ಊಟ ಮಾಡಿ ಕೈ ತೊಳೆಯಲು ಹೋದಾಗ ದುರ್ಘಟನೆ.. ಒಂದೇ ಕುಟುಂಬದ ಮೂವರು ನೀರುಪಾಲು

ಊಟ ಮಾಡಿ ಕೈ ತೊಳೆಯಲು ಹೋದಾಗ ದುರ್ಘಟನೆ.. ಒಂದೇ ಕುಟುಂಬದ ಮೂವರು ನೀರುಪಾಲು

ಬಾಗಲಕೋಟೆ: ನದಿಯಲ್ಲಿ‌ ಮುಳುಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಬದಾಮಿಯ ಶಿವಯೋಗಿ ಮಂದಿರದ ಬಳಿ ನಡೆದಿದೆ. ವಿಶ್ವನಾಥ್ ಮಾವಿನಮರದ (40), ಶ್ರಿದೇವಿ ಮಾವಿನಮರದ (32), ನಂದಿನಿ ಮಾವಿನಮರದ (12) ಸಾವನ್ನಪ್ಪಿದವರು.

ಮೃತರು ಬಾಗಲಕೋಟೆ ತಾಲೂಕಿನ ಕೊಟೇಕಲ್ ಗ್ರಾಮದವರಾಗಿದ್ದು ಗದಗ ಜಿಲ್ಲೆಯ ರೋಣದಲ್ಲಿ ವಾಸವಾಗಿದ್ರು. ಬದಾಮಿಯ ಬನಶಂಕರಿ ದೇವಿ ದೇವಸ್ಥಾನಕ್ಕೆ ತೆರಳಿ ದೇವಿ ದರ್ಶನ ಪಡೆದಿದ್ರು.. ನಂತ್ರ ಬದಾಮಿ ತಾಲೂಕಿನ ಶಿವಯೋಗಮಂದಿರಕ್ಕೆ ತೆರಳಿದ್ರು..

ಇದನ್ನೂ ಓದಿ: ರಾತ್ರೋರಾತ್ರಿ 30 ವರ್ಷಗಳ ಹಳೆಯ ದೇವರ ವಿಗ್ರಹ ಕದ್ದೊಯ್ದ ಕಳ್ಳರು..!

ಉಪಹಾರ ಸೇವಿಸಲು ಶಿವಯೋಗಮಂದರ ನದಿ ದಡದಲ್ಲಿ ಕೂತಿದ್ರು. ಊಟ ಮಾಡಿ ನಂದಿನಿ ಮಾವಿನಮರದ ನದಿಯಲ್ಲಿ ಕೈ ತೊಳೆಯಲು ಹೋಗಿ, ಜಾರಿ ನದಿಗೆ ಬಿದ್ದಿದ್ದಾರೆ. ಅವ್ರನ್ನ ರಕ್ಷಿಸಲು ಮೈದುನ ವಿಶ್ವನಾಥ್, ತಾಯಿ ಶ್ರೀದೇವಿ ನದಿಗೆ ಹಾರಿದ್ದಾರೆ.. ನದಿಯ ನೀರಲ್ಲಿ ಕೊಚ್ಚಿಹೋಗ್ತಿರೋದನ್ನ ಕಂಡ ಗ್ರಾಮಸ್ಥರು, ಶ್ರಿದೇವಿ ಮಾವಿನಮರದ ಅವ್ರನ್ನ ಹೊರೆತಗೆದಿದ್ದಾರೆ. ಆದ್ರೆ ವಿಶ್ವನಾಥ್ ಹಾಗೂ‌ ಮಗಳು ನಂದಿನಿ ನೀರಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಯಪ್ಪಾ.. ಈ ನೈಜಿರಿಯನ್​​ ಸ್ಮಗ್ಲರ್​ ಹೊಟ್ಟೆಯಲ್ಲಿತ್ತು ಬರೋಬ್ಬರಿ ₹11 ಕೋಟಿ ಮೌಲ್ಯದ ಡ್ರಗ್ಸ್​

ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಹುಡುಕಾಟ ಕಾರ್ಯ ನಡೆದಿದೆ.. ಸ್ಥಳಕ್ಕೆ ಬದಾಮಿ ಪಿ.ಎಸ್.ಐ ಭೇಟಿ‌ ನೀಡಿದ್ದಾರೆ.

Source: newsfirstlive.com Source link