ಸಿನಿಮಾ ಶೂಟಿಂಗ್​ಗಾಗಿ ಇಡೀ ರೈಲನ್ನೇ ಕಣಿವೆಗೆ ಹಾರಿಸಿದ ಚಿತ್ರತಂಡ

ಸಿನಿಮಾ ಶೂಟಿಂಗ್​ಗಾಗಿ ಇಡೀ ರೈಲನ್ನೇ ಕಣಿವೆಗೆ ಹಾರಿಸಿದ ಚಿತ್ರತಂಡ

ಕೆಲವು ಸಿನಿಮಾಗಳು ಕಂಪ್ಲೀಟ್ ಆ್ಯಕ್ಷನ್ ಸಿನಿಮಾಗಳಾಗಿರುತ್ತವೆ. ಈ ಸಿನಿಮಾಗಳಲ್ಲಿ ಆ್ಯಕ್ಷನ್ ಸೀಕ್ವೆನ್ಸ್​ಗಾಗಿ ನೂರಾರು ಕೋಟಿ ಹಣವನ್ನ ಖರ್ಚು ಮಾಡಿರುತ್ತಾರೆ ಅಂಥ ಸಿನಿಮಾಗಳಲ್ಲಿ ಮಿಷನ್ ಇಂಪಾಸಿಬಲ್ ಸಿನಿಮಾ ಸಿರೀಸ್ ಕೂಡ ಒಂದು. ಮಿಷನ್ ಇಂಪಾಸಿಬಲ್ ಸಿನಿಮಾದಲ್ಲಿ ನಟ ಟಾಮ್ ಕ್ರೂಸ್​ನ ಆ್ಯಕ್ಷನ್ ನೋಡಲಿಕ್ಕಾಗಿ ಇಡೀ ಜಗತ್ತೇ ಕಾದಿರುತ್ತದೆ.

ಇತ್ತೀಚೆಗೆ ಮಿಷನ್ ಇಂಪಾಸಿಬಲ್​ನ ಮುಂದುವರಿದ ಭಾಗದ ಚಿತ್ರೀಕರಣದ ವೇಳೆ ಇಡೀ ರೈಲನ್ನೇ ಕಣಿವೆಗೆ ಹಾರಿಸಿದ್ದಾರೆ. ಈ ಆ್ಯಕ್ಷನ್ ಸೀಕ್ವೆನ್ಸ್​ ಮೇಕಿಂಗ್​ನ ವಿಡಿಯೋ ವೈರಲ್ ಆಗಿದೆ. ದೂರದಿಂದ ಬರುವ ಟ್ರೈನ್​ನ ಹಳಿಯನ್ನ ಕಣಿವೆ ಭಾಗದಲ್ಲಿ ಎತ್ತರಿಸಲಾಗಿರುತ್ತದೆ. ಸ್ಪೀಡಾಗಿ ಬಂದ ಟ್ರೈನ್ ಆಳದ ಕಣಿವೆಗೆ ಹಾರಿ ಬೀಳುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಮಿಷನ್ ಇಂಪಾಸಿಬಲ್ ಸಿನಿಮಾದ ಮೇಕಿಂಗ್ ವಿಡಿಯೋ ವೈರಲ್ ಆಗಿದ್ದು ಹಾಲಿವುಡ್​ನವರ ಮೇಕಿಂಗ್ ಪ್ಯಾಷನ್​ಗೆ ಜನರು ದಂಗಾಗಿದ್ದಾರೆ. ಹಾಲಿವುಡ್​ನವರಿಂದ ಮಾತ್ರವೇ ಇದೆಲ್ಲ ಸಾಧ್ಯ ಎನ್ನುತ್ತಿದ್ದಾರೆ.

Source: newsfirstlive.com Source link