‘ಶಿವಣ್ಣ ಸ್ಪೇಸ್​ ಕೊಟ್ಟಿದ್ಕೇ ಧನಂಜಯ್​ ಆಗಿದ್ದ ನಾನು ಡಾಲಿ ಆದೆ’​

‘ಶಿವಣ್ಣ ಸ್ಪೇಸ್​ ಕೊಟ್ಟಿದ್ಕೇ ಧನಂಜಯ್​ ಆಗಿದ್ದ ನಾನು ಡಾಲಿ ಆದೆ’​

ಧನಂಜಯ್​ ಆಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟು ಟಗರು ಸಿನಿಮಾ ನಂತರ ‘ಡಾಲಿ ಧನಂಜಯ್’​ ಅದವರು ನಟ ಧನಂಜಯ್. ಡಾಲಿ ಧನಂಜಯ್ ತಾನೆಂಥ ನಟ ಅನ್ನೋದನ್ನ ಈಗಾಗಲೇ ತನ್ನ ಸಿನಿಮಾಗಳ ವಿಭಿನ್ನ ಪಾತ್ರಗಳ ಮೂಲಕ ಸಾಬೀತು ಮಾಡಿ ತೋರಿಸಿದ್ದಾರೆ. ಇನ್ನು ಶಿವಣ್ಣ ಅವರ ಸಿನಿಮಾದಲ್ಲಿ ಬೇರೆ ನಟರಿಗೆ ನಟಿಸಲು ಆವಕಾಶ ನೀಡಿದ್ದರಿಂದ ನಾನು ಇವತ್ತು ‘ಡಾಲಿ ಧನಂಜಯ್’ ಆದೆ ಅಂತಾ ಧನಂಜಯ್​ ಹೇಳಿದ್ದಾರೆ.

blank

ಶಿವಣ್ಣ ಅವ್ರ ಸಿನಿಮಾದಲ್ಲಿ ಸ್ಪೇಸ್​ ಕೊಡದೇ ಇದಿದ್ರೆ ನಾನು ಡಾಲಿ ಆಗುತ್ತಿರಲಿಲ್ಲ ಅಂತಾ ಡಾಲಿ ಹೇಳಿದ್ದಾರೆ. ಹೌದು, ಶಿವಣ್ಣರ ಟಗರು ಸಿನಿಮಾದಲ್ಲಿ ನನಗೆ ನಟಿಸಲು ಆವಕಾಶ ಸಿಕ್ಕಿದರಿಂದ ನನ್ನಲಿದ್ದ ಡಾಲಿ ಪಾತ್ರ ಹೊರ ಬರೋಕೆ ಸಾಧ್ಯವಾಯಿತ್ತು. ನಾನು ಎಷ್ಟೇ ಸಿನಿಮಾಗಳಲ್ಲಿ ನಟನೆ ಮಾಡಿದ್ದರೂ ಕೂಡ ನನ್ನ ಸಿನಿಮಾಗಳು ಜನರಿಗೆ ಹೆಚ್ಚಾಗಿ ತಲುಪಿರಲಿಲ್ಲ. ಆದ್ರೆ ಟಗರು ಸಿನಿಮಾ ನೋಡಿ ಮೆಚ್ಚಿದ ಜನರು ಬಳಿಕ ಅವರನ್ನು ‘ಡಾಲಿ’ ಅಂತನೇ ಕರೆಯೋದಕ್ಕೆ ಶುರು ಮಾಡಿದ್ರು ಅಂತಾ ಡಾಲಿ ಹೇಳಿದ್ದಾರೆ.

ಇದನ್ನೂ ಓದಿ:  ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ಡಾಲಿ ಧನಂಜಯ್ ರಕ್ಷಾ ಬಂಧನ ಆಚರಣೆ

ಮೊನ್ನೆ ವರಮಹಾಲಕ್ಷ್ಮೀ ಹಬ್ಬದ ದಿನ ಡಾಲಿ ಅಭಿನಯದ ‘ರತ್ನನ ಪ್ರಪಂಚ’ ಸಿನಿಮಾದ ಟ್ರೈಲರ್ ರಿಲೀಸ್​ ಆಗಿತ್ತು. ಡಾಲಿಯನ್ನ ಬರಿ ನೆಗೆಟಿವ್​ ರೋಲ್​ನಲ್ಲಿ ನೋಡಿ ಮೆಚ್ಚಿದ ಡಾಲಿ ಫ್ಯಾನ್ಸ್ ಇದೀಗ ‘ರತ್ನನ ಪ್ರಪಂಚ’ ಸಿನಿಮಾದಲ್ಲಿ ಡಾಲಿ ಹೊಸ ಅವತಾರ ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇನ್ನು ನಿನ್ನೆಯಷ್ಟೆ ಮಂಗಳಮುಖಿ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಡಾ. ಅಕ್ಕಯ್ ಪದ್ಮಶಾಲಿಯವರು ಡಾಲಿಗೆ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿದ್ದಾರೆ.

Source: newsfirstlive.com Source link