ಜಿಮ್​​ನಲ್ಲಿ ಒಟ್ಟಿಗೇ ವರ್ಕೌಟ್​ ಮಾಡಿದ ರಶ್ಮಿಕಾ ಮಂದಣ್ಣ, ದೇವರಕೊಂಡ

ಜಿಮ್​​ನಲ್ಲಿ ಒಟ್ಟಿಗೇ ವರ್ಕೌಟ್​ ಮಾಡಿದ ರಶ್ಮಿಕಾ ಮಂದಣ್ಣ, ದೇವರಕೊಂಡ

ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಜೋಡಿ ಟಾಲಿವುಡ್​ ಅಂಗಳದಲ್ಲಿ ಈಗಾಗಲೇ ಸಖತ್​ ಫೇರ್ ಎನಿಸಿಕೊಂಡಿದೆ. ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾಗಳ ಬಳಿಕ ಈ ಜೋಡಿ ಸಿನಿ ಪ್ರೇಕ್ಷಕರ ಹೃದಯವನ್ನ ಗೆದ್ದಿತ್ತು.

ಇನ್ನು ಇಬ್ಬರ ಸಂಬಂಧದ ಬಗ್ಗೆ ಅಂತೆ ಕಂತೆಗಳು ಆಗಾಗ ಕೇಳೆ ಬರುತ್ತಲೇ ಇರುತ್ತೆ. ಸದ್ಯ ಇಬ್ಬರು ಈಗ ಒಟ್ಟಿಗೆ ಸಿನಿಮಾ ಮಾಡದೆ ಇದ್ದರೂ ಕೂಡ ವಿಜಯ್​, ರಶ್ಮಿಕಾ ಅಗಾಗ ಭೇಟಿಯಾಗಿ ಸದಾ ಸುದ್ದಿಯಾಗುತ್ತಾರೆ. ಇದೀಗ ರಶ್ಮಿಕಾ ಮತ್ತು ವಿಜಯ್​ ಮತ್ತೆ ಒಟ್ಟಿಗೆ ಕಾಣಿಸಿಕೊಂಡು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: ಸುಶಾಂತ್​ ಸಿಂಗ್ ಅಭಿಮಾನಿಗಳಿಗೆ ಶಾಕ್..​​ ಫೇಸ್​ಬುಕ್​ ಪ್ರೊಫೈಲ್ ಫೋಟೋ ಆಯ್ತು ಚೇಂಜ್

blank

ಹೌದು ವಿಜಯ್​ ಮತ್ತು ರಶ್ಮಿಕಾ ಇಬ್ಬರು ಒಟ್ಟಿಗೆ ಒಂದೇ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಕುಲದೀಪ್​ ಸೇತಿ ಎಂಬುವವರು ರಶ್ಮಿಕಾ ಮತ್ತು ವಿಜಯ್​ ಇಬ್ಬರಿಗೂ ಫಿಟ್​ನೇಸ್​ ಟ್ರೆನರ್​ ಆಗಿದ್ದಾರೆ. ನಿನ್ನೆಯಷ್ಟೇ ರಶ್ಮಿಕಾ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ತಾನು ಮತ್ತು ವಿಜಯ್​ ದೇವರಕೊಂಡ ಒಟ್ಟಿಗೆ ಜಿಮ್​ನಲ್ಲಿ ವರ್ಕ್​ಔಟ್​ ಮಾಡುವ ಫೋಟೋವೊಂದನ್ನ ಶೇರ್​ ಮಾಡಿಕೊಂಡು This is us just being us ಅಂತಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅದ್ಧೂರಿ ಸೆಟ್​ನಲ್ಲಿ ಮಿರ ಮಿರ ಮಿಂಚ್ತಿದ್ದಾನೆ ಸ್ಯಾಂಡಲ್​ವುಡ್​ನ ’ರಂಗನಾಯಕ’

ರಶ್ಮಿಕಾ ಮತ್ತು ವಿಜಯ್ ನಡುವೆ ಏನಿದ್ಯೋ ಎನಿಲ್ಲವೋ ಗೊತ್ತಿಲ್ಲ.. ಆದ್ರೆ ಈ ಜೋಡಿ ಮೇಲೆ ಸಿನಿ ರಸಿಕರ ಕ್ರೇಜ್ ಇದೆ. ಈ ಇಬ್ಬರು ಏನೇ ಮಾಡಿದ್ದರೂ ನೋಡೇ ನೋಡುತ್ತಾರೆ. ಈ ಜೋಡಿ ಮತ್ತೆ ಯಾವಾಗ ಸಿನಿಮಾಗಳಲ್ಲಿ ಮೋಡಿ ಮಾಡುತ್ತಾರೆ ಅಂತಾ ರಶ್ಮಿಕಾ ಮತ್ತು ವಿಜಯ್​ ಫ್ಯಾನ್ಸ್​ ಕಾತುರದಿಂದ ಕಾದು ಕುಳಿತಿದ್ದಾರೆ

ರಶ್ಮಿಕಾ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಟಾಲಿವುಡ್​ ಬಾಲಿವುಡ್​ ಎರಡು ಕಡೆ ರಶ್ಮಿಕಾ ಫುಲ್​ ಬ್ಯುಸಿಯಾಗಿದ್ರೆ, ವಿಜಯ್​ ತಮ್ಮ ಲೈಗರ್​ ಚಿತ್ರದ ರಿಲೀಸ್​ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ​ಟೈಗರ್​ ಶ್ರಾಫ್ ನಟನೆಯ ‘ಗಣಪತ್’​ ಚಿತ್ರ ರಿಲೀಸ್​ಗೆ ಮುಹೂರ್ತ ಫಿಕ್ಸ್​

Source: newsfirstlive.com Source link