ಕ್ಯಾಪ್ಟನ್ ಸುರೇಶ್ ಮಾನೇಶಿಂಧೆಗೆ ಗುಂಡೂರಾವ್ ಪ್ರಶಸ್ತಿ ಗೌರವ

ಕ್ಯಾಪ್ಟನ್ ಸುರೇಶ್ ಮಾನೇಶಿಂಧೆಗೆ ಗುಂಡೂರಾವ್ ಪ್ರಶಸ್ತಿ ಗೌರವ

ಧಾರವಾಡ: ಮಾಜಿ ಸಿಎಂ ದಿವಂಗತ ಆರ್.. ಗುಂಡೂರಾವ್ ರವರ 28 ನೇ ಪುಣ್ಯಸ್ಮರಣೆ ಹಿನ್ನೆಲೆ. ಧಾರವಾಡದ ಖ್ಯಾತ ಕ್ಯಾಪ್ಟನ್ ಸುರೇಶ್ ಮಾನೇಶಿಂಧೆ ಅವರಿಗೆ ವರ್ಷದ ಪ್ರಶಸ್ತಿ, ನೀಡಿ ಗೌರವಿಸಲಾಯಿತು.

blank

ಕೊರೊನಾ ಮಾಹಾಮಾರಿ ಹಿನ್ನೆಲೆ ಕ್ಯಾಪ್ಟನ್ ಮಾನೇಶಿಂಧೆ ಅವರ ವಿದ್ಯಾಗಿರಿಯ ನಿವಾಸದಲ್ಲಿ ಸರಳವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಹಿರಿಯರಾದ ಡಾ.ಗೋವಿಂದ ಮಣ್ಣೂರ ಅವರು ಸುರೇಶ್ ಮಾನೇಶಿಂಧೆ ಅವರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು..

blank

ಕಾರ್ಯಕ್ರಮದಲ್ಲಿ ಮನೋಜ ಪಾಟೀಲ್, ಕೆ ಎಲ್ ಪಟೀಲ್, ಎಂ ಗಂಗಾದರಪ್ಪ, ಲೋಕೇಶ ನಾಯ್ಕರ್, ವಾಸುದೇವ್ ಹೆರಕಲ್, ರವಿ ಕುಲಕರ್ಣಿ, ಹಾಗೂ ಕ್ಯಾಪ್ಟನ್ ಮಾನೇಶಿಂಧೆ ಕುಟುಂಬ ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

Source: newsfirstlive.com Source link