ಹುಟ್ಟು ಹಬ್ಬಕ್ಕೆ ‘ಗಾಡ್​ ಫಾದರ್’ ಅವತಾರ ತಾಳಿದ ಮೆಗಾಸ್ಟಾರ್​ ಚಿರಂಜೀವಿ

ಹುಟ್ಟು ಹಬ್ಬಕ್ಕೆ ‘ಗಾಡ್​ ಫಾದರ್’ ಅವತಾರ ತಾಳಿದ ಮೆಗಾಸ್ಟಾರ್​ ಚಿರಂಜೀವಿ

ಟಾಲಿವುಡ್​ನ ಮೆಗಾಸ್ಟಾರ್ ಚಿರಂಜೀವಿ ಇಂದು ತಮ್ಮ ಹುಟ್ಟು ಹಬ್ಬದ ಸಂಭ್ರಮದಲಿದ್ದು 66ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1978 ರಲ್ಲಿ ತೆರೆಕಂಡ ‘ಪ್ರಾಣಂ ಖರೀದು’ ಸಿನಿಮಾ ಮೂಲಕ ಟಾಲಿವುಡ್​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಿರಂಜೀವಿ ನಂತರ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿ ತೆಲುಗು ಚಿತ್ರರಂಗದಲ್ಲಿ ಸೈ ಎನಿಸಿಕೊಂಡು ಬಳಿಕ ಟಾಲಿವುಡ್​ನ ಮೆಗಾ ಸ್ಟಾರ್​ ಆದ್ರು.

151 ಸಿನಿಮಾಗಳಲ್ಲಿ ನಟಿಸಿರುವ ಮೆಗಾ ಸ್ಟಾರ್​ ತಮ್ಮ 152ನೇ ಸಿನಿಮಾ ಅಚಾರ್ಯ ಚಿತ್ರದ ರಿಲೀಸ್​ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಜೀರಂಜೀವಿ ಬರ್ತ್​ಡೇ ಪ್ರಯುಕ್ತ ತಮ್ಮ 153ನೇ ಸಿನಿಮಾದ ಟೈಟಲ್​ ಟೀಸರ್​ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಗಾಡ್​ ಫಾದರ್’​ ಎಂದು ಹೆಸರಿಡಲಾಗಿದೆ. ಇನ್ನು ಈ ಟೀಸರ್​ನಲ್ಲಿ ಚಿರಂಜೀವಿಯವರ ಸಂಪೂರ್ಣ ಲುಕ್​ ರಿವೀಲ್​ ಮಾಡಿಲ್ಲ.

ನಿರ್ದೇಶಕ ಮೋಹನ್ ರಾಜ ಚಿರು 153 ನೇ ಸಿನಿಮಾಗೆ ಆ್ಯಕ್ಷನ್​ ಕಟ್ ಹೇಳುತ್ತಿದ್ದು, ಚಿರಂಜೀವಿಯವರ ಕೊನಿಡೆಲಾ ಪ್ರೊಡಕ್ಷನ್ಸ್ ಮತ್ತು ಸೂಪರ್ ಗುಡ್ ಫಿಲ್ಮ್ಸ್ ಜಂಟಿಯಾಗಿ ಗಾಡ್​ ಫಾದರ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಸಿನಿಮಾ ಮಲಯಾಳಂನ ಮೋಹನ್ ಲಾಲ್​ ನಟನೆಯ ಬ್ಲಾಕ್‌ಬಸ್ಟರ್ ಚಿತ್ರ ಲೂಸಿಫರ್‌ನ ರಿಮೇಕ್​ ಆಗಿದೆ.

ಚಿರಂಜೀವಿ ಅವರ 154ನೇ ಸಿನಿಮಾದ ಪೋಸ್ಟರ್ ಕೂಡ ಇಂದು ಸಂಜೆ 4 ಗಂಟೆಗೆ ಬಿಡುಗಡೆಯಾಲಿದೆ. ಮೈತ್ರಿ ಚಿತ್ರ ನಿರ್ಮಾಣ ಸಂಸ್ಥೆ ಚಿರು 154ನೇ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದು, ನಿರ್ದೇಶಕ ಕೆ .ಎಸ್ ರವೀಂದ್ರ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ.

Source: newsfirstlive.com Source link