‘ಸೈನಿಕ’ನ ತೆರೆಮರೆಯ ತಂತ್ರಕ್ಕೆ ಹಾಲಿ ಸಚಿವರಿಗೆ ಆತಂಕ; ಏನು ಆ ಮಾಸ್ಟರ್​​ಪ್ಲಾನ್?!

‘ಸೈನಿಕ’ನ ತೆರೆಮರೆಯ ತಂತ್ರಕ್ಕೆ ಹಾಲಿ ಸಚಿವರಿಗೆ ಆತಂಕ; ಏನು ಆ ಮಾಸ್ಟರ್​​ಪ್ಲಾನ್?!

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೆಸರು ಕೇಳಿ, ಸಚಿವರುಗಳು ತೆರೆಮರೆಯಲ್ಲಿ ಆತಂಕಕ್ಕೊಳಗಾಗ್ತಿದ್ದಾರಂತೆ. ಸದ್ಯ ವಿಧಾನಪರಿಷತ್‌ನ ನಾಮನಿರ್ದೇಶಿತ ಸದಸ್ಯರಾಗಿರುವ ಸಿ.ಪಿ.ಯೋಗೇಶ್ವರ್. ಯಡಿಯೂರಪ್ಪರ ಸಂಪುಟದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿದ್ದರು.

ಆದರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲೇಬೇಕೆಂದು ಪಣತೊಟ್ಟಿದ್ದ ಸಿ.ಪಿ.ಯೋಗೇಶ್ವರ್ ಹೆಸರು ಕೇಳಿದ್ರೆ ಸದ್ಯ ಹಾಲಿ ಸಚಿವರು ಗಾಬರಿಯಾಗ್ತಿದ್ದಾರಂತೆ. ಸಿಪಿವೈ ಸೇರಿದಂತೆ ಹಲವರಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದ ಪರಿಣಾಮ ನಾಯಕತ್ವ ಬದಲಾವಣೆಗೆ ಅಸ್ತು‌ ಎಂದಿದ್ದ ಹೈಕಮಾಂಡ್ ನಾಯಕರು. ಯಡಿಯೂರಪ್ಪವರನ್ನು ಸರಾಗವಾಗಿ ಇಳಿಸಿ ಬಸವರಾಜ ಬೊಮ್ಮಾಯಿಗೆ ಪಟ್ಟಾಭಿಷೇಕ ಮಾಡಿದ್ದರು..

ಇದನ್ನೂ ಓದಿ: ದೆಹಲಿಗೆ ಹೋದ್ರೂ ಸಿಗದ ‘ಆನಂದ’; ಇನ್ನೂ 3 ದಿನ ಆನಂದ್ ಸಿಂಗ್ ಮೌನ..!

ಬಸವರಾಜ ಬೊಮ್ಮಾಯಿ ನೇತೃತ್ವದ ಕ್ಯಾಬಿನೆಟ್‌ನಲ್ಲೂ ಸ್ಥಾನ ಸಿಗುತ್ತದೆ ಎಂದುಕೊಂಡಿದ್ದ ಸಿ.ಪಿ. ಯೋಗೇಶ್ವರ್. ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ತೆರೆಮರೆಯಲ್ಲಿ ಬ್ಯೂಸಿಯಾಗಿ ಬಿಟ್ಟರು..ಇತ್ತ ತನ್ನ ಬೆಂಬಲಿಗರಿಗೆ ಕೆಲವೊಂದು ಕೆಲಸ ಕಾರ್ಯಗಳು ಆಗಬೇಕಾದ್ರೆ, ಸರ್ಕಾರ ಹಾಗೂ ಸಚಿವರನ್ನು ಭೇಟಿ ಮಾಡಿಸಬೇಕು ಎಂದು ಯೋಗೇಶ್ವರ್ ಮುಂದಾಗುತ್ತಿರುವುದು ಹಲವು ಸಚಿವರ ಆತಂಕಕ್ಕೆ ಕಾರಣ.

ಅಷ್ಟಕ್ಕೂ ಏಕೆ ಈ ಆತಂಕ?

ಸಿ.ಪಿ.ಯೋಗೇಶ್ವರ್ ಹೆಸರನ್ನು ಯಾರೇ ಹೇಳಿಕೊಂಡು, ಸಚಿವರ ಬಳಿ ಹೋದ್ರೆ, ಖುದ್ದು ಸಚಿವರೇ ಆತಂಕಕ್ಕೊಳಗಾಗುತ್ತಿದ್ದಾರೆ. ಸಿಪಿವೈ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎಂಬ ದೊಡ್ಡ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯಾರನ್ನಾದ್ರೂ ಕಳುಹಿಸಿ, ಸಿಡಿ ಇನ್ನೊಂದು ಮತ್ತೊಂದು ಮಾಡಿಸಿಬಿಟ್ಟರೇ ಏನು ಮಾಡುವುದು? ನಾವು ಏನೋ ಮಾಡಲು ಹೋಗಿ, ಇನ್ನೇನೋ ಆಗಿಬಿಟ್ಟರೇ ಏನು ಮಾಡುವುದು?..

ಜೊತೆಗೆ ನಮ್ಮ ಟೈಂ ಸರಿ ಇಲ್ಲದ ಸಂದರ್ಭದಲ್ಲಿ, ಯಾವುದೇ ಎಡವಟ್ಟುಗಳು ನಡೆದು ಹೋಗುತ್ತದೆ ಎಂದು‌ ಆತಂಕಕ್ಕೊಳಗಾಗುತ್ತಿದ್ದಾರೆ ಎಂಬ ಸಂಶಯ ಮೂಡಿದೆ.. ಆದ್ದರಿಂದ ಸಿಪಿವೈ ಹೆಸರು ಹೇಳಿಕೊಂಡು ಬಂದರೆ, ಆಯ್ತು ನಿಮ್ಮ ಕೆಲಸವಾಗುತ್ತದೆ. ನೀವು ಹೋಗಿ ಬನ್ನಿ ಎಂದು ನಯವಾಗಿ ಕಳುಹಿಸಿಕೊಡಲಾಗ್ತಿದೆ ಎಂದು ರಾಜಕೀಯ ವಲಯದಲ್ಲಿ ಗುಲ್ಲೆದ್ದಿದೆ..

ಇದನ್ನೂ ಓದಿ:  ಬಿಜೆಪಿ ನಾಯಕ ಚಿ.ನಾ. ರಾಮುಗೆ ಯುವತಿಯಿಂದ ವಿಡಿಯೋ ಕಾಲ್.. ನಂತರ ಬ್ಲಾಕ್​ಮೇಲ್

Source: newsfirstlive.com Source link