ಜೋಶಿ ಸಹೋದರನ ಪುತ್ರನ ವಿವಾಹಕ್ಕೆ ವೆಂಕಯ್ಯ ನಾಯ್ಡು ಆಗಮನ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋವಿಂದ ಜೋಶಿ ಪುತ್ರ ಅಭಯ ಜೋಶಿ ವಿವಾಹ ಸಮಾರಂಭಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹಾಗೂ ಅವರ ಪತ್ನಿ ಶ್ರೀಮತಿ ಎಂ.ಉಷಾ ಆಗಮಿಸಿದ್ದಾರೆ.

ನಗರದ ಗೋಕುಲ ರಸ್ತೆಯಲ್ಲಿರುವ ಅನಂತ್ ಗ್ರ್ಯಾಂಡ್ ಹೋಟೆಲ್ ನಲ್ಲಿ ಮದುವೆ ನಡೆಯುತ್ತಿದ್ದು, ಎಂ.ವೆಂಕಯ್ಯ ನಾಯ್ಡು ಪರಿವಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಭಾಗಿಯಾಗಿದ್ದಾರೆ. ನವ ವಧು ವರರಿಗೆ ಎಂ.ವೆಂಕಯ್ಯ ನಾಯ್ಡು ಆಶೀರ್ವದಿಸಿದ್ದಾರೆ. ಆಯ್ದ ಗಣ್ಯರಿಗೆ ಮಾತ್ರ ಮದುವೆ ಆಮಂತ್ರಣ ನೀಡಲಾಗಿದ್ದು, ಮಾಧ್ಯಮ ಪ್ರತಿನಿಧಿಗಳಿಗೆ ಸಹ ನಿರ್ಬಂಧ ವಿಧಿಸಲಾಗಿದೆ.

ಸೇನಾ ಹೆಲಿಕಾಪ್ಟರ್ ಮೂಲಕ ವೆಂಕಯ್ಯ ನಾಯ್ಡು ಆಗಮಿಸಿದರು. ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಇಂದು ನಗರಕ್ಕೆ ಆಗಮಿಸಿದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಸ್ತಕ ನೀಡಿ ಸ್ವಾತಿಸಿದರು. ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೇಶ್.ಕೆ.ಪಾಟೀಲ್, ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಬರಮಾಡಿಕೊಂಡರು.

Source: publictv.in Source link