ಮಾಜಿ ಪ್ರಧಾನಿಗೆ ರಾಖಿ ಕಟ್ಟಿದ ಜೆಡಿಎಸ್​ ಕಾರ್ಯಕರ್ತೆ..

ಮಾಜಿ ಪ್ರಧಾನಿಗೆ ರಾಖಿ ಕಟ್ಟಿದ ಜೆಡಿಎಸ್​ ಕಾರ್ಯಕರ್ತೆ..

ಬೆಂಗಳೂರು: ಇಂದು ರಾಜ್ಯಾದ್ಯಂತ ರಕ್ಷಾಬಂಧನ ಹಬ್ಬ ಆಚರಿಸಲಾಗುತ್ತಿದೆ. ಮಹಿಳೆಯರೆಲ್ಲರೂ ತಮ್ಮ ಸೋದರರಿಗೆ ರಾಖಿ ಕಟ್ಟಿ, ಸಿಹಿ ತಿನ್ನಿಸುವ ಮೂಲಕ ರಕ್ಷಾಬಂಧನವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

blank

ಈ ಸಂಭ್ರಮದ ದಿನದಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಜೆಡಿಎಸ್​ ಕಾರ್ಯಕತೆಯೊಬ್ಬರು ರಾಖಿ ಕಟ್ಟುವ ಮೂಲಕ ವಿಶೇಷವಾಗಿ ರಕ್ಷಾ ಬಂಧನವನ್ನು ಆಚರಿಸಿದ್ದಾರೆ.. ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದ ಮಾಜಿ ಪ್ರಧಾನಿ ದೇವೆಗೌಡರು ಸುದ್ದಿಗೋಷ್ಠಿಗೆ ಹಾಜರಾದ ಸಂದರ್ಭದಲ್ಲಿ, ಕಾರ್ಯಕರ್ತೆಯೊಬ್ಬರು ದೇವೆಗೌಡರ ಕೈಗೆ ರಾಕಿ ಕಟ್ಟಿ, ಹೂಗುಚ್ಛ ನೀಡಿ ಆಶೀರ್ವಾದ ಪಡೆದಿದ್ದಾರೆ..

ಇದನ್ನೂ ಓದಿ: ‘ವಿನಯ್ ಕುಲಕರ್ಣಿ ಅಣ್ಣನಿದ್ದಂತೆ..’ -ಬರಮಾಡಿಕೊಳ್ಳಲು ಹಿಂಡಲಗಾ ಜೈಲಿಗೆ ಬಂದ ಹೆಬ್ಬಾಳ್ಕರ್

Source: newsfirstlive.com Source link