ಕಾಬೂಲ್ ಏರ್​​ಪೋರ್ಟ್​ನಲ್ಲಿ ಕಾಲ್ತುಳಿತ; ಇಂದು 7 ಮಂದಿ ಆಫ್ಘಾನರು ಸಾವು

ಕಾಬೂಲ್ ಏರ್​​ಪೋರ್ಟ್​ನಲ್ಲಿ ಕಾಲ್ತುಳಿತ; ಇಂದು 7 ಮಂದಿ ಆಫ್ಘಾನರು ಸಾವು

ನವದೆಹಲಿ: ಕಾಬೂಲ್​ ಏರ್​ಪೋರ್ಟ್​ನಲ್ಲಿ ಮತ್ತೆ ಹಿಂಸಾಚಾರ ನಡೆದಿದ್ದು, 7 ಮಂದಿ ಆಫ್ಘಾನ್ ನಾಗರಿಕರು ಮೃತಪಟ್ಟಿದ್ದಾರೆ ಅಂತಾ ಬಿಟ್ರಿಷ್ ಮಿಲಿಟರಿ ಹೇಳಿದೆ. ಬ್ರಿಟಿಷ್ ಡಿಫೆನ್ಸ್​ ನೀಡಿರುವ ಮಾಹಿತಿ ಪ್ರಕಾರ.. ತಾಲಿಬಾನಿಗಳು ಅಫ್ಘಾನಿಸ್ತಾನವನ್ನ ತಮ್ಮ ತೆಕ್ಕೆಗೆ ತೆಗೆದುಕೊಂಡ ನಂತರ, ಅಲ್ಲಿನ ನಾಗರಿಕರು ಭಯಗೊಂಡಿದ್ದಾರೆ. ಅಲ್ಲದೇ ದೇಶವನ್ನ ಬಿಟ್ಟು ಪಲಾಯನ ಮಾಡಲು ಯತ್ನಿಸುತ್ತಿದ್ದಾರೆ.

ಅದರಂತೆ ಇಂದು ಕಾಬೂಲ್ ಏರ್​ಪೋರ್ಟ್​ನಲ್ಲಿ ಆಫ್ಘಾನಿ ನಿವಾಸಿಗಳು ಜಮಾಯಿಸಿದ್ದರು. ಈ ವೇಳೆ ತಾಲಿಬಾನಿಗಳು ಅವರನ್ನ ತಡೆಯುವ ಪ್ರಶ್ನೆ ಮಾಡಿದ್ದಾರೆ. ಆಗ ತಾಲಿಬಾನಿಗಳು ಅಟ್ಯಾಕ್ ಮಾಡಿದ್ದಾರೆ. ಆಗ ನೂಕು ನುಗ್ಗಲು ಸಂಭವಿಸಿ 7 ಮಂದಿ ಸಾವನ್ನಪ್ಪಿದ್ದಾರೆ.

ಈ ಘಟನೆ ಬಳಿಕ ಕಾಬೂಲ್ ಏರ್​ಪೋರ್ಟ್​ನಲ್ಲಿ ನುಕುನುಗ್ಗಲು ಸಂಭವಿಸಿ ಕಾಲ್ತುಳಿತ ನಡೆದಿದೆ. ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತರೋದು ತುಂಬಾ ಕಷ್ಟವಾಗಿತ್ತು. ಅಮೆರಿಕ ಸೇನೆ ಜೊತೆ ಸೇರಿ ಕೊನೆಗೆ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ ಅಂತಾ ಬ್ರಿಟಿಷ್ ಸೇನೆ ಮಾಹಿತಿ ನೀಡಿದೆ.

Source: newsfirstlive.com Source link