#BIGDAY ನಾಳೆಯಿಂದ ರಾಜಾದ್ಯಂತ ಶಾಲೆ-ಕಾಲೇಜು ಓಪನ್

#BIGDAY ನಾಳೆಯಿಂದ ರಾಜಾದ್ಯಂತ ಶಾಲೆ-ಕಾಲೇಜು ಓಪನ್

ಬೆಂಗಳೂರು: ಒಂದು ವರೆ ವರ್ಷದಿಂದ ಮುಚ್ಚಿದ್ದ ಶಾಲಾ ಕಾಲೇಜು ನಾಳೆಯಿಂದ ತೆರೆಯಲಿದೆ. ಈ ವೇಳೆ, ಮೊದಲ ಹಂತದಲ್ಲಿ 9-12ನೆ ತರಗತಿಗಳು ಪ್ರಾರಂಭವಾಗಲಿದೆ ಅಂತ ಶಿಕ್ಷಣ ಇಲಾಖೆ ತಿಳಿಸಿದೆ.

9 ಮತ್ತು 10ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿ.ಯು ಭೌತಿಕ ತರಗತಿಗಳು ಪುನಾರಂಭಕ್ಕೆ ಶಿಕ್ಷಣ ಇಲಾಖೆ ಸಂಪೂರ್ಣ ಸಿದ್ಧತೆ ನಡೆಸಿದ್ದು, ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಶಾಲಾ ಕಾಲೇಜನ್ನ ಓಪನ್ ಮಾಡಲಿದ್ದಾರೆ.ವಿದ್ಯಾರ್ಥಿಗಳು ಊಟದ ಬಾಕ್ಸ್, ಬಾಟಲಿಯಲ್ಲಿ ಬಿಸಿ ನೀರು ತೆಗೆದುಕೊಂಡು ಹೋಗಬಹುದು. ಅದೂ ಅಲ್ಲದೇ, ಶಾಲೆಯಲ್ಲೇ ಬಿಸಿ ನೀರಿನ ವ್ಯವಸ್ಥೆಯನ್ನೂ  ಮಾಡಲಾಗಿರುತ್ತದೆ. ಬೆಳಿಗ್ಗೆಯಿಂದ ಮಧ್ಹ್ಯಾನದ ವರೆಗೂ ತರಗತಿಗಳು ನಡೆಯಲಿದೆ.

ಕೋವಿಡ್-19 ‘ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಶಾಲಾ, ಕಾಲೇಜುಗಳನ್ನು ಆರಂಭಿಸಲು ಕಟ್ಟು ನಿಟ್ಟಿನ ಸೂಚನೆಯನ್ನ ನೀಡಲಾಗಿದೆ.  ಜವಾಬ್ಧಾರಿಯೊಂದಿಗೆ ಮಕ್ಕಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮಾಸ್ಕ್ ಧರಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಅಲ್ಲದೇ, ಕೋವಿಡ್ ಸೋಂಕು ದೃಢ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲಾಗುತ್ತಿದೆ ಅಂತ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

Source: newsfirstlive.com Source link