ಹೆಂಡತಿ ಕತ್ತು ಕೂಯ್ದು ಕೊಲೆ ಮಾಡಿದ ಗಂಡ

– ಪತಿ ಜೈಲು ಸೇರುತ್ತಿದ್ದಂತೆ ಮತ್ತೋಬ್ಬನ ಪ್ರೀತಿಯಲ್ಲಿ ಬಿದ್ದಳು

ಮಂಡ್ಯ: ಹೆಂಡತಿ ಬೇರೊಬ್ಬ ಜೊತೆ ಆಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಹೆಂಡತಿಯ ಕುತ್ತಿಗೆ ಕುಯ್ದು ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಲ್ಲುವೀರನಹಳ್ಳಿ ಗ್ರಾಮದಲ್ಲಿ.

ರಾಣಿ ಮೃತಳಾಗಿದ್ದಾಳೆ. ಆಕೆಯ ಪತಿ ಶಿವರಾಜ್ ಅಲಿಯಾಸ್ ಪಿಚ್ಚಾ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಶಿವರಾಜ್ ಅಲಿಯಾಸ್ ಪಿಚ್ಚಾ ಕಳೆದ 20 ವರ್ಷಗಳ ಹಿಂದೆ ಈತ ತನ್ನ ಸ್ವಂತ ಅಕ್ಕನ ಮಗಳಾದ ರಾಣಿಯನ್ನ ಮನಸಾರೆ ಇಷ್ಟಪಟ್ಟು ಮದುವೆಯಾಗಿದ್ದ. ಬಳಿಕ ಇವರ ಪ್ರೀತಿಗೆ ಒಂದು ಗಂಡು ಮಗು ಕೂಡ ಆಗತ್ತೆ. ಆ ಸಂದರ್ಭ ಈತ ಮತ್ತು ಈತನ ಪತ್ನಿ ರಾಣಿ ಕೂಲಿ ಕೆಲಸ ಮಾಡುತ್ತ. ಗ್ರಾಮದಲ್ಲಿ ಸುಖ ಜೀವನ ನಡೆಸಿದ್ದರು. ಇದನ್ನೂ ಓದಿ: ಜೂನಿಯರ್ ಚಿರುಗೆ 10 ತಿಂಗಳು ತುಂಬಿರುವ ಸಂಭ್ರಮ- ಮನಸಾರೆ ನಕ್ಕ ಮೇಘನಾ ರಾಜ್

ಗ್ರಾಮದಲ್ಲಿ ಹೇಗೋ ಕಬ್ಬು ಕಡಿಯುತ್ತ ಕೂಲಿ ಕೆಲಸ ಮಾಡಿಕೊಂಡಿದ್ದ ಶಿವರಾಜ ಅದೊಂದು ದಿನ ಹಣದ ಆಸೆಗೆ ಬಿದ್ದು ತನ್ನ ಇಬ್ಬರು ಸಂಬಂಧಿಕರ ಜೊತೆ ಸೇರಿ ಕಳೆದ 12 ವರ್ಷಗಳ ಹಿಂದೆ ಕನಕಪುರ ತಾಲೂಕಿನ ಹಾರೋಹಳ್ಳಿಯ ಅರ್ಚಕರೊಬ್ಬರ ಹತ್ಯೆ ನಡೆಸಿದ್ದ. ಬಳಿಕ ಅಲ್ಲಿ ದರೊಡೆ ನಡೆಸಿದ್ದ ಚಿನ್ನಾಭರಣಗಳನ್ನು ತನ್ನ ಮನೆಯ ಒಳಗೆ ಹಾಗೂ ಒಂದಷ್ಟು ಚಿನ್ನಾಭರಣಗಳನ್ನ ಮನೆಯ ಹಿತ್ತಲಿನಲ್ಲಿ ಬಚ್ಚಿಟ್ಟಿದ್ದ. ಬಚ್ಚಿಡುವಾಗ ಈತನ 4 ವರ್ಷದ ಮಗ ಯೋಗೇಶ್ ನೋಡಿಬಿಟ್ಟಿದ್ದ. ಇದನ್ನೂ ಓದಿ: ಕೆಜಿಎಫ್ ಬಿಡುಗಡೆಗೆ ದಿನಾಂಕ ನಿಗದಿ – ಏಪ್ರಿಲ್‍ನಲ್ಲಿ ರಾಖಿಬಾಯ್ ಆರ್ಭಟ

ಮಗ ಯೋಗೇಶ ತನ್ನ ಅಪ್ಪ ತಂದು ಅವಿತಿಟ್ಟಿದ್ದ ಚಿನ್ನಾಭರಣಗಳನ್ನ ಪೊಲೀಸರಿಗೆ ತೋರಿಸಿಕೊಟ್ಟಿದ್ದ. ಮೊದಲೇ ಹತ್ಯೆ ವಿಚಾರವಾಗಿ ಈತನನ್ನ ಬಂಧಿಸಿದ್ದ ಪೊಲೀಸರಿಗೆ ಚಿನ್ನಾಭರಣಗಳು ಸಿಕ್ಕಿದ್ದು, ದೊಡ್ಡ ಮಟ್ಟದ ಸಾಕ್ಷಿ ಸಿಕ್ಕಂತಾಗಿತ್ತು. ಹೀಗಾಗಿ ಕಳೆದ ಹತ್ತು ವರ್ಷಗಳಿಂದ ಶಿವರಾಜ ಅಲಿಯಾಸ್ ಪಿಚ್ಚಾ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದ. ಇದನ್ನೂ ಓದಿ: ಮುಖ್ಯಮಂತ್ರಿ ಚಂದ್ರು ಅವನೇನು ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ: ಕಾಶಪ್ಪನವರ್

blank

ಕಳೆದ ಹತ್ತು ವರ್ಷಗಳ ಕಾಲ ಜೈಲು ಪಾಲಾಗಿದ್ದ ಶಿವರಾಜ ಏಳೆಂಟು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ತನ್ನ ಗ್ರಾಮವಾದ ಕಲ್ಲುವೀರನಹಳ್ಳಿಗೆ ವಾಪಸ್ಸಾಗಿದ್ದ. ಈ ಸಂದರ್ಭ ತನ್ನ ಹೆಂಡತಿ ರಾಣಿ ಎಲ್ಲಿ ಅಂತ ತನ್ನ ತಾಯಿ ಪಾಪಮ್ಮಳನ್ನ ವಿಚಾರಿಸಿದ್ದ. ರಾಣಿ ಬಗ್ಗೆ ಮಾಹಿತಿ ನೀಡಿದ ಪಾಪಮ್ಮ ರಾಣಿ ಈಗ ಬೆಂಗಳೂರಿನಲ್ಲಿ ಇದ್ದಾಳೆ. ನೀನು ಜೈಲಿಗೆ ಹೋದ ಬಳಿಕ ಅವಳು ಕೂಡ ಬೆಂಗಳೂರಿಗೆ ಹೋಗಿದ್ದಾಳೆ ಎಂದು ತಿಳಿಸಿದ್ದಾರೆ.

blank

ಮೊದಲು ತನ್ನ ತಮ್ಮನ ಮನೆಯಲ್ಲಿದ್ದ ರಾಣಿ ಹೇಗೋ ಸಣ್ಣಾ ಪುಟ್ಟ ಕೆಲಸ ಮಾಡ್ತ ಬದುಕು ನಡೆಸುತ್ತಿದ್ದಳು. ಆದರೆ ಇತ್ತೀಚೆಗೆ ರಾಣಿಗೆ ಬೇರೊಬ್ಬ ಗಂಡಸಿನ ಜೊತೆ ಸ್ನೇಹ ಬೆಳೆದಿತ್ತು. ಬಳಿಕ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ರಾಣಿ ಗಂಡ ಶಿವರಾಜ ಬರುವ ಹೊತ್ತಿಗೆ ಸರಿಯಾಗಿ 8 ತಿಂಗಳ ತುಂಬು ಗರ್ಭಿಣಿಯಾಗಿದ್ದಳು. ಗರ್ಭಿಣಿಯಾಗಿದ್ದ ರಾಣಿಯನ್ನು ಕಂಡ ಶಿವರಾಜ ಶಾಕ್ ಆಗಿದ್ದ. ಇಷ್ಟಾದರೂ ಕೂಡ ನನಗೆ ನನ್ನ ಹೆಂಡತಿ ರಾಣಿ ಬೇಕೆ ಬೇಕು ಅಂತ ಹೇಳಿದ ಶಿವರಾಜ ಮಗುವಾಗೋವರೆಗೂ ಸುಮ್ಮನಾಗಿದ್ದ ಬಳಿಕ ಮಗುವಾಗ್ತಿದ್ದಂತೆ. ಸ್ವಲ್ಪ ದಿನ ಕಳೆಯಿತ್ತಿದ್ದಾಗೆ ಆ ಮಗುವನ್ನ ಬೇರೊಬ್ಬರಿಗೆ ಕೊಡಿಸಿ. ತನ್ನ ಪತ್ನಿ ರಾಣಿಯನ್ನ ಮತ್ತೆ ಕಲ್ಲುವೀರನಹಳ್ಳಿ ಗ್ರಾಮಕ್ಕೆ ಕರೆ ತಂದಿದ್ದ. ಇದನ್ನೂ ಓದಿ: ಮದಲೂರು ಕೆರೆಗೆ ನೀರು ಬಿಡಲ್ಲ ಎನ್ನಲು ಮಾಧುಸ್ವಾಮಿಗೆ ನೈತಿಕತೆ ಇಲ್ಲ: ಟಿ.ಬಿ.ಜಯಚಂದ್ರ

ಹೇಗೋ ರಾಣಿಯ ಮನವೊಲಿಸಿ ಕರೆತಂದ ಶಿವರಾಜ ಗ್ರಾಮದಲ್ಲಿ ತನ್ನ ಪತ್ನಿ ಜೊತೆ ಸಂಸಾರ ನಡೆಸಿದ್ದ. ಆದರೆ ಈ ಮದ್ಯೆ ಶುಕ್ರವಾರ ರಾತ್ರಿ ಅದೆನಾಯ್ತೋ ಇಬ್ಬರ ನಡುವೆ ಗೊತ್ತಿಲ್ಲ. ಆದರೆ ಶಿವರಾಜ ರಾಣಿಯ ಕತ್ತು ಕುಯ್ದು ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ಭಾನುವಾರದ ಬಾಡೂಟಕ್ಕೆ ಫಟಾಫಟ್ ಮಾಡಿ ಸಿಗಡಿ ಫ್ರೈ

blank

ರಾಣಿಯನ್ನ ಮತ್ತೆ ಮನೆಗೆ ಕರೆತಂದಿದ್ದ ಶಿವರಾಜ ತನ್ನ ಪತ್ನಿ ಜೊತೆ ಪ್ರತಿ ದಿನ ರಾಣಿ ಮತ್ತು ಆಕೆಯ ಪ್ರಿಯಕರನ ವಿಚಾರವಾಗಿ ಕ್ಯಾತೆ ಆರಂಭಿಸಿದ್ದ. ಇಬ್ಬರ ನಡುವೆ ಆಗಾಗ್ಗೆ ಗಲಾಟೆ ಕೂಡ ನಡಿತಿತ್ತು. ಇ ವಿಚಾರವಾಗಿ ಕೊಪಗೊಂಡಿದ್ದ ಶಿವರಾಜ ಮೊನ್ನೆ ರಾತ್ರಿ ರಾಣಿ ಮಲಗಿದ್ದಾಗ ಆಕೆಯ ಕತ್ತನ್ನ ಸೀಳಿಬಿಟ್ಟಿದ್ದಾನೆ. ಬಳಿಕ ಯಾರಿಗೂ ಗೊತ್ತಾಗಬಾರದು ಅಂತ ಆಕೆಯ ಕತ್ತಿನಿಂದ ಚಿಮ್ಮಿದ ರಕ್ತವನ್ನ ಬಕೇಟೊಂದಕ್ಕೆ ತುಂಬಿದ್ದಾನೆ. ಬಳಿಕ ಯಾರಿಗೂ ತಿಳಿಯದಂತೆ ರಾತ್ರೋ ರಾತ್ರಿ ತನ್ನ ಮನೆಯ ಹಿಂಭಾಗ ಅರ್ಧ ಕಿ.ಮೀ. ನಷ್ಟು ದೂರದಲ್ಲಿ ರಾಣಿಯ ಮೃತ ದೇಹ ತೆಗೆದುಕೊಂಡು ಹೋಗಿದ್ದಾನೆ. ಮೊದಲೆ ಕತ್ತಲೆಯಾಗಿದ್ದರಿಂದ ಗ್ರಾಮದ ಸತೀಶ್ ಎಂಬುವವರ ಜಮೀನಿನಲ್ಲಿ ಒಂದು ಅಡಿಯಷ್ಟು ಹಳ್ಳ ತೆಗೆದು ರಾಣಿಯ ಮೃತ ದೇಹ ಊತಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಈ ಬಗ್ಗೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: publictv.in Source link