ಅಫ್ಘಾನ್‍ನಿಂದ ವಾಪಸಾದ ಚಿಕ್ಕೋಡಿಯ ಯೋಧ- ಕುಟಂಬಸ್ಥರಲ್ಲಿ ಸಂತಸ

– ಪತ್ನಿ, ಮಗು ಹಾಗೂ ತಾಯಿಯ ಮೊಗದಲ್ಲಿ ಮಂದಹಾಸ

ಚಿಕ್ಕೋಡಿ/ಬೆಳಗಾವಿ: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಿಕ್ಕೋಡಿಯ ಯೋಧ ಸುರಕ್ಷಿತವಾಗಿ ಭಾರತಕ್ಕೆ ಮರಳಿರುವದಕ್ಕೆ ಯೋಧನ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಯೋಧ ದಸ್ತಗೀರ ಮುಲ್ಲಾ ತವರಿಗೆ ವಾಪಸ್ ಮರಳಿದ್ದು, ಕುಟುಂಬಸ್ಥರು ಸಂತಸವ್ಯಕ್ತಪಡಿಸಿದ್ದಾರೆ. ಕಾಬೂಲ್ ನಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಯೋಧನನ್ನು ಭಾರತೀಯ ಸೇನೆ ಸುರಕ್ಷಿತವಾಗಿ ವಾಪಸ್ ಕರೆತಂದಿದೆ. ಇದನ್ನೂ ಓದಿ: 107 ಭಾರತೀಯರು ಸೇರಿ ಅಫ್ಘಾನಿಸ್ತಾನದಿಂದ 168 ಜನರ ಆಗಮನ

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಹಿನ್ನೆಲೆ ದಸ್ತಗೀರ ಕುಟುಂಬಸ್ಥರು ಆತಂಕದಲ್ಲಿದ್ದರು. ಇದೀಗ ಸುರಕ್ಷಿತವಾಗಿ ವಾಪಸಾದ ಹಿನ್ನೆಲೆ ಯೋಧನ ಪತ್ನಿ, ಮಗು ಹಾಗೂ ತಾಯಿ ಸಂತಸ ವ್ಯಕ್ತಪಡಿಸಿದ್ದು, ಕೇರೂರು ಗ್ರಾಮಸ್ಥರಲ್ಲೂ ಹರ್ಷ ಮೂಡಿಸಿದೆ. ಅಗಸ್ಟ್ 16 ರಂದೇ ಅಪಘಾನಿಸ್ತಾನದಿಂದ ಯೋಧರನ್ನು ವಾಪಸ್ ಕರೆ ತರಲಾಗಿದ್ದು, ಸಧ್ಯ ದೆಹಲಿಯಲ್ಲಿ ಯೋಧನನ್ನು ಕ್ವಾರಂಟೈನ್ ಮಾಡಲಾಗಿದೆ.

Source: publictv.in Source link