ED ದಾಳಿ ಬಳಿಕ ಮುನಿಸು ಮರೆತು ಮತ್ತೆ ಅಪ್ಪಿಕೊಂಡ್ರಾ ಡಿಕೆಎಸ್​, ಜಮೀರ್​?

ED ದಾಳಿ ಬಳಿಕ ಮುನಿಸು ಮರೆತು ಮತ್ತೆ ಅಪ್ಪಿಕೊಂಡ್ರಾ ಡಿಕೆಎಸ್​, ಜಮೀರ್​?

ಮೊನ್ನೆ ರಾಜ್ಯ ಕಾಂಗ್ರೆಸ್​ ಪಾಳಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿತ್ತು.. ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನ ಭೇಟಿಯಾಗಿ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದ್ದರು.

ಅದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಜಮೀರ್ ಅಹಮ್ಮದ್ ಹತ್ತಿರವಾಗಿದ್ದಾರೆ ಎನ್ನಲಾಗ್ತಿದೆ. ಕಾಂಗ್ರೆಸ್​ನಲ್ಲಿ ಇತ್ತೀಚೆಗೆ ‘ಮುಂದಿನ ಸಿಎಂ’ ಕುರಿತ ಘೋಷಣೆಗಳು ಜೋರಾಗಿ ಕೇಳಿಬಂದಿತ್ತು. ಜಮೀರ್ ಅಹಮ್ಮದ್ ಅವರು ಸಾರ್ವಜನಿಕವಾಗಿ ‘ಮುಂದಿನ ಸಿಎಂ ಸಿದ್ದರಾಮಯ್ಯ’ ಎಂದು ಘಂಟಾಘೋಷವಾಗಿ ಹೇಳುತ್ತಿದ್ದರು. ಇದು ಡಿಕೆ ಶಿವಕುಮಾರ್ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೇ ಡಿಕೆ ಶಿವಕುಮಾರ್ ಕೂಡ ಜಮೀರ್ ಅಹಮ್ಮದ್ ವಿರುದ್ಧ ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತು

ಇದನ್ನೂ ಓದಿ: ED ದಾಳಿ ಬಳಿಕ ಜಮೀರ್ ಏಕಾಂಗಿ; ಸಿದ್ದರಾಮಯ್ಯರ ಅತಿ ಪ್ರಾಧಾನ್ಯತೆಯೇ ಮುಳುವಾಗ್ತಿದ್ಯಾ?

ಆದರೆ ED ದಾಳಿ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಜಮೀರ್ ಅಹಮ್ಮದ್ ಮುನಿಸೆಲ್ಲವನ್ನು ಮರೆತು ಮತ್ತೆ ಹತ್ತಿರವಾಗಿದ್ದಾರೆ ಎನ್ನುವುದಕ್ಕೆ ಪೂರಕವಾಗಿ ಜಮೀರ್​ ಡಿಕೆಎಸ್​ ರನ್ನು ಭೇಟಿ ಮಾಡಿದ್ದಾರೆ..

ED ಸಂಕೋಲೆಯ ಸುಳಿಗೆ ಸಿಲುಕಿರುವ ತಮ್ಮದೇ ಪಕ್ಷದ, ಚಾಮರಾಜಪೇಟೆ ಶಾಕಸನ ಬೆನ್ನಿಗೆ ನಿಂತಿರುವ ಡಿಕೆಎಸ್​, ಜಮೀರ್ ನಿವಾಸದ ಮೇಲೆ ED ದಾಳಿಯಾಗುತ್ತಿದ್ದಂತೆ ದಿಢೀರ್ ಭೇಟಿ ನೀಡಿ ಧೈರ್ಯ ತುಂಬಿದ್ದರು..ತಮ್ಮ ಭೇಟಿ ವೇಳೆ ಕಾನೂ‌ನ ಹೋರಾಟದ ಬಗ್ಗೆ ಜಮೀರ್ ಗೆ ಜೊತೆ ಹಂಚಿಕೊಂಡಿದ್ದ ಡಿಕೆಎಸ್​ ಐಟಿ ದಾಳಿ ಬಳಿಕ ತಾನು ಎದುರಿಸಿದ ಮಾನಸಿಕ ಹಿಂಸೆಯನ್ನ ಹೇಳಿಕೊಂಡಿದ್ದರು ಎನ್ನಲಾಗಿದೆ.

blank

ಯಾವುದೇ ಕಾರಣಕ್ಕೂ ಎದೆಗುಂದದಂತೆ ಧೈರ್ಯ ತುಂಬಿದ್ದ ಡಿಕೆಸ್​, ಜಮೀರ್ ಗೆ ಧೈರ್ಯ ತುಂಬುವುದರ ಜೊತೆಗೆ ಕೆಲವೊಂದು ಕಾನೂನು ಸಲಹೆಗಳನ್ನ ನೀಡಿ ಬಂದಿದ್ದರು. ಕೆಪಿಸಿಸಿ ಅಧ್ಯಕ್ಷರ ಮಾತುಗಳಿಂದ ಖುಷಿಗೊಂಡಿದ್ದ ಜಮೀರ್ ಅಹಮ್ಮದ್, ದೆಹಲಿಗೆ ತೆರಳುವುದಕ್ಕೂ ಮುನ್ನ ಸದಾಶಿವನಗರದ ಅವರ ನಿವಾಸಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು..

ಇದನ್ನೂ ಓದಿ: ED ದಾಳಿ: ನಂಗೆ ಈಗ ಕುಮಾರಸ್ವಾಮಿ ಮೇಲೆಯೇ ಡೌಟ್ ಬರ್ತಿದೆ -ಜಮೀರ್ ಕಿಡಿ

ಈ ಭೇಟಿ ವೇಳೆ ವಕೀಲರ ಸಂಪರ್ಕ ಸೇರಿದಂತೆ ಕಾನೂನು ಸಂಕಷ್ಟದಿಂದ ಪಾರಾಗುವ ಕುರಿತು ಸಲಹೆ ಪಡೆದಿದ್ದಾರೆ ಎನ್ನಲಾಗಿದ್ದು, ದೆಹಲಿಗೆ ತೆರಳಿ ಮೊದಲು ಯಾರನ್ನ ಭೇಟಿ ಮಾಡಬೇಕು,ID ದಾಳಿ ಸಂಬಂಧ ಹೇಗೆ ಕಾನೂನು ಸಂಕೋಲೆಯಿಂದ ಹೊರಬರಬೇಕು, ದಾಳಿ ನಂತರದ ಕಾನೂನು ಪ್ರಕ್ರಿಯೆ ಹೇಗಿರಲಿದೆ ಎಂಬ ಮಾಹಿತಿಯನ್ನ ಪಡೆದಿದ್ದಾರೆ ಎನ್ನಲಾಗಿದೆ. ಸ್ಚತಃ ಕಪಿಲ್ ಸಿಬಲ್ ಜೊತೆಗೆ ದೂರವಾಣಿ ಮೂಲಕ ಚರ್ಚಿಸಿ,ಜಮೀರ್ ಗೆ ಭೇಟಿ ಮಾಡುವಂತೆ ಡಿಕೆಎಸ್​ ಸಲಹೆ ನೀಡಿದ್ದರು ಎನ್ನುವ ಕುರಿತು ಚರ್ಚೆಗಳು ಆರಂಭವಾಗಿವೆ. ಕೆಪಿಸಿಸಿ ಅಧ್ಯಕ್ಷರ ಸಲಹೆಯಂತೆ ಜಮೀರ್ ಹೆಜ್ಜೆ ಇಡುತ್ತಿದ್ದಾರಾ ಎಂಬ ಪ್ರಶ್ನೆಗಳು ಮೂಡಿವೆ..

Source: newsfirstlive.com Source link