ರಾಹುಲ್​​ ಗಾಂಧಿ ಯುವ ನಾಯಕ, ಯಾರು ಲಘುವಾಗಿ ಮಾತಾಡಬಾರದು -ದೇವೇಗೌಡ

ರಾಹುಲ್​​ ಗಾಂಧಿ ಯುವ ನಾಯಕ, ಯಾರು ಲಘುವಾಗಿ ಮಾತಾಡಬಾರದು -ದೇವೇಗೌಡ

ಬೆಂಗಳೂರು: ಈ ಬಾರಿಯ ಅಧಿವೇಶನ ಜನರ ಯಾವುದೇ ಸಮಸ್ಯೆಗಳ ಕುರಿತು ಚರ್ಚೆ ಮಾಡದೆ, ಕೇವಲ ಕಾಲ ಹರಣ ಮಾಡಿ ಸಮಯ ವ್ಯರ್ಥ ಮಾಡಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೆ.

ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು,ಈ ಬಾರಿ ಅಧಿವೇಶನ ತಪ್ಪಿಸಿಕೊಳ್ಳಬಾರದೆಂದು ಸತತವಾಗಿ ಹಾಜರಾಗಿದ್ದೆ,ಆದರೆ, ಸದನದಲ್ಲಿ ನನಗೆ ಮಾತನಾಡಲು ಅವಕಾಶವೇ ಸಿಗಲಿಲ್ಲ. ಆಡಳಿತ- ವಿಪಕ್ಷಗಳ ನಡೆಯಿಂದಾಗಿ ಸದನ ಸರಿಯಾಗಿ ನಡೆಯಲೇ ಇಲ್ಲ ಎಂದು ನಿರಾಸೆ ವ್ಯಕ್ತಪಡಿಸಿದ್ರು.

ಯಾರನ್ನೂ ಯಾರೂ ಕಟ್ಟಿ ಹಾಕಲು ಸಾಧ್ಯವಿಲ್ಲ. ಪ್ರತಿಯೊಂದು ಪ್ರಾದೇಶಿಕ ಪಕ್ಷಗಳು ಅವರವರ ರಾಜ್ಯಕ್ಕೆ ಸೀಮಿತವಾಗಿವೆ. ಕುಮಾರಸ್ವಾಮಿಯವರನ್ನು ರಾಜ್ಯದಲ್ಲಿ ಗುರುತಿಸುತ್ತಾರೆ. ಚಂದ್ರಶೇಖರ್ ತೆಲಂಗಾಣಕ್ಕೆ ಸೀಮಿತರಾಗಿದ್ದಾರೆ. ಈ ನಡುವೆ ರಾಹುಲ್ ಗಾಂಧಿ ಮೇಲೆ ಅಪಾರ ಟೀಕೆಗಳು ಕೇಳಿ ಬರುತ್ತಿವೆ..ರಾಹುಲ್ ಗಾಂಧಿ ಒಬ್ಬ ಯುವ ನಾಯಕ, ಅವರ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ. ಸೈಕಲ್‌ ಮೇಲೆ ಪಾರ್ಲಿಮೆಂಟ್​ಗೆ ಬರೋ ಕಾರ್ಯಕ್ರಮ ಮಾಡಿ ಆ ಮೂಲಕ, ಜನರು ಕಷ್ಟದಲ್ಲಿದ್ದಾರೆ ಅನ್ನೋದನ್ನ ತೋರಿಸಿದರು, ಎಂದು ಹೇಳಿದ್ದಾರೆ..

Source: newsfirstlive.com Source link