ಭೂಮಿಪೂಜೆ ವೇಳೆ ಹಾಲಿ, ಮಾಜಿ ಶಾಸಕರ ನಡುವೆ ಜಟಾಪಟಿ.. ಕೊನೆಗೇನಾಯ್ತು ಗೊತ್ತಾ..?

ಭೂಮಿಪೂಜೆ ವೇಳೆ ಹಾಲಿ, ಮಾಜಿ ಶಾಸಕರ ನಡುವೆ ಜಟಾಪಟಿ.. ಕೊನೆಗೇನಾಯ್ತು ಗೊತ್ತಾ..?

ರಾಯಚೂರು: ರಸ್ತೆ ಕಾಮಗಾರಿಗೆ ಭೂಮಿ ಪೂಜೆ ವೇಳೆ ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲಿಗರ ಜಟಾಪಟಿ ನಡೆದಿದೆ. ಲಿಂಗಸೂಗೂರಿನ ಕಾಂಗ್ರೆಸ್​ ಶಾಸಕ ಡಿ.ಎಸ್.ಹೂಲಿಗೇರಿ ಹಾಗೂ ಮಾಜಿ ಶಾಸಕ ಬಿಜೆಪಿಯ ಮಾನಪ್ಪ ವಜ್ಜಲ್​ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ.

blank

ಹಟ್ಟಿ-ಚಿಂಚರಗಿ ರಸ್ತೆ ಕಾಮಗಾರಿ ಭೂಮಿ ಪೂಜೆಗೆ ಬಂದಿದ್ದ ಶಾಸಕ ಡಿ.ಎಸ್.ಹೂಲಗೇರಿ ಅವರಿಗೆ ಮಾಜಿ ಶಾಸಕ ಮಾನಪ್ಪ ವಜ್ಜಲ್ ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ಶಾಸಕರು ಮತ್ತು ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ಭೂಮಿ ಪೂಜೆ ಮಾಡುತ್ತಿದ್ದಾರೆ ಅಂತಾ ಮಾನಪ್ಪ ವಜ್ಜಲ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದ್ದಲದ ನಡುವೆಯೇ ಶಾಸಕ ಡಿ.ಎಸ್.ಹೂಲಗೇರಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಭೂಮಿ ಪೂಜೆ ನಂತರ ಶಾಸಕ ಡಿ.ಎಸ್. ಹೂಲಗೇರಿಯವರನ್ನ ಕಾರ್ಯಕರ್ತರು ಎತ್ತಿ ಕುಣಿಸಿದ್ದಾರೆ.

ಇದನ್ನೂ ಓದಿ: ಮಾಜಿ ಪ್ರಧಾನಿಗೆ ರಾಖಿ ಕಟ್ಟಿದ ಜೆಡಿಎಸ್​ ಕಾರ್ಯಕರ್ತೆ..

Source: newsfirstlive.com Source link