ ಹೇಳಿದ್ದಕ್ಕೆ ಆ ಭಾಷೆಯಲ್ಲಿಯೇ ಸರಳವಾಗಿ ಪ್ರಶ್ನೆ ಕೇಳಬಹುದಲ್ವಾ ಎಂದು ಹೇಳಿದ್ದರು. ಇದನ್ನೂ ಓದಿ: ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆದ ರಾಖಿ ಸಾವಂತ್- ವೀಡಿಯೋ ವೈರಲ್

blank

ಇನ್ನೂ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ನೀರಜ್ ಚೋಪ್ರಾ, ಆಟಗಾರ ಸದಾ ಗಾಯಗಳಿಂದ ದೂರವಾಗಿರಬೇಕಾಗುತ್ತದೆ. ತರಬೇತಿ ಅಥವಾ ಸ್ಪರ್ಧೆಯಲ್ಲಿ ಗಾಯಗಳಾಗದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಎಷ್ಟೇ ಪ್ರ್ಯಾಕ್ಟಿಸ್ ಮಾಡಿದ್ರೂ ಕೊನೆ ಕ್ಷಣದವರೆಗೂ ಒತ್ತಡ ಇರುತ್ತೆ. ಒಂದು ವೇಳೆ ಗಾಯಗೊಂಡ್ರೆ ನಾವು ಮತ್ತೆ ನಮ್ಮ ಹಳೆ ಲಯಕ್ಕೆ ಹಿಂದಿರುಗಲು ಸುಮಾರು ಎರಡು ವರ್ಷವಾದ್ರೂ ಸಮಯ ಬೇಕಾಗುತ್ತದೆ ಎಂದು ಉತ್ತರಿಸಿದ್ದರು. ಇದನ್ನೂ ಓದಿ: ನೀರಜ್ ಚೋಪ್ರಾಗೆ ಸಿನಿಮಾ ಆಫರ್ ನೀಡಿದ ಅಕ್ಷಯ್ ಕುಮಾರ್

ನಾನು ಸಿಂಗಲ್:
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಾವು ಸಿಂಗಲ್ ಮತ್ತು ಆಟದ ಮೇಲೆ ನನ್ನ ಗಮನ ಇರಲಿದೆ ಎಂದು ನೀರಜ್ ಚೋಪ್ರಾ ಹೇಳಿದ್ದರು. ಮಹಿಳಾ ಅಭಿಮಾನಿಗಳಿಂದ ಇಷ್ಟೊಂದು ಪ್ರಿತಿ, ಮೆಚ್ಚುಗೆ ಬರುತ್ತಿದೆ ಈ ಕುರಿತಾಗಿ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ನೀರಜ್, ಇದು ಒಳ್ಳೆಯದು. ಆದರೆ ಸತ್ಯವನ್ನು ಹೇಳಬೇಕು ಎಂದರೆ, ನಾನು ಇನ್ನೂ ಸಿಂಗಲ್. ನಾನು ಅಭಿಮಾನಿಗಳಿಂದ ತುಂಬಾ ಪ್ರೀತಿಯನ್ನು ಪಡೆಯುತ್ತಿದ್ದೇನೆ. ಇದು ಸಂತೋಷದ ವಿಚಾರವಾಗಿದೆ. ಮುಂಬರುವ ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‍ಶಿಪ್ ಮೇಲೆ ಕಣ್ಣಿಟ್ಟಿದ್ದೇನೆ. ಹಾಗಾಗಿ ನಾನು ನನ್ನ ಆಟದ ಮೇಲೆ ಗಮನ ಹರಿಸಲು ಬಯಸುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ರೈತನ ಮಗ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಸಾಧನೆ

Source: publictv.in Source link