ಜಾನಪದ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಶತಾಯುಷಿ ಗುರುವ ಕೊರಗ ನಿಧನ

ಜಾನಪದ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಶತಾಯುಷಿ ಗುರುವ ಕೊರಗ ನಿಧನ

ಉಡುಪಿ: ಹಿರಿಯ ಜನಪದ ಕಲಾವಿದ ಗುರುವ ಕೊರಗ ಇಂದು ನಿಧನರಾಗಿದ್ದಾರೆ. ಸಾಂಪ್ರದಾಯಿಕ ಡೋಲು ವಾದನದಲ್ಲಿ ಅಗ್ರಗಣ್ಯರೆನಿಸಿದ್ದ ಗುರುವ ಕೊರಗ ವಯೋ ಸಹಜ ಖಾಯಿಲೆಯಿಂದ ಮೃತರಾಗಿದ್ದಾರೆ.

ಉಡುಪಿ ತಾಲೂಕಿನ ಹಿರಿಯಡ್ಕ ಸಮೀಪದ ಗುಡ್ಡೆ ಅಂಗಡಿಯ ಬಲ್ಕೋಡಿಯ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 105 ವರ್ಷಗಳಾಗಿತ್ತು. ಅವರು ರಾಜ್ಯೋತ್ಸವ, ಜನಪದ ಶ್ರೀ, ತುಳು ಅಕಾಡೆಮಿ ಪ್ರಶಸ್ತಿಯನ್ನ ಪಡೆದಿದ್ದರು. ಅವರು ಇತ್ತೀಚೆಗಿನ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು.

blank

ಇವರು ತಮ್ಮ 12ನೇ ವಯಸ್ಸಿನಿಂದಲೇ ಡೋಲು ಬಾರಿಸುತ್ತ ಜನರ ಗಮನ ಸೆಳೆದಿದ್ದರು. ಶತಾಯುಷಿಯಾಗಿದ್ದರೂ ಡೋಲು ಬಾರಿಸುವುದರಲ್ಲಿ ಇದ್ದ ಉತ್ಸಾಹ ಕುಂದಿರಲಿಲ್ಲ. ಇವರ ಸಾಧನೆಗೆ 2017ರಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿಯನ್ನ ನೀಡಿ ಗೌರವಿಸಿತ್ತು.

Source: newsfirstlive.com Source link