ಬಟ್ಟೆ, ಮೊಬೈಲ್ ಅಂಗಡಿಗಳಿಗೆ ನುಗ್ಗಿದ ಮಳೆ ನೀರು

ಮಂಡ್ಯ: ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಬಟ್ಟೆ ಅಂಗಡಿಗಳಿಗೆ ನೀರು ನುಗ್ಗಿದ ಪರಿಣಾಮ ಅಂಗಡಿಯಲ್ಲಿದ್ದ ಬಟ್ಟೆಗಳು ನೀರಿನಲ್ಲಿ ಮುಳುಗಿ ನೆನೆದಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.

ಶನಿವಾರ ಸಂಜೆಯಿಂದ ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ತಾಲೂಕಿನ ಹಲವು ಭಾಗದಲ್ಲಿ ಮಳೆ ಸುರಿದಿದೆ. ಹೀಗಾಗಿ ಮಳೆ ಹೆಚ್ಚಾದ ಕಾರಣ ಕೆ.ಆರ್.ಪೇಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ 10ಕ್ಕೂ ಹೆಚ್ಚು ಬಟ್ಟೆ ಅಂಗಡಿಗಳಿಗೆ ನೀರು ನುಗ್ಗಿದೆ. ಈ ವೇಳೆ ಬಟ್ಟೆ ಅಂಗಡಿಯಲ್ಲಿದ್ದ ಬಟ್ಟೆಗಳು ನೀರಿನಲ್ಲಿ ನೆನೆದು ಹೋಗಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಧಾರಾಕಾರ ಮಳೆ- ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ

ನೆನೆದಿರುವ ಬಟ್ಟೆಗಳನ್ನು ಅಂಗಡಿಯ ಮಾಲೀಕರು ಖಾಸಗಿ ಸಮುದಾಯ ಭವನದಲ್ಲಿ ಒಣ ಹಾಕಿದ್ದಾರೆ. ಕೇವಲ ಬಟ್ಟೆ ಅಂಗಡಿಗಳಿಗಲ್ಲದೇ ಮೊಬೈಲ್ ಅಂಗಡಿಗಳಿಗೂ ಸಹ ನೀರು ನುಗ್ಗಿದೆ. ಇದರಿಂದ ಅಪಾರ ಪ್ರಮಾಣ ನಷ್ಟ ಉಂಟಾಗಿದೆ.

Source: publictv.in Source link