ಒಲಿಂಪಿಕ್ಸ್​ನಲ್ಲಿ 3 ಚಿನ್ನದ ಪದಕ ಗೆದ್ದವಳಿಗೆ ಅವಮಾನ- ‘ಆಕೆ’ಗಾಗಿ ಕ್ರಾಂತಿಕಾರಿ ಹೆಜ್ಜೆಯಿಟ್ಟ ದ.ಕೊರಿಯಾ ಮಹಿಳೆಯರು

ಒಲಿಂಪಿಕ್ಸ್​ನಲ್ಲಿ 3 ಚಿನ್ನದ ಪದಕ ಗೆದ್ದವಳಿಗೆ ಅವಮಾನ- ‘ಆಕೆ’ಗಾಗಿ ಕ್ರಾಂತಿಕಾರಿ ಹೆಜ್ಜೆಯಿಟ್ಟ ದ.ಕೊರಿಯಾ ಮಹಿಳೆಯರು

ಮೀ ಟೂ ಹ್ಯಾಷ್‌ ಟ್ಯಾಗ್‌ ಅಭಿಯಾನ ಇಡೀ ವಿಶ್ವದಲ್ಲಿಯೇ ಭಾರೀ ಸಂಚಲನ ಸೃಷ್ಟಿಸಿದ ಅಭಿಯಾನ. ಅದು, ಇನ್ನೂ ನಮ್ಮ ಮನಸ್ಸಿನಲ್ಲಿ ಮಾಸಿಲ್ಲ. ಈ ನಡುವೆ ದಕ್ಷಿಣ ಕೊರಿಯಾದಲ್ಲಿ ಶಾರ್ಟ್‌ ಹೇರ್‌ ಕಟ್‌ ಅಭಿಯಾನ ಆರಂಭವಾಗಿದೆ. ಆದು, ಏನಕ್ಕೆ ಅಂತ ಹೇಳಿದ್ರೆ ನೀವು ಹೆಮ್ಮೆ ಪಡ್ತೀರಿ. ಜಗತ್ತು ಹೀಗೂ ಇದೆಯಾ ಅಂತ ಅಚ್ಚರಿ ಪಡುತ್ತೀರಿ.

2018ರಲ್ಲಿ ಮೀ ಟೂ ಪ್ರಕರಣ ಯಾವ ರೀತಿಯಲ್ಲಿ ಸದ್ದು ಮಾಡಿತ್ತು ಅನ್ನೋದು ಎಲ್ಲರಿಗೂ ಗೊತ್ತು. ಎಷ್ಟೋ ಜನ ಹಿರೋಯಿನ್‌ಗಳು, ಮಾಡೆಲ್‌ಗಳು, ಮಹಿಳೆಯರು ತಮಗಾದ ಮೀ ಟೂ ಪ್ರಕರಣವನ್ನು ಬಹಿರಂಗವಾಗಿ ಬಿಚ್ಚಿಟ್ಟಿದ್ರು. ತದನಂತರ ಮೀ ಟೂ ಪ್ರಕರಣವನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಹ್ಯಾಷ್‌ ಟ್ಯಾಗ್‌ ಅಭಿಯಾನ ಆರಂಭವಾಗಿತ್ತು. ಅದು ಯಾವ ರೀತಿಯಲ್ಲಿ ಇತ್ತು ಅಂದ್ರೆ, ಪ್ರತಿ ದೇಶದ ಮೂಲೆ ಮೂಲೆಗೂ ಮೀ ಟೂ ಅಂದ್ರೆ ಏನು ಅಂತ ತಿಳಿಸಿ ಬಿಡ್ತು.

ಅಂತಹ ನೂರಾರು ಅಭಿಯಾನಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಲೇ ಇರುತ್ತವೆ. ಆದ್ರೆ, ದಕ್ಷಿಣ ಕೊರಿಯಾದಲ್ಲಿ ಆರಂಭವಾಗಿರೋ ಅಭಿಯಾನವೊಂದು ಭಾರೀ ಸದ್ದು ಮಾಡುತ್ತಿದೆ. ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಒಂದು ರೀತಿಯಲ್ಲಿ ಟ್ರೆಂಡ್‌ ಆಗಿ ಬದಲಾವಣೆ ಪಡೆಯುತ್ತಿದೆ. ಸಮಾಜ ಹೀಗೂ ಇದೆಯಾ ಅನ್ನೋ ಯೋಚನೆಗೆ ತಳ್ಳುತ್ತಿದೆ. ಅಷ್ಟಕ್ಕೂ ದಕ್ಷಿಣ ಕೊರಿಯಾದಲ್ಲಿ ಅಭಿಯಾನ ಯಾಕೆ ಆರಂಭವಾಯ್ತು ಅನ್ನೋ ರೋಚಕ ವಿಷಯವನ್ನು ಹೇಳ್ತೀವಿ. ಅದಕ್ಕೂ ಮುನ್ನ ಮಹಿಳೆಯರ ಶಾರ್ಟ್‌ ಹೇರ್‌ ಕಟ್‌ ಅಭಿಯಾನವನ್ನು ತೋರಿಸುತ್ತೇವೆ ನೋಡಿ.

ಮಹಿಳೆಯರಿಂದ ಶಾರ್ಟ್‌ ಹೇರ್‌ ಕಟ್‌ ಅಭಿಯಾನ
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್‌
ಹ್ಯಾಷ್‌ ಟ್ಯಾಗ್‌ ಬಳಕೆ ಮಾಡುತ್ತಿರೋ ಮಹಿಳೆಯರು

ದಕ್ಷಿಣ ಕೊರಿಯಾದ ಸುಂದರ ಯುವತಿಯರು. ಹಾಲಿನಲ್ಲಿ ಮಿಂದೆದ್ದಂತಿರೋ ಈ ಸುಂದರಿಯರು ಎಂಥವರ ಮನಸ್ಸನಾದ್ರೂ ಅರೆ ಕ್ಷಣ ಕದ್ದೆ ಬಿಡ್ತಾರೆ. ಉದ್ದನೆಯ ಕೂದಲು ಬಿಟ್ಟು ಇವರು ನಡೆಯುತ್ತಾ ಇರೋ ದೃಶ್ಯ ನೋಡಿದ್ರೆ, ಮಂತ್ರಮುಗ್ಧರಾಗಿ ನೋಡುತ್ತಲೇ ಇರಬೇಕು ಅನಿಸುತ್ತೆ. ಆದ್ರೆ, ಈ ಯುವತಿಯರ ಈಗಿನ ಸ್ಟೈಲ್‌ ಬದಲಾಗುತ್ತಿದೆ. ಅದೇನಂದ್ರೆ, ಅವರೆಲ್ಲ ಶಾರ್ಟ್‌ ಹೇರ್‌ ಕಟ್‌ ಮಾಡಿಸಿಕೊಳ್ಳುತ್ತಿದ್ದಾರೆ. ಹಾಗೇ ಹೇರ್‌ ಕಟ್‌ ಮಾಡಿಸಿಕೊಂಡ ನಂತರ ಫೋಟೋ ಶೂಟ್‌ ಮಾಡಿಸಿಕೊಳ್ಳುತ್ತಿದ್ದಾರೆ. ಇಲ್ಲವೇ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ women_shortcut_campaign ಹ್ಯಾಷ್‌ ಟ್ಯಾಗ್‌ ಬಳಸಿಕೊಂಡು ಅಪ್ಲೋಡ್‌ ಮಾಡುತ್ತಿದ್ದಾರೆ. ಮಹಿಳೆಯರ ಈ ಅಭಿಯಾನದ ಹಿಂದೆ ಇರೋದು ಒಬ್ಬ ಸಾಧಕಿಗೆ ಆದ ಅವಮಾನ. ಆಕೆಯ ಸಾಧನೆಗೆ ದಕ್ಷಿಣ ಕೊರಿಯಾ ದೇಶದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆ ಪಡಬೇಕಿತ್ತು. ದುರಾದೃಷ್ಟವಶಾತ್‌ ಆಕೆಯನ್ನು ಅವಮಾನಿಸೋ ಕೆಲಸ ಆಗಿ ಬಿಡ್ತು.

blank

ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನ ಗೆದ್ದ ಆನ್‌ ಸಾನ್‌
ಬಿಲ್ಲುಗಾರ್ತಿಯ ಗುರಿಗೆ ಜಗತ್ತೇ ಫಿದಾ

ಇದು, ಇತ್ತೀಚೆಗೆ ಅಷ್ಟೇ ಅಂತ್ಯವಾದ ರಿಯೋ ಒಲಿಂಪಿಕ್ಸ್‌ ವಿಡಿಯೋ. ದಕ್ಷಿಣ ಕೊರಿಯಾದ ಬಿಲ್ಲುಗಾರ್ತಿ ಆನ್‌ ಸಾನ್‌ ಅದೇಗೆ ಬಿಲ್ಲನ್ನು ಹೂಡಿ ಬಾಣ ಬಿಡುತ್ತಿದ್ದಾಳೆ ಅಲ್ವ? ಆಕೆಯ ಬಾಣದಿಂದ ಹೊರಡುವ ಬಿಲ್ಲುಗಳು ಪ್ರತಿ ಬಾರಿ 10ಕ್ಕೆ 10 ಅಂಕ ತರುತ್ತಿವೆ. ಹೀಗಾಗಿಯೇ ಟೋಕಿಯೋ ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಒಂದು ಚಿನ್ನ, ತಂಡ ವಿಭಾಗದಲ್ಲಿ ಒಂದು ಚಿನ್ನ, ಮಿಕ್ಸೆಡ್‌ ಇವೆಂಟ್‌ನಲ್ಲಿ ಒಂದು ಚಿನ್ನ ಬಂದಿದೆ. ವೈಯಕ್ತಿಕ ವಿಭಾಗದಲ್ಲಿ ಇವಳಿಗೆ ಯಾರೂ ಸರಿಸಾಟಿಯಾಗಿ ಸ್ಪರ್ಧೆ ನೀಡಲು ಸಾಧ್ಯವಾಗಿಲ್ಲ. ಇನ್ನು ತಂಡ ಮತ್ತು ಮಿಶ್ರ ತಂಡ ವಿಭಾಗದಲ್ಲಿ ದಕ್ಷಿಣ ಕೋರಿಯಾ ಚಿನ್ನ ಗೆಲ್ಲುವಲ್ಲಿ ಇವಳದ್ದೇ ಮಹತ್ವದ ಪಾತ್ರ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದಕ್ಷಿಣ ಕೊರಿಯಾಗೆ 6 ಚಿನ್ನ
ಮೂರು ಚಿನ್ನ ಗೆದ್ದಿದ್ದು ಆನ್‌ ಸಾನ್‌

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದಕ್ಷಿಣ ಕೊರಿಯಾದಿಂದ 237 ಕ್ರೀಡಾಪಟುಗಳು ಪಾಲ್ಗೊಂಡಿದ್ರು. ಬಹುತೇಕ ಎಲ್ಲಾ ಕ್ರೀಡೆಯಲ್ಲಿಯೂ ಪ್ರಬಲ ಸ್ಪರ್ಧೆ ನೀಡಿದ್ದಾರೆ. ಆದ್ರೆ, ಅಂತಿಮವಾಗಿ ದಕ್ಷಿಣ ಕೊರಿಯಾ ಗೆದ್ದಿರೋದು 20 ಪದಕ ಮಾತ್ರ. ಅದರಲ್ಲಿ 6 ಚಿನ್ನ, 4 ಬೆಳ್ಳಿ, 10 ಕಂಚಿನ ಪದಕ ಸೇರಿವೆ. ವಿಶೇಷ ಅಂದ್ರೆ ದಕ್ಷಿಣ ಕೊರಿಯಾ ಗೆದ್ದಿರೋ 6 ಚಿನ್ನದ ಪದಕದಲ್ಲಿ 3 ಪದಕ ಗೆದ್ದಿರೋದು ಬಿಲ್ಲುಗಾರ್ತಿ ಆನ್‌ ಸಾನ್‌ ಆಗಿದ್ದಾರೆ. ಇದೇ ಕಾರಣಕ್ಕೆ ದಕ್ಷಿಣ ಕೋರಿಯಾದ ಪ್ರತಿಯೊಬ್ಬ ಪ್ರಜೆಯೂ ಆಕೆಯ ಸಾಧನೆಗೆ ಗೌರವ ನೀಡಬೇಕಿತ್ತು. ಸಾಮಾಜಿಕ ಜಾಲತಾಣದಲ್ಲಿ ಅವಳ ಫೋಟೋ ಹಾಕಿಕೊಂಡು ಅಭಿಮಾನ ಮೆರೆಯಬೇಕಿತ್ತು. ಸಭೆ ಸಮಾರಂಭಗಳಿಗೆ ಕರೆದು ಗೌರವಿಸಬೇಕಿತ್ತು. ದುರಾದೃಷ್ಟವಶಾತ್‌ ಹಾಗೆ ಆಗಲೇ ಇಲ್ಲ. ಆಕೆ ಕಣ್ಣೀರು ಹಾಕೋವಷ್ಟು ಅವಮಾನ ಮಾಡಿ ಬಿಟ್ರು. ದೇಶದ ತೆರಿಗೆ ಹಣವನ್ನು ನಿನ್ನಂಥವಳಿಗೆ ವ್ಯರ್ಥವಾಗಿ ಉಪಯೋಗಿಸಲಾಗಿದೆ ಅಂತ ಹಂಗಿಸಿದ್ರು. ಅಷ್ಟಕ್ಕೂ ಜನ ಆಕೆಯನ್ನು ಅವಮಾನಿಸಿದ್ದು, ಹಂಗಿಸಿದ್ದು ಯಾಕೆ ಗೊತ್ತಾ?

ಆನ್‌ ಸಾನ್‌ ಶಾರ್ಟ್‌ ಹೇರ್‌ ಕಟ್‌ ಮೇಲೆ ಬಿತ್ತು ಕಣ್ಣು
ಹೇರ್‌ ಸ್ಟೈಲ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ

ಆನ್‌ ಸಾನ್‌ ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನ ಗೆದ್ದು ಸಾಧನೆ ಮಾಡಿದ್ದಾರೆ. ಆದ್ರೆ, ಆಕೆ ಶಾರ್ಟ್‌ ಹೇರ್‌ ಕಟ್‌ ಮಾಡಿಸಿಕೊಂಡಿದ್ದೇ ದಕ್ಷಿಣ ಕೊರಿಯಾದ ಸಂಪ್ರದಾಯಸ್ಥರ ಕಣ್ಣು ಬಿದ್ದಿದೆ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ದೇಶದ ಹಣವನ್ನು ನಿನ್ನಂಥವಳಿಗೆ ವ್ಯರ್ಥ ಮಾಡಲಾಗಿದೆ ಅಂತ ಹಂಗಿಸಿದ್ದಾರೆ, ಅವಮಾನಿಸಿದ್ದಾರೆ. ಆಕೆಯ ಸಾಧನೆಗೆ ಗೌರವಿಸಬೇಕಾದವರೆ ಅವಮಾನಿಸಿದ್ದಾರೆ. ಅಷ್ಟಕ್ಕೂ ಶಾರ್ಟ್‌ ಹೇರ್‌ ಕಟ್‌ ಮಾಡಿಸಿಕೊಂಡ್ರೆ ಸಮಸ್ಯೆ ಏನು ಅನ್ನೋ ಭಾವನೆ ಬರುತ್ತೆ ಅಲ್ವ? ನಮ್ಮ ದೇಶದಲ್ಲಿ ಅದೆಷ್ಟೋ ಮಹಿಳೆಯರು ಶಾರ್ಟ್‌ ಹೇರ್‌ ಕಟ್‌ ಮಾಡಿಸಿಕೊಂಡು ಇರ್ತಾರೆ. ಅದರಲ್ಲೇನು ವಿಶೇಷ ಅನಿಸಬಹುದು. ಆದ್ರೆ, ದಕ್ಷಿಣ ಕೊರಿಯಾದ ಸಂಪ್ರದಾಯಸ್ಥರ ಮನಸ್ಸಿನಲ್ಲಿ ಅದೇನೋ ಭಾವನೆ ಇದೆ.

blank

ಶಾರ್ಟ್‌ ಹೇರ್‌ ಕಟ್‌ ಇದ್ರೆ ಸಂಪ್ರದಾಯಸ್ಥರ ಟೀಕೆ ಏಕೆ?
ಶಾರ್ಟ್‌ ಹೇರ್‌ ಕಟ್‌ ಮಾಡಿಸಿಕೊಂಡ್ರೆ ಮಹಿಳಾ ವಾದಿ ಅಂತೆ
ಶಾರ್ಟ್‌ ಹೇರ್‌ ಕಟ್‌ ಮಾಡಿಸಿಕೊಂಡ್ರೆ ಪುರುಷ ವಿರೋಧಿ ಅಂತೆ

ಸಂಪ್ರದಾಯಸ್ಥರ ನಡೆಯೇ ಹಾಗೆ, ಅವರು ಯಾವುದೇ ದೇಶದವರಾಗಿರಲಿ, ಅವರ ಮನಸ್ಸಲ್ಲಿ ಅದೇನು ಸಂಪ್ರದಾಯ ಭಾವನೆ ಇರುತ್ತೋ ಸಮಾಜವನ್ನು ಅದೇ ಭಾವನೆಯಲ್ಲಿಯೇ ನೋಡ್ತಾರೆ. ಒಮ್ಮೆ ತಾವು ನಂಬಿರೋ ಸಂಪ್ರದಾಯವನ್ನು ಜನ ಪಾಲಿಸುತ್ತಿಲ್ಲ ಅಂದ್ರೆ, ಕ್ರುದ್ಧರಾಗಿ ಬಿಡ್ತಾರೆ. ಸಮಯ ಸಿಕ್ಕಾಗೆಲ್ಲ ವ್ಯಂಗ್ಯವಾಡ್ತಾರೆ. ದಕ್ಷಿಣ ಕೊರಿಯಾದಲ್ಲಿ ಆಗಿದ್ದು ಅದೇ ನೋಡಿ. ದಕ್ಷಿಣ ಕೊರಿಯಾ ಜನ ಶಾರ್ಟ್‌ ಹೇರ್‌ ಕಟ್‌ ಮಾಡಿಸಿಕೊಳ್ಳುವ ಮಹಿಳೆಯರನ್ನು ಕೆಟ್ಟದಾಗಿ ನೋಡ್ತಾರೆ. ಅವರ ಪ್ರಕಾರ ಶಾರ್ಟ್‌ ಹೇರ್‌ ಕಟ್‌ ಮಾಡಿಸಿಕೊಳ್ಳುವವರು ಮಹಿಳಾ ವಾದಿಗಳಂತೆ. ಅಷ್ಟೇ ಅಲ್ಲ, ಅಂತಹವರು ಪುರುಷ ವಿರೋಧಿಗಳು ಕೂಡ ಹೌದಂತೆ. ಇದೇ ಕಾರಣಕ್ಕೆ ಆನ್‌ ಸಾನ್‌ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಂಪ್ರದಾಯಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ, ಇದೀಗ ದಕ್ಷಿಣ ಕೊರಿಯಾ ಮಹಿಳೆಯರು ತಿರುಗಿ ಬಿದ್ದಿದ್ದಾರೆ.

ಆನ್‌ ಸಾನ್‌ ಬೆಂಬಲಕ್ಕೆ ನಿಂತ ಮಹಿಳೆಯರು
ಸಂಪ್ರದಾಯಸ್ಥರಿಗೆ ಭರ್ಜರಿ ತಿರುಗೇಟು

ಇಡೀ ಪ್ರಪಂಚವೇ ತಿರುಗಿ ನೋಡುವಂತೆ ಸಾಧನೆ ಮಾಡಿದ್ರೂ ಬಿಲ್ಲುಗಾರ್ತಿ ಆನ್‌ ಸಾನ್‌ ಅವಮಾನ ಎದುರಿಸಬೇಕಾಯ್ತು. ಸಾಧಕಿಗೆ ಆದ ಅವಮಾನವನ್ನು ದಕ್ಷಿಣ ಕೋರಿಯಾದ ಮಹಿಳೆಯರು ಮೂಕವಿಸ್ಮಿತರಾಗಿ ನೋಡಲಿಲ್ಲ. ತಾನಾಯಿತು ತನ್ನ ಕೆಲಸ ಆಯಿತು ಅಂತ ಸುಮ್ಮನೇ ಕುಳಿತುಕೊಳ್ಳಲಿಲ್ಲ. ಈ ಅನಿಷ್ಠ ಭಾವನೆ ವಿರುದ್ಧ ಧ್ವನಿ ಎತ್ತಬೇಕು ಅಂತ ನಿರ್ಧರಿಸಿದ್ರು. ಅದೇ ಕಾರಣಕ್ಕೆ ಮಹಿಳೆಯರು ಶಾರ್ಟ್‌ ಹೇರ್‌ ಕಟ್‌ ಮಾಡಿಸಿಕೊಳ್ಳುತ್ತಿದ್ದಾರೆ. ಹಾಗೇ ಶಾರ್ಟ್‌ ಹೇರ್‌ ಕಟ್‌ ಆದ ಮೇಲೆ ಸೆಲ್ಫಿ ತೆಗೆದುಕೊಂಡು women_shortcut_campaign ಹ್ಯಾಷ್‌ ಟ್ಯಾಗ್‌ ಬಳಿಸಿಕೊಂಡು ಫೋಟೋ ಅಪ್ಲೋಡ್‌ ಮಾಡುತ್ತಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ಶಾರ್ಟ್‌ ಹೇರ್‌ ಕಟ್‌ ಅಭಿಯಾನ
ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದ ಹ್ಯಾಷ್‌ ಟ್ಯಾಗ್

ಯಾವಾಗ ಅನ್‌ ಸಾನ್‌ಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ ಆಯ್ತೋ ಆವಾಗಲೇ ಸಮಾಜ ಎದ್ದು ನಿಂತಿತ್ತು. ದಕ್ಷಿಣ ಕೊರಿಯಾದ್ಯಂತ ಈ ಸುದ್ದಿ ವ್ಯಾಪಕವಾಗಿ ಹಬ್ಬಿತ್ತು. ಇದೇ ಕಾರಣಕ್ಕೆ ದಕ್ಷಿಣ ಕೊರಿಯಾದ ಯುವತಿರು ಶಾರ್ಟ್‌ ಹೇರ್‌ ಕಟ್‌ ಅಭಿಯಾನ ಆರಂಭಿಸಿದ್ರು. ಇದೀಗ ಜಗತ್ತಿನಾದ್ಯಂತ ಇದು ಸುದ್ದಿಯಾಗುತ್ತಿದೆ. ಶಾರ್ಟ್‌ ಹೇರ್‌ ಕಟ್‌ ಅಭಿಯಾನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಾರ್ಟ್‌ ಹೇರ್‌ ಕಟ್‌ ಬಗ್ಗೆ ಇರೋ ತಪ್ಪು ಕಲ್ಪನೆ ಮರೆಯಾಗಲಿ ಅಂತ ಧ್ವನಿ ಎತ್ತುತ್ತಿದ್ದಾರೆ.

blank

ಶಾರ್ಟ್‌ ಹೇರ್‌ ಕಟ್‌ ಈಗ ಟ್ರೆಂಡ್‌ ಆಯ್ತು

ದಕ್ಷಿಣ ಕೊರಿಯಾದ ಮಹಿಳೆಯರು ಶಾರ್ಟ್‌ ಹೇರ್‌ ಕಟ್‌ ಅಭಿಯಾನ ಆರಂಭಿಸಿದಾಗ ಆರಂಭದಲ್ಲಿ ಅಷ್ಟೇನು ಪ್ರತಿಕ್ರಿಯೆ ಇರಲಿಲ್ಲ. ಆದ್ರೆ, ದಿನ ಕಳೆದಂತೆ ಅಭಿಯಾನ ಜೋರಾಯಿತು. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳು ಹೆಚ್ಚಾದವು. ಇದರ ಪರಿಣಾಮ ಈಗ ದಕ್ಷಿಣ ಕೊರಿಯಾದಲ್ಲಿ ಶಾರ್ಟ್‌ ಹೇರ್‌ ಕಟ್‌ ಮಾಡಿಸಿಕೊಳ್ಳುವುದೇ ಟ್ರೆಂಡ್‌ ಆಗಿ ಬಿಟ್ಟಿದೆ.

ದಕ್ಷಿಣ ಕೊರಿಯಾಗೆ ಮೂರು ಚಿನ್ನ ಗೆದ್ದು ಹೆಮ್ಮೆಪಡುವಂತೆ ಮಾಡಿದವಳು ಆನ್‌ ಸಾನ್‌. ಆದ್ರೆ, ಆಕೆ ತುಂಡುಕೂದಲು ಬಿಟ್ಟಿದ್ದಾಳೆ ಅಂತ ಅವಮಾನಿಸಲಾಗಿದೆ. ಇದೀಗ ಮಹಿಳೆಯರೇ ಸಂಪ್ರದಾಯಸ್ಥರಿಗೆ ತಿರುಗೇಟು ನೀಡುತ್ತಿದ್ದಾರೆ.

 

Source: newsfirstlive.com Source link