‘ನಾನು ನೋಡಿದ ಭಾರತದ ಮೊದಲ ಚಿತ್ರ’ KGF ನೋಡಿ ವಿದೇಶಿಗ ಹಾಡಿದ ಹಾಡಿಗೆ ಯಶ್​​ ಫಿದಾ

‘ನಾನು ನೋಡಿದ ಭಾರತದ ಮೊದಲ ಚಿತ್ರ’ KGF ನೋಡಿ ವಿದೇಶಿಗ ಹಾಡಿದ ಹಾಡಿಗೆ ಯಶ್​​ ಫಿದಾ

ಯಶ್​.. ಸೌತ್​ ಇಂಡಿಯಾದ ರಾಕಿ ಭಾಯ್​, ಇಡೀ ಜಗತ್ತಿಗೆ ಇದೀಗ ರಾಕಿ ಭಾಯ್​ ಯಾರು ಅಂತ ಗೊತ್ತಾಗ್​ ಹೋಗಿದೆ. ಅಷ್ಟರ ಮಟ್ಟಿಗೆ ಕೆಜಿಎಫ್​ ಹವಾ ಹಬ್ಬಿಸಿದೆ.ಮೊನ್ನೆ ಮೊನ್ನೆ ತಾನೆ ಕೆಜಿಎಫ್​ನ ಸ್ಯಾಟಿಲೈಟ್​ನ್ನ ಖರೀದಿ ಮಾಡಲಾಗಿತ್ತು.ಇದೀಗ, ಟೀಚರ್​ ಪಾಲ್​ ಅನ್ನೋ ವಿದೇಶಿ ಶಿಕ್ಷಕರೊಬ್ಬರು ಕೆಜಿಎಫ್​ ಸಿನಿಮಾ ಬಗ್ಗೆ ಒಂದು ಹಾಡನ್ನ ಮಾಡಿದ್ದಾರೆ.

ಲಂಡನ್​ನ ಆಂಗ್ಲ ಭಾಷೆಯ ಶಿಕ್ಷಕರೊಬ್ಬರು, ಕನ್ನಡದ ಕೆಜಿಎಫ್​ ಸಿನಿಮಾವನ್ನ ನೋಡಿ ಸಿಕ್ಕಾ ಪಟ್ಟೆ ಇಷ್ಟ ಪಟ್ಟಿದ್ದಾರೆ. ಸಿನಿಮಾ ಮೇಲೆ ‘‘ಮೈ ಪ್ರಾಮಿಸ್​’’ ಅನ್ನೋ ಹಾಡೊಂದನ್ನ ಬರೆದು, ಅದನ್ನ ತಾವೇ ಹಾಡಿದ್ದಾರೆ. ಅಲ್ಲದೇ, ಕೆಜಿಎಫ್ ತಾವು ನೋಡಿರೋ ಮೊದಲ ಭಾರತೀಯ ಸಿನಿಮಾವಾಗಿದ್ದು, ಆ ಸಿನಿಮಾ ಅವ್ರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಈ ಹಾಡನ್ನು ಹಾಡಿದ್ದಾರೆ.

ಅಲ್ಲದೇ, ಈ ಹಾಡನ್ನ ಕೆಳಿದ ರಾಕಿಂಗ್​ ಸ್ಟಾರ್​ ಯಶ್​ ‘‘ನಮ್ಮ ಸಿನಿಮಾದ ಬಗ್ಗೆ, ನೀವು ತಿಳಿದುಕೊಂಡು, ಆ ತಿಳುವಳಿಕೆಯಿಂದ ನೀವು ಈ ಹಾಡು ಮಾಡಿ, ಆ ಹಾಡಿಂದ ನನ್ನನ್ನು ವಿಸ್ಮಯಗೊಳಿಸಿದ್ದೀರಿ. ನೀವು ತೋರಿಸಿರೋ ಉತ್ಸಾಹ, ನೀವು ಮಾಡಿರೋ ಪ್ರಯತ್ನದಿಂದ, ಈ ಹಾಡನ್ನ ನಾನು ಸಂಪೂರ್ಣವಾಗಿ ಆನಂದಿಸಿದ್ದೀನಿ. ರಾಕಿ ಭಾಯಿ ‘ಬಂಡಾ’.  ಹೀಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೇ ಈ ಹಾಡನ್ನ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಪ್ರಶಂಸಿದ್ದಾರೆ.

 

 

 

Source: newsfirstlive.com Source link