ಹೊಸ ಫ್ರೆಂಡ್​ ಸಿಕ್ಕ ಖುಷಿ; ಜ್ಯೂ. ಚಿರು- ಅಮ್ಮ ಬಾಯ್ತುಂಬ ನಗು

ಹೊಸ ಫ್ರೆಂಡ್​ ಸಿಕ್ಕ ಖುಷಿ; ಜ್ಯೂ. ಚಿರು- ಅಮ್ಮ ಬಾಯ್ತುಂಬ ನಗು

ಜೂನಿಯರ್ ಚಿರುಗೆ 9 ತಿಂಗಳು ತುಂಬಿದ ಬಳಿಕ ಬಹುಭಾಷಾ ನಟಿ ಮಘನಾ ರಾಜ್ ಒಂದುವರೆ ವರ್ಷದ ಬಳಿಕ ಮತ್ತೆ ಚಿತ್ರರಂಗದಲ್ಲಿ ಸೆಕೆಂಡ್ ಸಿನಿ ಇನ್ನಿಂಗ್ಸ್ ಶುರು ಮಾಡಿದ್ರು.. ಇದೀಗ ಜೂನಿಯರ್ ಚಿರುಗೆ 10 ತಿಂಗಳು ತುಂಬಿರೋ ಸಂಭ್ರಮದಲ್ಲಿರೋ ಮಘನಾ ರಾಜ್ ಜೂನಿಯರ್​ ಚಿರು ಹೊಸ ಸ್ನೇಹಿತನೊಬ್ಬನನ್ನು ಪರಿಚಯಿಸಿದ್ದಾರೆ .. ಹಾಗಾದ್ರೆ ಆದು ಯಾರು ?

ಮೇಘನಾ ಬಾಳಿಗೆ ಕಳೆದ ವರ್ಷ ಆದ ಘಟನೆಗಳಿಂದ ಯಾವುದು ಈ ದಾರಿ , ಯಾವುದು ಈ ತಿರುವು ಎನ್ನುವಂತಾಗಿತ್ತು. ಮದುವೆ ನಂತರವೂ ಸಿನಿಮಾಗಳಲ್ಲಿ ನಟಿಸುತ್ತಿದ ಮೇಘನಾ ತನ್ನ ಬಾಳ ಸಂಗಾತಿ ಚಿರಂಜೀವಿ ಸರ್ಜಾ ಅಗಲಿಕೆ ಬಳಿಕ ಚಿತ್ರರಂಗದಿಂದ ದೂರವಾಗಿದ್ರು.. ಅದ್ರೆ ತನ್ನ ಮುದ್ದಿನ ಮಗ ಜೂನಿಯರ್​ ಚಿರುಗೆ 9 ತಿಂಗಳು ತುಂಬಿದ ಸಂಭ್ರಮದಲ್ಲಿ ನಟಿ ಮೇಘನಾ ರಾಜ್​ .. ಒಂದೂವರೆ ವರ್ಷದ ನಂತರ ಕ್ಯಾಮೆರಾಗೆ ಕೈ ಮುಗಿದು ಸಿನಿಜಗತ್ತಿಗೆ ಮತ್ತೆ ಕಂಬ್ಯಾಕ್​ ಮಾಡಿದ್ರು.. ಇನ್ನು ಇತ್ತೀಗಷ್ಟೆ ಮೇಘನಾ ಎರಡು ಹೊಸ ಜಾಹಿರಾತಿನಲ್ಲು ಆ್ಯಕ್ಟ್​ ಮಾಡಿದ್ರು.

blank

ಇದೀಗ ಮೇಘನಾ ರಾಜ್​ ಜೂನಿಯ್​ ಚಿರುಗೆ 10 ತಿಂಗಳು ತುಂಬಿದ ಸಂಭ್ರಮದಲ್ಲಿದ್ದಾರೆ. ಹೌದು ಇಂದಿಗೆ ಜೂನಿಯರ್​ ಚಿರುಗೆ 10 ತಿಂಗಳು ತುಂಬಿದ್ದು ಈ ಕುರಿತು ಮೇಘನಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಜೂನಿಯರ್​ ಚಿರು ಜೊತೆಗಿನ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅಮ್ಮ ಮಗ ಇಬ್ಬರು ಕೂಡ ಒಂದೇ ರೀತಿ ಮ್ಯಾಚಿಂಗ್​ ಮ್ಯಾಚಿಂಗ್ ಡ್ರೇಸ್​ ಧರಿಸಿ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ .

ಈ ವೇಳೆ ಮೇಘನಾ ರಾಜ್​, ಜೂನಿಯರ್​ ಚಿರುಗೆ ಇಷ್ಟವಾಗಿರೋ ಈ ಹೊಸ ಸ್ನೇಹಿತ ಯಾರು ಅಂತಾ ಹೇಳಿದ್ದಾರೆ. ‘ಚ್ಯಾಂಪ್​ ದಿ ಚಿಂಪ್​’ ಎಂಬ ಮುದ್ದಾದ ಕೋತಿಯ ಗೊಂಬೆ ಜೂನಿಯರ್​ ಚಿರುಗೆ ಈಗ ಅಚ್ಚುಮೆಚ್ಚಿನ ಗೆಳೆಯನಾಗಿದಾನೆ ಅಂತಾ ಮೇಘನಾ ರಾಜ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹೊಸ ಫ್ರೆಂಡ್​ ಸಿಕ್ಕ ಖುಷಿ; ಜ್ಯೂ. ಚಿರು- ಅಮ್ಮ ಬಾಯ್ತುಂಬ ನಗು

ಸದ್ಯ ಎರಡನೇ ಸಿನಿ ಇನ್ನಿಂಗ್ಸ್​ಗೆ ಸಜ್ಜಾಗಿರೋ ನಟಿ ಮೇಘನಾ ರಾಜ್​ ಮಲಯಾಳಂ ಸಿನಿಮಾ ರಂಗದ ಮೂಲಕ ಮತ್ತೆ ಚಿತ್ರರಂಗಕ್ಕೆ ವಾಪಸ್​ ಅಗಲು ನಿರ್ಧರಿಸಿದ್ದು ,ಕನ್ನಡದಲ್ಲೂ ಮೇಘನಾ ಈಗಾಗಲೆ ಎರಡು ಸಿನಿಮಾಗಳ ಕಥೆಯನ್ನ ಕೇಳಿದ್ದಾರಂತೆ…ಮೇಘನಾ ಕಾಲ್ ಶೀಟ್​​ಗಾಗಿ ಕಾದಿರೋ ಸ್ಯಾಂಡಲ್​​​ವುಡ್​​​​ನ ಇಬ್ಬರು ನಿರ್ದೇಶಕರು ಮುಂದಿನ ದಿನಗಳಲ್ಲಿ ಸಿನಿಮಾ ಮಾಡೋ ಯೋಜನೆಯಲ್ಲಿದ್ದಾರೆ ಅನ್ನೋ ಸುದ್ದಿ ಇದೆ..

ಮುಂದಿನ ತಿಂಗಳು ಸೆಪ್ಟೆಂಬರ್​ನಲ್ಲಿ ಜೂನಿಯರ್​ ಚಿರುಗೆ ನಾಮಕರಣವನ್ನ ಅದ್ಧೂರಿಯಾಗಿ ಮಾಡಲು ಮೇಘನಾ ಫ್ಯಾಮಿಲಿ ನಿಧರಿಸಿದೆ. ಒಟ್ಟಿನಲ್ಲಿ ಮೇಘನಾ ರಾಜ್ ಸರ್ಜಾ ಆದಷ್ಟು ಬೇಗ ಮತ್ತೆ ಬೆಳ್ಳಿ ತೆರೆಯ ಮೇಲೆ ಕಾಣಿಸಲಿ ಎಂಬುದೇ ಚಿತ್ರಪ್ರೇಮಿಗಳ ಆಶಯ.

 

Source: newsfirstlive.com Source link