‘ಬಿಗ್​​ ಬಾಸ್​​ ಮನೆಯಲ್ಲಿ ಕ್ಯಾಮೆರಾ ಎದುರೇ ಲೈಂಗಿಕ ಕ್ರಿಯೆ ನಡೆದಿದೆ’; ಸತ್ಯ ಬಿಚ್ಚಿಟ್ಟ ಕಂಟೆಸ್ಟಂಟ್​​

‘ಬಿಗ್​​ ಬಾಸ್​​ ಮನೆಯಲ್ಲಿ ಕ್ಯಾಮೆರಾ ಎದುರೇ ಲೈಂಗಿಕ ಕ್ರಿಯೆ ನಡೆದಿದೆ’; ಸತ್ಯ ಬಿಚ್ಚಿಟ್ಟ ಕಂಟೆಸ್ಟಂಟ್​​

ಬಿಗ್​​ ಬಾಸ್​​​​ ಮನೆಯಲ್ಲಿ ಕ್ಯಾಮೆರಾ ಎದುರೇ ಲೈಂಗಿಕ ಕ್ರಿಯೆ ನಡೆದಿದೆ ಎಂದು ಸ್ಪರ್ಧಿಯೊಬ್ಬರು ಹೇಳಿಕೆ ನೀಡಿದ್ದಾರೆ. ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಹಿಂದಿ ಬಿಗ್​ ಬಾಸ್ ಸ್ಪರ್ಧಿ ಊರ್ಫಿ ಜಾವೇದ್​ ಈ ರೀತಿಯ ಹೇಳಿಕೆ ನೀಡಿರುವ ವಿಡಿಯೋ ಈಗ ಭಾರೀ ವೈರಲ್​​ ಆಗಿದೆ. ಬಿಗ್​​ ಬಾಸ್​​​​ ಮನೆಯಲ್ಲೇ ಇದ್ದಾಗಲೇ ಊರ್ಫಿ ಹೀಗೊಂದು ಶಾಕಿಂಗ್​​​ ಹೇಳಿಕೆ ನೀಡಿದ್ದು, ವೀಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ: ಮೂರು ಬಾರಿ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಈಕೆಯ ಪವರ್​ನ ಸೀಕ್ರೆಟ್ ‘ಸೆಕ್ಸ್’​

ಸ್ಪರ್ಧಿ ಪ್ರತೀಜ್​ ಸೆಹಜ್ ​ಪಾಲ್​ ಮುಂದೆಯೇ ಕ್ಯಾಮೆರಾ ಎದುರಿಗೆ ಬಂದೇ ಊರ್ಫಿ ಹೀಗೆ ಹೇಳಿಕೆ ನೀಡಿದ್ದರು. ನನ್ನ ಕಣ್ಣ ಮುಂದೆಯೇ ಬಿಗ್​​ ಬಾಸ್​​ ಮನೆಯಲ್ಲಿ ಲೈಂಗಿಕ ಕ್ರಿಯೆ ನಡೆದಿದೆ. ಅದನ್ನು ನಿಮಗೆ ತೋರಿಸಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಕ್ಯಾಮೆರಾ ಎದುರಿಗೆ ಅದು ನಡೆದಿದ್ದು ನಿಜ ಎಂದು ಊರ್ಫಿ ಹೇಳಿದ್ದಾರೆ. ಈ ವೇಳೆ ಸ್ಪರ್ಧಿ ಪ್ರತೀಜ್, ಏನು ಹೇಳ್ತಿದ್ಯಾ? ಯಾರ ಬಗ್ಗೆ ಮಾತಾಡ್ತಿದ್ಯಾ? ಎಂದು ಶಾಕ್​​ ಆದರು.

blank

ಆಗ ಊರ್ಫಿ, ಹೌದು ಮನೆಯಲ್ಲಿ ನಡೆದಿದ್ದು ನಿಜ. ಅದು ಕ್ಯಾಮೆರಾ ಎದುರೇ ನಡೆದಿದೆ, ನೀನು ನೋಡಿಲ್ವಾ? ಎಂದು ಮರು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರತೀಜ್​​​, ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಚ್ಚರಿಗೊಂಡಿದ್ದಾರೆ. ಸದ್ಯ ಊರ್ಫಿ ನೀಡಿರುವ ಹೇಳಿಕೆಯ ವಿಡಿಯೋ ವೈರಲ್​​ ಆಗಿದೆ. ಬಿಗ್​​ ಬಾಸ್​ ಮನೆಯಲ್ಲಿ ಎಲ್ಲರ ಗಮನ ಸೆಳೆಯೋಕೆ ಊರ್ಫಿ ಹೇಗೆ ಹೇಳಿಕೆ ನೀಡಿದ್ದರು ಎಂದು ಹೇಳಲಾಗುತ್ತಿದೆ. ಈಗ ಊರ್ಫಿ ಬಿಗ್​​ ಬಾಸ್​​ ಮನೆಯಿಂದ ಹೊರ ಬಂದಿದ್ದಾರೆ.

ಟಿವಿಯಲ್ಲಿ ಪ್ರಸಾರವಾಗುವ ಬಿಗ್​ ಬಾಸ್​​​ಗೆ ಕೆಲವು ರೂಲ್ಸ್​ ಅಂಡ್​​ ರೆಗ್ಯೂಲೆಷನ್ಸ್​ ಇವೆ. ಆದರೆ, ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್​ ಬಾಸ್​​ಗೆ ಯಾವುದೇ ನಿರ್ಬಂಧಗಳಿಲ್ಲದ ಕಾರಣ ಹೀಗಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮದುವೆ ನಂತರದ ಬಲವಂತದ ಲೈಂಗಿಕ ಕ್ರಿಯೆ ಕಾನೂನುಬಾಹಿರ ಎನ್ನಲಾಗದು; ಮುಂಬೈ ಕೋರ್ಟ್​

Source: newsfirstlive.com Source link