ಒಲಿಂಪಿಯನ್ ಮಾಜಿ ಫುಟ್​ಬಾಲ್ ಆಟಗಾರ ಸೈಯದ್ ಶಾಹೀದ್ ಹಕೀಮ್ ಕಲಬುರಗಿಯಲ್ಲಿ ನಿಧನ

ಒಲಿಂಪಿಯನ್ ಮಾಜಿ ಫುಟ್​ಬಾಲ್ ಆಟಗಾರ ಸೈಯದ್ ಶಾಹೀದ್ ಹಕೀಮ್ ಕಲಬುರಗಿಯಲ್ಲಿ ನಿಧನ

ಕಲಬುರಗಿ: ಒಲಿಂಪಿಕ್ಸ್​ನ ಮಾಜಿ ಫುಟ್ ಬಾಲ್ ಆಟಗಾರ, ಫಿಫಾ ಇಂಟರ್​ನ್ಯಾಷನಲ್ ರೆಫರಿ ಸೈಯದ್ ಶಾಹೀದ್ ಹಕೀಮ್ (82) ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಲಬುರಗಿ ನಗರದ ಪಿಎನ್ ಟಿ ಕಾಲೋನಿಯ ಹೌಸಿಂಗ್ ಬೋರ್ಡ್ ನಲ್ಲಿರುವ ನಿವಾಸದಲ್ಲಿ ಸೈಯದ್ ಹಕೀಮ್ ಸಾವನ್ನಪ್ಪಿದ್ದು ಇವರ ಅಂತ್ಯಕ್ರಿಯೆ ಹೈದ್ರಾಬಾದ್​ನಲ್ಲಿ ನಡೆಯಲಿದೆ ಎನ್ನಲಾಗಿದೆ. ಹೈದ್ರಾಬಾದ್ ನಲ್ಲಿ ನಡೆಯಲಿರುವ ಸೈಯದ್ ಶಾಹೀದ್ ಹಕೀಮ್ ಅಂತ್ಯಕ್ರಿಯೆ. ಶಾಹೀದ್ ಹಕೀಮ್ ಅವರ ತಂದೆಯ ಅಂತ್ಯಸಂಸ್ಕಾರ ನಡೆದ ಜಾಗದ ಪಕ್ಕದಲ್ಲೇ ಅಂತ್ಯ ಸಂಸ್ಕಾರ ಮಾಡೋದಕ್ಕೆ ಕುಟುಂಬಸ್ಥರು ಮುಂದಾಗಿದ್ದಾರೆ.

blank

ಒಲಿಂಪಿಕ್ಸ್ ಫುಟ್ಬಾಲ್ ಮಾಜಿ​ ಆಟಗಾರರಾಗಿದ್ದ ಶಾಹಿದ್ 1960ರಲ್ಲಿ ರೋಮ್ ಒಲಿಂಪಿಕ್ಸ್‌ನಲ್ಲಿ ಆಡಿದ್ದರು. ಭಾರತೀಯ ಫುಟ್ಬಾಲ್‌ನೊಂದಿಗೆ 5 ದಶಕಗಳ ಒಡನಾಟ ಹೊಂದಿದ್ದರು. 1988ರ ಏಷಿಯನ್ ಕಪ್​ನಲ್ಲಿ ಹಲವು ಪಂದ್ಯಗಳ ಮೇಲ್ವಿಚಾರಣೆ ವಹಿಸಿಕೊಂಡಿದ್ದರು. ಪ್ರತಿಷ್ಠಿತ ದ್ರೋಣಾಚಾರ್ಯ, ಮೇಜರ್​ ಧ್ಯಾನ್​ಚಂದ್​ ಪ್ರಶಸ್ತಿ ಪುರಸ್ಕಾರಕ್ಕೆ ಹಕೀಮ್ ಒಳಗಾಗಿದ್ದರು.

Source: newsfirstlive.com Source link