ಕೆಜಿಎಫ್‍ನಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡರೂ ಅದು ದೊಡ್ಡದೇ – ವಸಿಷ್ಠ ಸಿಂಹ

ಬೆಂಗಳೂರು: ಕೆಜಿಎಫ್ ಸಿನಿಮಾ ಟೀಂ 2022ರ ಏಪ್ರಿಲ್ 14 ರಂದು ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಸಿನಿಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಈ ವಿಚಾರವಾಗಿ ನಟ ವಶಿಷ್ಠ ಸಿಂಹ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದಾರೆ.

ಕೆಜಿಎಫ್ ಸಿನಿಮಾ ಬಿಡುಗಡೆಯ ದಿನಾಂಕವನ್ನು ನಿಗದಿ ಮಾಡಿರುವ ವಿಚಾರವನ್ನು ಹಂಚಿಕೊಳ್ಳುವುದು ತುಂಬಾ ಸಂತೋಷವಾಗಿದೆ. ಎಲ್ಲರೂ ಈ ಸಿನಿಮಾವನ್ನು ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ. ಕೊರೊನಾ ಕಾರಣದಿಂದಾಗಿ ಇವತ್ತು ನಾಳೆ ಎಂದು ಮುಂದೂಡುತ್ತಾ ಬಂದಿದ್ದೇವು. ಈ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದವರಿಗೆ ಮತ್ತು ಸಿನಿಮಾದಲ್ಲಿ ಕೆಲಸ ಮಾಡಿದವರಿಗೆ ಇದೇ ಜೀವನೋಪಾಯವಾಗಿರುವುದರಿಂದ ಇದು ಮುಖ್ಯವಾಗುತ್ತದೆ. ಹೀಗಾಗಿ ಸಿನಿಮಾ ಮಂದಿರಗಳಲ್ಲಿ ಸಿನಿಮಾ ತೆರೆ ಕಾಣುವುದು ಮುಖ್ಯವಾಗುತ್ತದೆ ಎಂದರು.

ಸಿನಿಮಾವನ್ನು ನೋಡಲು ಜನ ಬರಬೇಕು. ಸಿನಿಮಾ ಮಂದಿರಗಳಲ್ಲಿ ಜನ ಸೇರಬೇಕು ಎಂದು ಇರುತ್ತದೆ. ಇದೀಗ ಕೊರೊನಾದಿಂದಾಗಿ ಸ್ವಲ್ಪ ಜನಜೀವನ ಅಸ್ತವ್ಯಸ್ತವಾಗಿರುವುದರಿಂದ ಹಾಗೂ ಕೊರೊನಾ ಲಾಕ್‍ಡೌನ್ ಆಗಬಹುದಾ? ಎನ್ನುವ ಆತಂಕದಿಂದ ಸಿನಿಮಾ ಬಿಡುಗಡೆಗೆ ದಿನಾಂಕವನ್ನು ನಿಗದಿ ಮಾಡಲಾಗಿದೆ. ಮುಂದಿನ ವರ್ಷ ಸಮ್ಮರ್‌ನಲ್ಲಿ  ಸಿನಿಮಾವನ್ನು ತೆರೆಗೆ ತರುವ ನಿರ್ಧಾರವನ್ನು ಮಾಡಲಾಗಿದೆ ಎಂದರು.

ನಾವು ಮೊದಲು ಆರೋಗ್ಯವಾಗಿರೋಣ. ಜನ ಸಿನಿಮಾಮಂದಿರಕ್ಕೆ ಬಂದು ಈ ಸಿನಿಮಾವನ್ನು ನೋಡಬೇಕು. ನಮ್ಮ ಸಿನಿಮಾವನ್ನು ಜನ ನೋಡುವುದು ಒಪ್ಪಿ, ಅಪ್ಪಿಕೊಳ್ಳುವುದನ್ನು ನೋಡಲು ನಾವು ಕಾಯುತ್ತಿದ್ದೇವೆ. ನಿರ್ದೆಶಕರು, ಯಶ್ ಅವರು ಕುಳಿತು ಸಿನಿಮಾ ಬಿಡುಗಡೆಯ ದಿನಾಂಕವನ್ನು ನಿಗದಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಬಿಡುಗಡೆಗೆ ದಿನಾಂಕ ನಿಗದಿ – ಏಪ್ರಿಲ್‍ನಲ್ಲಿ ರಾಖಿಬಾಯ್ ಆರ್ಭಟ

ನಮ್ಮ ಕನ್ನಡ ಈ ಸಿನಿಮಾದಲ್ಲಿ ನಾವು ಒಂದು ಪಾರ್ಟ್ ಆಗಿರುವುದು ತುಂಬಾ ಹೆಮ್ಮೆ ಮತ್ತು ಖುಷಿ ಇದೆ. ಎಲ್ಲರೂ ಈ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ ಎಂದಾದರೆ ಈ ಸಿನಿಮಾ ಮಾಡಿರುವ ಖ್ಯಾತಿಯಾಗಿದೆ. ಯಶ್ ಅವರ ಟೀಸರ್ ಬಂದಿರುವಾಗ ಒಂದು ದಾಖಲೆಯನ್ನು ಮಾಡಿದೆ. ಸಿನಿಮಾಕ್ಕಾಗಿ ಜನ ಎಷ್ಟು ಕಾಯುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.ಈ ಸಿನಿಮಾದ ಒಂದೊಂದು ಪೋಸ್ಟರ್ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಕೆಜಿಎಫ್ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಬಹುಮುಖ್ಯವಾಗಿದೆ. ಈ ಸಿನಿಮಾ ವಿಚಾರವಾಗಿ ಚಿತ್ರತಂಡದಿಂದ ಬರುವ ಮಾಹಿತಿ, ಇನ್ನಷ್ಟ ಅನೌನ್ಸಮೆಂಟ್ಸ್‍ಗಳು ಬಹುಮುಖ್ಯವಾಗಿರುತ್ತವೆ ಎಂದು ಹೇಳುವ ಮೂಲಕವಾಗಿ ಸಿನಿಮಾ ಕುರಿತಾಗಿ ಇನ್ನಷ್ಟು ಆಸಕ್ತಿ ಹುಟ್ಟಿಸಿದ್ದಾರೆ.

Source: publictv.in Source link