ಇನ್ಮುಂದೆ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾಗಳಿಗೆ ಬಹಿಷ್ಕಾರ

ಹೈದರಾಬಾದ್: ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾಗಳನ್ನು ಬಹಿಷ್ಕಾರ ಹಾಕಲು ತೆಲುಗು ಚಿತ್ರಮಂದಿರದ ಮಾಲೀಕರು ನಿರ್ಧರಿಸಿದ್ದಾರೆ.

ತೆಲುಗಿನಲ್ಲಿ ತಮ್ಮ ಆ್ಯಕ್ಟಿಂಗ್ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟ ಎಂದರೆ ನಾನಿ. ಸೈಲೆಂಟ್ ಆಗಿ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿದ್ದ ನಾನಿಗೆ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟ ಸಿನಿಮಾ ಈಗ. ಇದಾದ ನಂತರ ನಾನಿ ಸಿನಿಮಾಗಳೆಲ್ಲಾವೂ ಬಾಕ್ಸ್ ಆಫೀಸ್‍ನಲ್ಲಿ ಭಾರೀ ಸದ್ದು ಮಾಡತೊಡಗಿತು. ಸದ್ಯ ಟಾಲಿವುಡ್‍ನ ಹಲವು ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ನಾನಿ ಸಿನಿಮಾವನ್ನು ಇನ್ನು ಮುಂದೆ ಥಿಯೇಟರ್‍ನಲ್ಲಿ ಪ್ರದರ್ಶನ ಮಾಡುವುದಿಲ್ಲ ಎಂದು ಚಿತ್ರಮಂದಿರದ ಮಾಲೀಕರು ಪಟ್ಟು ಹಿಡಿದು ಕುಳಿತಿದ್ದಾರೆ.

ಹೌದು, ಕೆಲವು ತಿಂಗಳ ಹಿಂದೆ ನಾನಿ ಅಭಿನಯದ ‘ವಿ’ ಸಿನಿಮಾವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ ನಾನಿಯ ಟಕ್ ಜಗದೀಶ್ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಗೊಳ್ಳುತ್ತಿದೆ. ಹೀಗಾಗಿ ಆಕ್ರೋಶಗೊಂಡ ಚಿತ್ರಮಂದಿರ ಮಾಲೀಕರು ಇನ್ನು ಮುಂದೆ ನಾನಿ ಸಿನಿಮಾಗಳನ್ನು ಆಂಧ್ರ ಹಾಗೂ ತೆಲಂಗಾಣದಲ್ಲಿ ಪ್ರದರ್ಶನ ಮಾಡುವುದಿಲ್ಲ ಎಂದು ಸಾಮೂಹಿಕವಾಗಿ ಬಹಿಷ್ಕಾರ ಹಾಕಿದ್ದಾರೆ. ಇದನ್ನೂ ಓದಿ:ವೈರಲ್ ಆಯ್ತು ಚಿನ್ನದ ಹುಡುಗನ ಮೂರು ವರ್ಷದ ಹಳೆಯ ವೀಡಿಯೋ

blank

ಅಕ್ಟೋಬರ್ 10ರವರೆಗೂ ಕಾದು ನೋಡಿ ನಂತ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿಲ್ಲ ಎಂದರೆ ಓಟಿಟಿಯಲ್ಲಿ ನಿಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಿಕೊಳ್ಳಿ ಯಾವುದೇ ತೊಂದರೆ ಇಲ್ಲ ಎಂದು ನಿರ್ಮಾಪಕರಿಗೆ ಪತ್ರದ ಮೂಲಕ ತಿಳಿಸಿದ್ದೇವು. ಅಲ್ಲದೇ ದಶಕಗಳ ಕಾಲ ನಾವು ನಿರ್ಮಾಪಕರುಗಳಿಗೆ ಲಾಭ ಮಾಡಿಕೊಡುತ್ತಾ ಬಂದಿದ್ದೇವೆ. ಹೀಗಿದ್ದರೂ ಕೆಲ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಓಟಿಟಿಗೆ ನೀಡಿದ್ದಾರೆ ಎಂದು ಚಿತ್ರ ಪ್ರದರ್ಶಕರ ಪ್ರಮುಖರೊಬ್ಬರು ಆರೋಪಿಸಿದ್ದಾರೆ.

blank

ಈ ಹಿಂದೆ ಸಂದರ್ಶನವೊಂದರಲ್ಲಿ ನಾನಿ ಕೂಡ ವಿ ಸಿನಿಮಾವನ್ನು ನಾನು ಓಟಿಟಿಯಲ್ಲಿ ಬಿಡುಗಡೆ ಮಾಡಿ ತಪ್ಪು ಮಾಡಿದ್ದೆ ಎಂದಿದ್ದರು. ಆದರೆ ಇದೀಗ ನಾನಿ ಅಭಿನಯದ ಹೊಸ ಸಿನಿಮಾ ಮತ್ತೆ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಸದ್ಯ ಈ ವಿಚಾರವಾಗಿ ಮಾತನಾಡಿದ ಚಿತ್ರ ಮಂದಿರ ಮಾಲೀಕರ ಸಂಘದ ಪ್ರಮುಖ ಮುಖಂಡ ಶ್ರೀಹರಿ, ನಾನಿ ಹೆದರು ಪುಕ್ಕಲ. ಮಾತಿನ ಮೇಲೆ ನಿಗಾ ಇಲ್ಲದ ವ್ಯಕ್ತಿ. ಈ ಮುನ್ನ ತಮ್ಮ ಸಿನಿಮಾಗಳನ್ನು ಚಿತ್ರಮಂದಿರಗಳಿಗರೆ ಕೊಡುತ್ತೇನೆ ಎಂದವರು ಇದೀಗ ಓಟಿಟಿಗೆ ಕೊಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಬದಲಾಯ್ತು ಸುಶಾಂತ್ ಎಫ್‍ಬಿ ಫೋಟೋ- ಸ್ವರ್ಗದಲ್ಲಿ ನೆಟ್‍ವರ್ಕ್ ಸಿಗುತ್ತಾ ಅಂದ್ರು ಫ್ಯಾನ್ಸ್

Source: publictv.in Source link