‘ನಮ್ಮನ್ನು ಈ ಕೂಪದಿಂದ ರಕ್ಷಿಸಿ’ ಭಾರತದ ಸ್ಪೆಷಲ್​ ಸೆಲ್​ಗೆ ಆಫ್ಘನ್ ಪ್ರಜೆಗಳಿಂದ ಸಾವಿರಾರು ಕರೆ

‘ನಮ್ಮನ್ನು ಈ ಕೂಪದಿಂದ ರಕ್ಷಿಸಿ’ ಭಾರತದ ಸ್ಪೆಷಲ್​ ಸೆಲ್​ಗೆ ಆಫ್ಘನ್ ಪ್ರಜೆಗಳಿಂದ ಸಾವಿರಾರು ಕರೆ

ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಭಾರತ ಸೇರಿದಂತೆ ಹಲವು ದೇಶಗಳು ಅಫ್ಘಾನಿಸ್ತಾನದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ತಮ್ಮ ದೇಶದ ಪ್ರಜೆಗಳನ್ನು ರಕ್ಷಿಸಲು ಮುಂದಾಗಿವೆ. ಇದಷ್ಟೇ ಅಲ್ಲದೇ ನೆರವು ಕೋರಿ ಬಂದ ಆಫ್ಘನ್ ಪ್ರಜೆಗಳನ್ನು ಸಹ ತಮ್ಮ ದೇಶಕ್ಕೆ ಕರೆದೊಯ್ಯುವ ಮೂಲಕ ಪ್ರಾಣ ರಕ್ಷಣೆ ಮಾಡುತ್ತಿವೆ.

ಇದನ್ನೂ ಓದಿ: ತಾಲಿಬಾನ್ ಜೊತೆಗೆ ಪಾಕ್​ ISI ಮುಖ್ಯಸ್ಥನ ಕಳ್ಳಾಟ.. ಅಫ್ಘಾನ್ ಅರಾಜಕತೆಯ ಹಿಂದೆ ಪಾಕ್ ಕೈವಾಡ?

ಈ ಹಿನ್ನೆಲೆ ಭಾರತ ವಿದೇಶಾಂಗ ಇಲಾಖೆ ಅಫ್ಘಾನಿಸ್ತಾನದಲ್ಲಿ ವಿಶೇಷ ಸೆಲ್​ ಒಂದನ್ನು ತೆರೆದಿತ್ತು. ಈ ಸ್ಪೆಷಲ್ ಸೆಲ್​ಗೆ ಕಳೆದ ಐದು ದಿನಗಳಿಂದ ಬರೋಬ್ಬರಿ 2 ಸಾವಿರ ಫೋನ್ ಕಾಲ್​ಗಳು ಬಂದಿವೆ ಎನ್ನಲಾಗಿದೆ. ಕೇವಲ ಫೋನ್ ಕರೆಗಳಷ್ಟೇ ಅಲ್ಲ ತಮ್ಮನ್ನು ರಕ್ಷಣೆ ಮಾಡುವಂತೆ ಕೋರಿ ಬರೋಬ್ಬರಿ 6 ಸಾವಿರ ವಾಟ್ಸ್​ಆ್ಯಪ್ ಮೆಸೇಜ್​ಗಳು ಮತ್ತು 1,200 ಕ್ಕೂ ಹೆಚ್ಚು ಇ ಮೇಲ್​ಗಳೂ ಸಹ ಬಂದಿವೆ ಎಂದು ಸ್ಪೆಷಲ್ ಸೆಲ್ ಮಾಹಿತಿ ನೀಡಿದೆ.

ಇದನ್ನೂ ಓದಿ: ಜಗತ್ತಿನ ಎಲ್ಲ ದೇಶಗಳ ಜೊತೆಗೂ ರಾಜಕೀಯ, ಆರ್ಥಿಕ ಸಂಬಂಧ ಬೆಳೆಸ್ತಾರಂತೆ ತಾಲಿಬಾನಿಗಳು

ಈಗಾಗಲೇ ಭಾರತ ಎರಡು ವಿಮಾನಗಳ ಮೂಲಕ ಅಫ್ಘಾನಿಸ್ತಾನದಿಂದ ಭಾರತೀಯರು ಹಾಗೂ ಆಫ್ಘನ್ ಪ್ರಜೆಗಳನ್ನೂ ಕರೆತಂದಿದೆ. ಈ ಕಾರ್ಯಾಚರಣೆ ಮುಂದುವರೆಯಲಿದ್ದ ಪ್ರತಿಯೊಬ್ಬ ಭಾರತೀಯನನ್ನೂ ತವರು ನೆಲಕ್ಕೆ ಸುರಕ್ಷಿತವಾಗಿ ಕರೆತರಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

Source: newsfirstlive.com Source link