ಭಾರತಕ್ಕೆ ಬಂದಿಳಿದ್ರು 168 ಮಂದಿ- ಬರುತ್ತಲೇ ‘ಭಯಾನಕ ಅನುಭವ’ ಹಂಚಿಕೊಂಡು ಕಣ್ಣೀರಿಟ್ಟ ಆಫ್ಘಾನಿಯರು

ಭಾರತಕ್ಕೆ ಬಂದಿಳಿದ್ರು 168 ಮಂದಿ- ಬರುತ್ತಲೇ ‘ಭಯಾನಕ ಅನುಭವ’ ಹಂಚಿಕೊಂಡು ಕಣ್ಣೀರಿಟ್ಟ ಆಫ್ಘಾನಿಯರು

ನವದೆಹಲಿ: ಆಫ್ಘಾನ್​​ನಲ್ಲಿ ಸಿಲುಕಿರುವ ಭಾರತೀಯರನ್ನ ತಾಯ್ನಾಡಿಗೆ ಕರೆತರುತ್ತಿರುವ ಪ್ರಕ್ರಿಯೆ ಜೋರಾಗಿ ನಡೆಯುತ್ತಿದ್ದು, ಇಂದು ಇಂಡಿಯನ್ ಏರ್​ಫೋರ್ಸ್​ 107 ಭಾರತೀಯರನ್ನ ಸೇರಿ ಒಟ್ಟು 168 ಮಂದಿಯನ್ನ ಕರೆದುಕೊಂಡು ಬಂದಿದೆ. ಇಂದು ಬೆಳಗ್ಗೆ ದೆಹಲಿಯ ಸೇನಾ ವಾಯುನೆಲೆಗೆ ಬಂದು ಲ್ಯಾಂಡ್ ಆಗಿದ್ದಾರೆ ಅಂತಾ ವಿದೇಶಾಂಗ ಇಲಾಖೆ ತಿಳಿಸಿದೆ.

ಇನ್ನು ಆಫ್ಘಾನ್​ನಿಂದ ಬಂದಿಳಿಯುತ್ತಿದ್ದ ಎಲ್ಲಾ ಪ್ರಯಾಣಿಕರಿಗೂ ಆರ್​ಟಿಪಿಸಿಆರ್ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಇನ್ನು ದೆಹಲಿಗೆ ಬರುತ್ತಿದ್ದಂತೆ ಬಹುತೇಕರ ಕಣ್ಣಲ್ಲಿ ನೀರು ತುಂಬಿತ್ತು. ಆಫ್ಘಾನ್​ ಸಿಖ್ ನಾಗರಿಕರೊಬ್ಬರು ಮಾತನಾಡಿ, ನಮ್ಮ ದೇಶದ ಪರಿಸ್ಥಿತಿ ಹದಗೆಡುತ್ತಿದೆ. ಹಾಗಾಗಿ ನಾನು ನನ್ನ ಮಗಳು ಮತ್ತು ಇಬ್ಬರು ಮೊಮ್ಮಕ್ಕಳೊಂದಿಗೆ ಇಲ್ಲಿಗೆ ಬಂದೆ. ನಮ್ಮ ಭಾರತೀಯ ಸಹೋದರ, ಸಹೋದರಿಯರು ನಮ್ಮ ರಕ್ಷಣೆಗೆ ಬಂದರು. ತಾಲಿಬಾನಿಗಳು ನನ್ನ ಮನೆಯನ್ನು ಸುಟ್ಟು ಹಾಕಿದರು. ನನಗೆ ಸಹಾಯ ಮಾಡಿದ ಭಾರತಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.

ಇನ್ನು ಕಾಬೂಲ್‌ನಿಂದ ಭಾರತಕ್ಕೆ ಬರುತ್ತಿದ್ದಂತೆ ಆಫ್ಘಾನ್ ಸಂಸದ ನರೇಂದರ್ ಸಿಂಗ್ ಖಾಲ್ಸಾ ಗಳಗಳನೆ ಕಣ್ಣೀರು ಇಟ್ಟರು. ನನಗೆ ಅಳು ಬರುತ್ತಿದೆ. ಕಳೆದ 20 ವರ್ಷಗಳಿಂದ ಕಟ್ಟಿದ ಆಫ್ಘಾನ ಸಾಮ್ರಾಜ್ಯ ಮುರಿದು ಬಿದ್ದಿದೆ. ಈಗ ಅಲ್ಲಿ ಎಲ್ಲವೂ ಶೂನ್ಯವಾಗಿದೆ.

Source: newsfirstlive.com Source link