ರಹಾನೆ, ಪೂಜಾರರನ್ನ ಕೈಬಿಟ್ರೆ ಅವರ ಸ್ಥಾನಕ್ಕೆ ಸೂಕ್ತ ಆಟಗಾರ ಯಾರು ಗೊತ್ತಾ?

ರಹಾನೆ, ಪೂಜಾರರನ್ನ ಕೈಬಿಟ್ರೆ ಅವರ ಸ್ಥಾನಕ್ಕೆ ಸೂಕ್ತ ಆಟಗಾರ ಯಾರು ಗೊತ್ತಾ?

ಭಾರತ-ಇಂಗ್ಲೆಂಡ್​​ 3ನೇ ಟೆಸ್ಟ್​​ ಕದನಕ್ಕೆ ಕೌಂಟ್​​ಡೌನ್​ ಆರಂಭವಾಗಿದೆ. ಅದರ ಜೊತೆಗೆ ತಂಡದಲ್ಲಿ ಯಾವೆಲ್ಲಾ ಬದಲಾವಣೆಗಳು ಆಗಬಹುದು ಎಂಬ ಚರ್ಚೆಯೂ ಹುಟ್ಟಿಕೊಂಡಿದೆ. ಲೀಡ್ಸ್​​ ಮೈದಾನದಲ್ಲಿ ಬದಲಾವಣೆಯೊಂದಿಗೆ ಭಾರತ ಕಣಕ್ಕಿಳಿಯುತ್ತಾ?

ಇಂಡೋ-ಇಂಗ್ಲೆಂಡ್​ ಟೆಸ್ಟ್​ ಫೈಟ್​​ ಲಾರ್ಡ್ಸ್​​ ಅಂಗಳದಿಂದ, ಲೀಡ್ಸ್​​ಗೆ ಶಿಫ್ಟ್​ ಆಗಿದೆ. ಕ್ರಿಕೆಟ್​​ ಕಾಶಿಯಲ್ಲಿ ಗೆದ್ದು ಬೀಗಿರುವ ಟೀಮ್​ ಇಂಡಿಯಾ ಸರಣಿ ಗೆಲುವಿನ ಉತ್ಸಾಹದಲ್ಲಿದೆ. ಹೀಗಾಗಿ 2ನೇ ಟೆಸ್ಟ್​ ಪಂದ್ಯ ತಪ್ಪುಗಳನ್ನ ತಿದ್ದಿಕೊಳ್ಳೋ ಯತ್ನದಲ್ಲಿರುವ ತಂಡ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯೋಕೆ ಸಜ್ಜಾಗಿದೆ.

blank

ಇದನ್ನೂ ಓದಿ: IPL​ ಮರು ಆಯೋಜನೆಯಿಂದ ಬಿಸಿಸಿಐಗೆ ಟೆನ್ಶನ್.. ಫ್ರಾಂಚೈಸಿಗಳಿಗೆ ವಾರ್ನಿಂಗ್​​​!

ಟೆಸ್ಟ್​​ ಸ್ಪೆಷಲಿಸ್ಟ್​ , ಆಧಾರ ಸ್ತಂಭ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಚೇತೇಶ್ವರ್​ ಪೂಜಾರ, ಕಳೆದ ಕೆಲ ಪಂದ್ಯಗಳಿಂದ ತಂಡಕ್ಕೆ ಹೊರೆಯಾಗಿದ್ದಾರೆ. ಇಂಗ್ಲೆಂಡ್​​ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ನೀಡಿದ ಅವಕಾಶವನ್ನೂ, ಕೈಚೆಲ್ಲಿದ್ದಾರೆ. ಹೀಗಾಗಿ 3 ನೇ ಪಂದ್ಯದಿಂದ ಪೂಜಾರಾಗೆ ಕೊಕ್​ ನೀಡಿ ಆಯ್ಕೆಗೆ ಲಭ್ಯವಿರೋ ಸೂರ್ಯ ಕುಮಾರ್​ ಯಾದವ್ ಅಥವಾ ಪೃಥ್ವಿ ಷಾಗೆ ಮಣೆ ಹಾಕೋ ಸಾಧ್ಯತೆಯಿದೆ.

ಇದನ್ನೂ ಓದಿ: ಶಾಸ್ತ್ರಿ ನಿರ್ಗಮನದಿಂದ ಕೊಹ್ಲಿ ನಾಯಕತ್ವಕ್ಕೆ ಸಂಚಕಾರ..! ನಾಯಕತ್ವದಿಂದ ಕೆಳಗಿಳಿಯುತ್ತಾರಾ ವಿರಾಟ್?

ಉಪನಾಯಕ ಅಜಿಂಕ್ಯಾ ರಹಾನೆಗೂ ವಿಶ್ರಾಂತಿ ನೀಡಿ, ಮಯಾಂಕ್​ ಅಗರ್​ವಾಲ್​ಗೆ ಮಣೆ ಹಾಕುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಇನ್ನು ಮೊದಲ ಎರಡು ಟೆಸ್ಟ್​ ಪಂದ್ಯಗಳಲ್ಲಿ ಆಡಿರುವ ವೇಗಿಗಳಿಗೆ ರೆಸ್ಟ್​ ನೀಡೋ ಯೋಜನೆಯೂ, ಮ್ಯಾನೇಜ್​ಮೆಂಟ್​​ ಬಳಿಯಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಆಸಿಸ್​​ ಪ್ರವಾಸದಲ್ಲಿ ವರ್ಕ್​ಲೋಡ್​ ಮ್ಯಾನೇಜ್​ ಮಾಡುವಲ್ಲಿ ಎಡವಿ ಇಂಜುರಿಗಳಿಂದ ಕಾಟ ಎದುರಿಸಿದ್ದ ಟೀಮ್​ ಇಂಡಿಯಾ, ಇದೀಗ ಲಾಂಗ್​ ಸ್ಪೆಲ್​ ಮಾಡಿರುವ ವೇಗಿಗಳಿಗೆ ವಿಶ್ರಾಂತಿ ನೀಡೋ ಲೆಕ್ಕಾಚಾರದಲ್ಲಿದೆ.

ಇದನ್ನೂ ಓದಿ:ಟೀಂ ಇಂಡಿಯಾ ಹೆಡ್​ಕೋಚ್​​ ರೇಸ್​​ನಲ್ಲಿ ಅಚ್ಚರಿ ಹೆಸರು; ಇವರು ಬ್ಯಾಟಿಂಗ್ ಮಾಂತ್ರಿಕ

blank

ಇದೆಲ್ಲದರ ಜೊತೆಗೆ ಸ್ಪಿನ್ನರ್​ ಆರ್​ ಅಶ್ವಿನ್​ಗೆ ಸ್ಥಾನ ನೀಡುವ ಸಾಧ್ಯತೆಯೂ ಇದೆ ಎನ್ನಲಾಗ್ತಿದೆ. ಆದ್ರೆ ಇಂಜುರಿ ಕಾರಣದಿಂದ 2ನೇ ಟೆಸ್ಟ್​ ಪಂದ್ಯದಿಂದ ಹೊರಗುಳಿದಿದ್ದ ಶಾರ್ದೂಲ್​ ಠಾಕೂರ್​ ಕೂಡ, ಈಗ ಫಿಟ್​​ ಆಗಿದ್ದಾರೆ. ಇದೂ ಕೂಡ ಹೊಸ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಲೀಡ್ಸ್​​ ಅಂಗಳದಲ್ಲಿ ಕಣಕ್ಕಿಳಿಯೋ ಕದನ ಕಲಿಗಳ್ಯಾರು ಅನ್ನೋದು, ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್​ ಪಂದ್ಯ; ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ ಪಕ್ಕಾ..!

ಇದನ್ನೂ ಓದಿ: ಹಳೇ ಹೈದ್ರಾಬಾದ್​​ ಗಲ್ಲಿಯಲ್ಲಿ ವೇಗಿ ಮೊಹಮ್ಮದ್ ಸಿರಾಜ್​ ಕಟೌಟ್..!

Source: newsfirstlive.com Source link