ಅಮೆರಿಕಾ ಸೇನೆ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಅಫ್ಘಾನ್​​ ಮಹಿಳೆ

ಅಮೆರಿಕಾ ಸೇನೆ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಅಫ್ಘಾನ್​​ ಮಹಿಳೆ

ತಾಲಿಬಾನ್​​ ವಶಕ್ಕೆ ಪಡೆದ ಅಫ್ಘಾನಿಸ್ತಾನದಿಂದ ಹೊರ ಹೋಗಲು ಜನ ಹಾತೊರೆಯುತ್ತಲೇ ಇದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ಜನಸಂದಣಿಯನ್ನು ನಿಯಂತ್ರಿಸಲು ಅಮೆರಿಕಾ ಸೇನೆ ಪರದಾಡುತ್ತಿದೆ. ವಿವಿಧ ದೇಶಗಳು ಅಫ್ಘಾನಿಸ್ತಾನದಿಂದ ಜನರನ್ನ ಹೊರಗೆ ಸಾಗಿಸುವ ಕೆಲಸದಲ್ಲಿ ತೊಡಗಿವೆ. ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್ ಮೊದಲಾದ ದೇಶಗಳು ತಮ್ಮ ತಮ್ಮ ದೇಶಗಳ ನಾಗರಿಕರನ್ನು ಏರ್ ಲಿಫ್ಟ್ ಮಾಡುತ್ತಿವೆ.

ಒಂದೆಡೆ ಅಫ್ಘಾನಿಸ್ತಾನದಿಂದ ಹೊರಹೋಗಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೆಚ್ಚು ಜನರು ಸೇರಿದ ಪರಿಣಾಮ ಉಂಟಾದ ಗದ್ದಲದಲ್ಲಿ ಏಳು ಮಂದಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಸಾವುಗಳ ಬಗ್ಗೆ ಬ್ರಿಟನ್​ ಸರ್ಕಾರ ಮಾಹಿತಿ ನೀಡಿದ ಬೆನ್ನಲ್ಲೇ ಅಮೆರಿಕಾ ಸೇನೆ ತನ್ನ ವಿಮಾನದಲ್ಲೇ ತಾಯಿಯೊಬ್ಬರು ಮುಗುವಿಗೆ ಜನ್ಮ ನೀಡಿದ ವಿಚಾರ ಹಂಚಿಕೊಂಡಿದ್ದಾರೆ.

ಹೌದು, ಸಾವು ನೋವುಗಳ ಸುದ್ದಿಗಳನ್ನೇ ಕೇಳುತ್ತಿರುವ ಹೊತ್ತಲ್ಲಿ ಅಫ್ಘಾನಿಸ್ತಾನದಿಂದ ಏರ್​​​ ಲಿಫ್ಟಿಂಗ್​​ ವೇಳೆ ವಿಮಾನದಲ್ಲೇ ಮಗುವಿಗೆ ತಾಯಿ ಜನ್ಮ ನೀಡಿದ್ದಾರಂತೆ. ಅಮೆರಿಕ ಸೇನೆ ವಿಮಾನದಲ್ಲೇ ಮಗುವಿಗೆ ತಾಯಿ ಜನ್ಮ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: #BIGBREAKING ಏಪ್ರಿಲ್ 14 ಕ್ಕೆ ಥಿಯೇಟರ್​ಗೆ ಬರ್ತಾನೆ ರಾಕಿ ಭಾಯ್

ಈ ಬಗ್ಗೆ ಟ್ವೀಟ್​ ಮಾಡಿರುವ ಅಮೆರಿಕಾ ಸೇನೆ, ಜರ್ಮನಿಗೆ ಫ್ಲೈಟ್ ಲ್ಯಾಂಡ್ ಆಗುತ್ತಿದ್ದಂತೆ ಅಫ್ಘಾನ್​ ಮಹಿಳೆಗೆ ಹೆರಿಗೆಯಾಗಿದೆ. ಕಾಬೂಲ್​ ಏರ್​ಪೋರ್ಟ್​​ನಿಂದ ಜರ್ಮನಿಗೆ ತೆರೆಳಿದ್ದ ವಿಮಾನದಲ್ಲಿ ಈ ಹೆರಿಗೆ ಆಗಿದೆ ಎಂದು ತಿಳಿಸಿದ್ದಾರೆ.

Source: newsfirstlive.com Source link