ಸಿಎಂಗೆ ಎದುರಾಯ್ತು ಹೊಸ ಟೆನ್ಶನ್​.. ಮತ್ತೆ ರೆಬೆಲ್​ ಆಗೋಕೆ ಸಚಿವರ ತಂತ್ರ?

ಸಿಎಂಗೆ ಎದುರಾಯ್ತು ಹೊಸ ಟೆನ್ಶನ್​.. ಮತ್ತೆ ರೆಬೆಲ್​ ಆಗೋಕೆ ಸಚಿವರ ತಂತ್ರ?

ಖಾತೆ ಹಂಚಿಕೆಯಾಗಿ ಹದಿನೈದು ದಿನ ಆದರೂ ಸಚಿವರು ಮಾತ್ರ ಇನ್ನು ಕೆಲಸ ಶುರು ಮಾಡಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಹೊಸ ಟೆನ್ಶನ್​ ಶುರುವಾಗಿದೆ ಎಂದು ಗುಲ್ಲೆದ್ದಿದೆ.. ಖಾತೆ ಹಂಚಿಕೆಯಾದ್ರು ಅಧಿಕೃತವಾಗಿ ಕೆಲಸ ಶುರುಮಾಡದ ಸಚಿವರ ಮೇಲೆ ಸಿಎಂ ಬೊಮ್ಮಾಯಿ ಗರಂ ಆಗಿದ್ದಾರೆ ಎನ್ನಲಾಗ್ತಿದೆ. ಖಾತೆ ಹಂಚಿಕೆ ಬಳಿಕ ಖಾತೆ ಕ್ಯಾತೆ ತೆಗೆದಿದ್ದ ಸಚಿವ ಆನಂದ್​ಸಿಂಗ್​ ಮತ್ತು ಶ್ರೀರಾಮುಲು ಇನ್ನು ಕೂಡ ತಮ್ಮ ಕೊಠಡಿಗೆ ಅಧಿಕೃತವಾಗಿ ಕಾಲಿಟ್ಟಿಲ್ಲದಿರುವುದು ಸಿಎಂ ಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗ್ತಿದೆ..

ಸಾರಿಗೆ ಸಚಿವ ಶ್ರೀರಾಮುಲು, ಪರಿಸರ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್​ರ ಈ ನಡೆ ಸಿಎಂಗೆ ತಲೆ ಕೆಡಿಸಿದ್ದು, ವಿಧಾನಮಂಡಲ ಅಧಿವೇಶನಕ್ಕೆ ಇನ್ನೇನು ಕೆಲವೇ ದಿಗಳು ಬಾಕಿ ಇದ್ದು ವಿಪಕ್ಷಗಳಿಗೆ ಈ ವಿಷಯವೇ ಅಸ್ತ್ರವಾಗುತ್ತೆ ಎಂಬ ಆತಂಕದಲ್ಲಿದ್ದಾರೆ..

ಇದನ್ನೂ ಒದಿ:  ಕನ್ಯೆ ತೋರಿಸುವುದು ಸರ್ಕಾರದ ಕೆಲಸ.. ಮದುವೆ ಮಾಡಿಕೊಳ್ಳೋದು ಅವರಿಗೆ ಬಿಟ್ಟಿದ್ದು- ನಿರಾಣಿ

blank

ಸಂಪುಟದ ಬಹುತೇಕ ಸಚಿವರು ಈಗಾಗಲೇ ಕೊಠಡಿ ಪೂಜೆ ಮಾಡಿ, ತಮ್ಮ ತಮ್ಮ ಕಾರ್ಯ ಆರಂಭಿಸಿದ್ದಾರೆ.ಆದರೆ ಈ ಸಚಿವರು ಮಾತ್ರ, ಖಾತೆ ಹಂಚಿಕೆಯಾಗಿ ಹದಿನೈದು ದಿನ ಆದರೂ ಸಚಿವರು ವಿಧಾನಸೌಧದ ಕೊಠಡಿಗೆ ಆಗಮಿಸಿಲ್ಲ. ಅಧಿಕಾರಿಗಳ ಜೊತೆಗೆ ಅಧಿಕೃತವಾಗಿ ಒಂದು ಸಭೆ ಕೂಡ ಕರೆದಿಲ್ಲ.

ಇನ್ನು ಸೆಪ್ಟೆಂಬರ್ 13ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಇದು ಬಸವರಾಜ ಬೊಮ್ಮಾಯಿ‌ ನೇತೃತ್ವದ ಮೊದಲ ಅಧಿವೇಶನ ಕೂಡ. ಇಂತಹ ಸಂದರ್ಭಗಳಲ್ಲಿ ನಾಳೆ ವಿಪಕ್ಷ ಖಾತೆ ಹಂಚಿಕೆಯಾದ್ರು ಸಚಿವರು ಯಾಕಿಷ್ಟು ಲೇಟ್ ಮಾಡಿದ್ರು ಅಂತ ಪ್ರಶ್ನೆ ಮಾಡ್ತಾರೆ. ಸುಮ್ಮನೆ ಟೀಕೆ ಗುರಿಯಾಗಬೇಕುತ್ತೆ ಎಂಬ ಆತಂಕ ಸಿಎಂ ಬಸವರಾಜ ಬೊಮ್ಮಾಯಿಗೆ ಎದುರಾಗಿದೆ.

ಇದನ್ನೂ ಓದಿ: ದೆಹಲಿಗೆ ಹೋದ್ರೂ ಸಿಗದ ‘ಆನಂದ’; ಇನ್ನೂ 3 ದಿನ ಆನಂದ್ ಸಿಂಗ್ ಮೌನ..!

Source: newsfirstlive.com Source link