ಯಪ್ಪಾ.. ಈ ನೈಜಿರಿಯನ್​​ ಸ್ಮಗ್ಲರ್​ ಹೊಟ್ಟೆಯಲ್ಲಿತ್ತು ಬರೋಬ್ಬರಿ ₹11 ಕೋಟಿ ಮೌಲ್ಯದ ಡ್ರಗ್ಸ್​

ಯಪ್ಪಾ.. ಈ ನೈಜಿರಿಯನ್​​ ಸ್ಮಗ್ಲರ್​ ಹೊಟ್ಟೆಯಲ್ಲಿತ್ತು ಬರೋಬ್ಬರಿ ₹11 ಕೋಟಿ ಮೌಲ್ಯದ ಡ್ರಗ್ಸ್​

ಬೆಂಗಳೂರಿನ:  ಟ್ಯಾಬ್ಲೆಟ್ ನುಂಗಿ ಹೊಟ್ಟೆಯಲ್ಲಿ ಡ್ರಗ್ಸ್ ಸಾಗಿಸಲು ಯತ್ನಿಸಿದ ನೈಜೀರಿಯನ್​ ಪ್ರಜೆ ರೆಡ್​ ಹ್ಯಾಂಡೆಡ್​ ಆಗಿ ಸಿಕ್ಕಿಬಿದ್ದಿದ್ದಾನೆ.

ಬರೋಬ್ಬರಿ 11 ಕೋಟಿ ಮೌಲ್ಯದ ಕೋಕೆನ್​ನ್ನ ಟ್ಯಾಬ್ಲೆಟ್ ರೂಪದಲ್ಲಿ ನುಂಗಿದ್ದ. ಅಲ್ಲದೇ, ಕೆಐಎಎಲ್ ಏರ್ಪೋರ್ಟ್​ನಲ್ಲಿ ಸೆಂಟ್ರಲ್ ಇಂಟೆಲಿಜೆನ್ಸ್ ಅಧಿಕಾರಿಗಳಿಂದ ವಶಕ್ಕೆ ಪಡೆಯಲಾಗಿದೆ. ಕೋಕೆನ್​ನ್ನ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್​ನಿಂದ ಡ್ರಗ್ಸ್ ಸಾಗಾಟ ಮಾಡಲು ಯತ್ನಿಸ್ತಾಯಿದ್ದ. ಅಲ್ಲದೇ, ಬೆಂಗಳೂರಿನ ಡ್ರಗ್ ಪೆಡ್ಲರ್ ಓರ್ವನಿಗೆ ನೀಡಲು ಈ ಕೊಕೇನ್​ನನ್ನ ತಂದಿದ್ದಾಗಿ ಮಾಹಿತಿಯಿದೆ.

ಇನ್ನು ಈತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಡ್ರಗ್ಸ್​ನ ಪಾಚ್​​ಗಳನ್ನ ಹೊರಗೆ ತೆಗೆದಾಗ ಸ್ವತಃ ತನಿಖಾಧಿಕಾರಿಗಳಿಗೇ ಶಾಕ್ ಆಗಿತ್ತು. ಯಾಕಂದ್ರೆ ಈತನ ಹೊಟ್ಟೆಯಲ್ಲಿ ಇದ್ದ ಡ್ರಗ್ಸ್​ 11 ಕೋಟಿ ರೂಪಾಯಿ ಮೌಲ್ಯವನ್ನ ಹೊಂದಿತ್ತು. ಸದ್ಯ ಆರೋಪಿಯನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆಯನ್ನ ನಡೆಸುತ್ತಿದ್ದಾರೆ.

Source: newsfirstlive.com Source link