ಕೋವಿಡ್ ನಿಯಮ ಉಲ್ಲಂಘನೆ; ಕೇಂದ್ರ ಸಚಿವನ ವಿರುದ್ಧ ಬರೋಬ್ಬರಿ 42 FIR

ಕೋವಿಡ್ ನಿಯಮ ಉಲ್ಲಂಘನೆ; ಕೇಂದ್ರ ಸಚಿವನ ವಿರುದ್ಧ ಬರೋಬ್ಬರಿ 42 FIR

ಮುಂಬೈ: ಕರ್ನಾಟಕ ಸೇರಿದಂತೆ ದೇಶದ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಜನಾಶೀರ್ವಾದ ಯಾತ್ರೆ ನಡೆಸುತ್ತಿದೆ. ಕೊರೊನಾ ಮೂರನೇ ಅಲೆ ದೇಶಕ್ಕೆ ಅಪ್ಪಳಿಸಲಿದೆ ಎಂಬ ಭೀತಿಯ ನಡುವೆಯೂ ಬಿಜೆಪಿ ಜನಾಶೀರ್ವಾದ ಯಾತ್ರೆ ಕೈಗೊಂಡಿರುವುದಕ್ಕೆ.. ಯಾತ್ರೆಯಲ್ಲಿ ನಾಯಕರು, ಕಾರ್ಯಕರ್ತರು ಹಾಗೂ ಜನರು ಗುಂಪಾಗಿ ಸೇರುವ ಮೂಲಕ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿದ ಪ್ರಕರಣಗಳು ವರದಿಯಾಗುತ್ತಿವೆ.

ಇದನ್ನೂ ಓದಿ: ವಿನಯ್ ಕುಲಕರ್ಣಿ ಸೇರಿ 300 ಜನರ ವಿರುದ್ಧ ಕೇಸ್: ಯಾತ್ರೆ ನಡೆಸಿದ ಬಿಜೆಪಿಗರ ಮೇಲೇಕಿಲ್ಲ ಎಂದ ಕಾಂಗ್ರೆಸ್

ಈ ಮಧ್ಯೆ ಮಹಾರಾಷ್ಟ್ರದಲ್ಲಿ ಬಿಜೆಪಿ ನಾಯಕ, ಕೇಂದ್ರ ಸಚಿವ ನಾರಾಯಣ ರಾಣೆ ಮಹಾರಾಷ್ಟ್ರದಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಂಡಿದ್ದರು. ಈ ವೇಳೆ ನಾರಾಯಣ ರಾಣೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಮಹಾರಾಷ್ಟ್ರದಲ್ಲಿ ನಾರಾಯಣ್ ರಾಣೆ ವಿರುದ್ಧ ಬರೋಬ್ಬರಿ 42 ಎಫ್​ಐಆರ್​​ಗಳನ್ನು ದಾಖಲಾಗಿವೆ. ಐಪಿಸಿ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಹಲವು ಸೆಕ್ಷನ್​ಗಳ ಹೆಸರಿನಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ಗುಂಡು ಹಾರಿಸಿ ಖೂಬಾಗೆ ಸ್ವಾಗತ​; ಕಾರ್ಯಕ್ರಮ ಆಯೋಜಕರ ವಿರುದ್ಧ ಬಿತ್ತು ಕೇಸ್

ಇತ್ತ ರಾಜ್ಯದಲ್ಲೂ ಸಹ ಬಿಜೆಪಿ ನಾಯಕರು ಜನಾಶೀರ್ವಾದ ಯಾತ್ರೆ ಕೈಗೊಂಡಿದ್ದು ಇಲ್ಲಿಯೂ ಸಹ ನಾಯಕರು ಕೊರೊನಾ ನಿಯಮಗಳಿಗೆ ಕ್ಯಾರೆ ಎನ್ನದೇ ಕಾರ್ಯಕ್ರಮ ನಡೆಸುತ್ತಿರುವುದು ಕಂಡುಬಂದಿದೆ. ಜವಾಬ್ದಾರಿಯುತ ನಾಯಕರು ಜವಾಬ್ದಾರಿ ಮರೆತು ನಡೆಸುತ್ತಿರುವ ಈ ಜನಾಶೀರ್ವಾದ ಯಾತ್ರೆ ಎಷ್ಟು ಸರಿ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link