ಅಫ್ಘಾನ್​ನಿಂದ ಬಂದಿಳಿಯುತ್ತಿದ್ದಂತೆಯೇ ಉಚಿತ ವೈಲ್ಡ್​ ಪೋಲಿಯೋ ವ್ಯಾಕ್ಸಿನೇಷನ್

ಅಫ್ಘಾನ್​ನಿಂದ ಬಂದಿಳಿಯುತ್ತಿದ್ದಂತೆಯೇ ಉಚಿತ ವೈಲ್ಡ್​ ಪೋಲಿಯೋ ವ್ಯಾಕ್ಸಿನೇಷನ್

ನವದೆಹಲಿ: ಆಫ್ಘಾನ್​​ನಲ್ಲಿ ಸಿಲುಕಿರುವ ಭಾರತೀಯರನ್ನ ತಾಯ್ನಾಡಿಗೆ ಕರೆತರುತ್ತಿರುವ ಪ್ರಕ್ರಿಯೆ ಜೋರಾಗಿ ನಡೆಯುತ್ತಿದ್ದು, ಇಂದು ಇಂಡಿಯನ್ ಏರ್​ಫೋರ್ಸ್​ 107 ಭಾರತೀಯರನ್ನ ಸೇರಿ ಒಟ್ಟು 168 ಮಂದಿಯನ್ನ ಕರೆದುಕೊಂಡು ಬಂದಿದೆ. ಇಂದು ಬೆಳಗ್ಗೆ ದೆಹಲಿಯ ಸೇನಾ ವಾಯುನೆಲೆಗೆ ಬಂದು ಲ್ಯಾಂಡ್ ಆಗಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

blank

ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಫ್ಘಾನ್​ನ ಭಾರತೀಯ ಮೂಲದ ಸಂಸದ ನರೇಂದ್ರ ಸಿಂಗ್​ ಕಣ್ಣಿರಾಗಿದ್ದು, ನಾವು 20 ವರ್ಷಗಳಿಂದ ಕಟ್ಟಿ ಬೆಳೆಸಿದ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ನಿರ್ನಾಮ ಮಾಡಿದ್ದಾರೆ. ಈಗ ಅಲ್ಲಿ ಏನು ಉಳಿದಿಲ್ಲ, ನಾವು ಅಲ್ಲಿ ಸಾವಿನೊಂದಿಗೆ ಹೋರಾಡಿದ್ದೇವೆ, ನಮ್ಮನ್ನು ರಕ್ಷಿಸಿದ ಭಾರತಕ್ಕೆ ನಾವು ಚಿರಋಣಿಯಾಗಿದ್ದೇವೆ ಎಂದು ಭಾವುಕರಾಗಿದ್ದು ಉಳಿದ ಭಾರತೀಯರನ್ನು ರಕ್ಷಿಸುವಂತೆ ಮಾನವಿ ಮಾಡಿದರು.

ಇನ್ನು ಆಫ್ಘಾನ್​ನಿಂದ ಬಂದಿಳಿದ ಎಲ್ಲಾ ಪ್ರಯಾಣಿಕರಿಗೂ ಆರ್​ಟಿಪಿಸಿಆರ್ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಇನ್ನು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈಲ್ಡ್ ಪೋಲಿಯೊ ವೈರಸ್ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಹೋರಾಡಲು ಅಫ್ಘಾನಿಸ್ತಾನದಿಂದ ಮರಳಿದವರಿಗೆ ಉಚಿತ ಪೋಲಿಯೋ ಲಸಿಕೆ – ಒಪಿವಿ ಮತ್ತು ಎಫ್‌ಐಪಿವಿ ಲಸಿಕೆ ಹಾಕಲು ಆರಂಭಿಸಲಾಗಿದೆ ಅಂತಾ ಕೇಂದ್ರ ಆರೋಗ್ಯ ಸಚಿವ ಮನ್ಷುಕ್ ಮಂಡವಿಯಾ ತಿಳಿಸಿದ್ದಾರೆ.

Source: newsfirstlive.com Source link