ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್​ ಪಂದ್ಯ; ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ ಪಕ್ಕಾ..!

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್​ ಪಂದ್ಯ; ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ ಪಕ್ಕಾ..!

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಿದ ಟೀಮ್ ಇಂಡಿಯಾ, ಹೆಡ್ಡಿಂಗ್ಲಿ​ ಟೆಸ್ಟ್ ಪಂದ್ಯಕ್ಕೆ​ ಸಜ್ಜಾಗ್ತಿದೆ. ಈ ಪಂದ್ಯದಲ್ಲಿ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯಲು ಮುಂದಾಗಿದೆ. ಹಾಗಾದ್ರೆ ಬೆಂಚ್ ಕಾಯ್ತಿರುವ ಅಶ್ವಿನ್​ ಕಣಕ್ಕಿಳೀತಾರಾ?

ಇದನ್ನೂ ಓದಿ:ಟೀಂ ಇಂಡಿಯಾ ಹೆಡ್​ಕೋಚ್​​ ರೇಸ್​​ನಲ್ಲಿ ಅಚ್ಚರಿ ಹೆಸರು; ಇವರು ಬ್ಯಾಟಿಂಗ್ ಮಾಂತ್ರಿಕ

ಐತಿಹಾಸಿಕ ಲಾರ್ಡ್ಸ್​ ಟೆಸ್ಟ್​ ಪಂದ್ಯ ಗೆದ್ದು ಬೀಗಿರುವ ಟೀಮ್ ಇಂಡಿಯಾದ ಕಣ್ಣೀಗ, ಲೀಡ್ಸ್ ಟೆಸ್ಟ್ ಪಂದ್ಯದ ಮೇಲೆ ಬಿದ್ದಿದೆ. ಈಗಾಗಲೇ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ, ಮುಂದಿನ ಪಂದ್ಯಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಪಂದ್ಯದಲ್ಲಿ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯಲು ಮುಂದಾಗಿದೆ.

ಇದನ್ನೂ ಓದಿ: ಶಾಸ್ತ್ರಿ ನಿರ್ಗಮನದಿಂದ ಕೊಹ್ಲಿ ನಾಯಕತ್ವಕ್ಕೆ ಸಂಚಕಾರ..! ನಾಯಕತ್ವದಿಂದ ಕೆಳಗಿಳಿಯುತ್ತಾರಾ ವಿರಾಟ್?

blank

ಜಡೇಜಾಗೆ ರೆಸ್ಟ್​.. ಅಶ್ವಿನ್​ಗೆ ಚಾನ್ಸ್​​..?
ಸದ್ಯ ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ, ಸರಣಿ ಕೈವಶಕ್ಕಾಗಿ 3ನೇ ಟೆಸ್ಟ್​ ಗೆಲುವು ಅನಿವಾರ್ಯವಾಗಿದೆ. ಇದರಿಂದ ಆಂಗ್ಲರ ಎದುರು ಪಟ್ಟು ಸಾಧಿಸಲು ಬದಲಾವಣೆಗೆ ಮುಂದಾಗ್ತಿದೆ. ಹೀಗಾಗಿ ಜಡೇಜಾಗೆ ರೆಸ್ಟ್ ನೀಡಿ, ಅಶ್ವಿನ್​ಗೆ ಚಾನ್ಸ್​ ನೀಡಲು ಮ್ಯಾನೇಜ್​ಮೆಂಟ್ ಚಿಂತನೆ ನಡೆಸ್ತಿದೆ.

ಇದನ್ನೂ ಓದಿ: IPL​ ಮರು ಆಯೋಜನೆಯಿಂದ ಬಿಸಿಸಿಐಗೆ ಟೆನ್ಶನ್.. ಫ್ರಾಂಚೈಸಿಗಳಿಗೆ ವಾರ್ನಿಂಗ್​​​!

ಯಾಕಂದ್ರೆ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಸ್ಪಿನ್​ ಬೌಲಿಂಗ್​ ವಿಭಾಗ, ಪರಿಣಾಮಕಾರಿಯಾಗಿಲ್ಲ. ಬ್ಯಾಟಿಂಗ್​ನಲ್ಲಿ ಅರ್ಧಶತಕ ಸಿಡಿಸಿದ್ದು​ ಬಿಟ್ರೆ, ಹೇಳಿಕೊಳ್ಳೋ ಪ್ರದರ್ಶನ ನೀಡಿಲ್ಲ. ಇದೇ ಕಾರಣಕ್ಕೆ ಆಫ್​ ಸ್ಪಿನ್ನರ್​​ ಅಶ್ವಿನ್​ರನ್ನ ತಂಡಕ್ಕೆ ಫಿಟ್ ಮಾಡಲು ಮ್ಯಾನೇಜ್​ಮೆಂಟ್ ಮುಂದಾಗಿದೆ.
ವಿದೇಶಿ ನೆಲದಲ್ಲಿ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್​ನಲ್ಲೂ ಅಶ್ವಿನ್, ಅತ್ಯುತ್ತಮ ದಾಖಲೆಯನ್ನ ಹೊಂದಿದ್ದಾರೆ. 3ನೇ ದಿನದಿಂದ ಪಿಚ್ ಸ್ಪಿನ್ನರ್​ಗಳಿಗೆ ನೆರವಾಗೋದ್ರಿಂದ, ಅಶ್ವಿನ್​ರನ್ನ ಆಡಿಸೋ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ನಾಲ್ವರು ಸ್ಪೆಷಲಿಸ್ಟ್​​​​​​​ ವೇಗಿಗಳ ಜೊತೆ ಆರ್​.ಅಶ್ವಿನ್ ಚೆಂಡು ಹಂಚಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಹಳೇ ಹೈದ್ರಾಬಾದ್​​ ಗಲ್ಲಿಯಲ್ಲಿ ವೇಗಿ ಮೊಹಮ್ಮದ್ ಸಿರಾಜ್​ ಕಟೌಟ್..!

ಒಟ್ನಲ್ಲಿ.. ಲೀಡ್ಸ್​ ಪಿಚ್ ವೇಗಿಗಳಿಗೆ ಸಹಕಾರಿ ಅನ್ನೋದು, ಹಿಂದಿನ ಅಂಕಿಅಂಶಗಳೂ ಹೇಳ್ತಿವೆ. ಹೀಗಾಗಿ ಕಳೆದೆರಡು ಪಂದ್ಯಗಳಲ್ಲಿ ಬೆಂಚ್​ ಕಾದಿದ್ದ ಅಶ್ವಿನ್, ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರಾ..? ಇಲ್ವಾ ಅನ್ನೋದನ್ನ ಕಾದುನೋಡಬೇಕಿದೆ.

ಇದನ್ನೂ ಓದಿ: ಲಂಡನ್​​ನಲ್ಲೇ ಬೀಡು ಬಿಟ್ಟ ಬಿಸಿಸಿಐ ಬಿಗ್​ಬಾಸ್​; ‘ಮಿಷನ್​ ವರ್ಲ್ಡ್​​​ಕಪ್​’ ಪ್ಲಾನ್..!

Source: newsfirstlive.com Source link