ಕಾಬೂಲ್​​ನಿಂದ ಭಾರತಕ್ಕೆ ಬಂದ ಮಗುವಿಗೆ ಮುತ್ತಿಟ್ಟು ಮುದ್ದಾಡಿದ ಪುಟ್ಟ ಬಾಲಕಿ; ವಿಡಿಯೋ ವೈರಲ್​​

ಕಾಬೂಲ್​​ನಿಂದ ಭಾರತಕ್ಕೆ ಬಂದ ಮಗುವಿಗೆ ಮುತ್ತಿಟ್ಟು ಮುದ್ದಾಡಿದ ಪುಟ್ಟ ಬಾಲಕಿ; ವಿಡಿಯೋ ವೈರಲ್​​

ಕಾಬೂಲ್​​: ಅಫ್ಘಾನಿಸ್ತಾನದ ಕಾಬೂಲ್​​ನಿಂದ ಹೊರಟ ಭಾರತೀಯ ವಾಯುಪಡೆ ವಿಮಾನ ದೇಶದ 107 ಮಂದಿ ಸೇರಿದಂತೆ ಒಟ್ಟು 168 ಜನರನ್ನು ಹೊತ್ತು ಗಾಜಿಯಾಬಾದಿನ ಹಿಡನ್​​​​​ ವಾಯುನೆಲೆಯಲ್ಲಿ ಸುರಕ್ಷಿತವಾಗಿ ಬಂದು ಲ್ಯಾಂಡ್​​ ಆಗಿದೆ. ಭಾರತಕ್ಕೆ ಬರುತ್ತಿದ್ದಂತೆಯೇ ಈ 168 ಮಂದಿಯೂ ನಿಟ್ಟುಸಿರು ಬಿಟ್ಟಿದ್ದಾರೆ.

ತಾಲಿಬಾನ್​​ನಿಂದ ಪಾರಾದೆವು ಎಂದು ಹಲವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ನಮ್ಮ ಇಡೀ ದೇಶ ಸರ್ವನಾಶವಾಗಿದೆ. ಹಾಗಾಗಿ ನಾನು ಮಗಳೊಂದಿಗೆ ಇಬ್ಬರು ಮೊಮ್ಮಕ್ಕಳನ್ನು ಕರೆದುಕೊಂಡು ಬಂದಿದ್ದೇನೆ. ಭಾರತೀಯರು ನನ್ನ ರಕ್ಷಣೆಗೆ ನಿಂತಿದೆ ಎಂದು ಭಾವುಕರಾಗಿದ್ದಾರೆ.

ಇನ್ನೊಂದೆಡೆ ಗಾಜಿಯಾಬಾದಿನ ವಿಮಾನ ವಾಯುನೆಲೆಯಲ್ಲಿ ಬಂದಿಳಿದ ಕೂಡಲೇ ತಾಯಿ ಕಂಕುಳಲ್ಲಿದ್ದ ಮಗುವೊಂದಕ್ಕೆ ಪುಟ್ಟ ಬಾಲಕಿಯೊಬ್ಬಳು ಮುತ್ತಿಕ್ಕಿ ಮುದ್ದಾಡಿದ್ದಾಳೆ. ಈ ವಿಡಿಯೋ ಈಗ ಭಾರೀ ವೈರಲ್​​​ ಆಗಿದ್ದು, ಹೃದಯ ಸ್ಪರ್ಶಿಯಾಗಿದೆ.

ಇದನ್ನೂ ಓದಿ: ಆ.13ರಂದೇ ಅಧಿಕಾರ ಸ್ವೀಕಾರಸಿದ್ದ ಎಸ್​​.ಆರ್​​​.ಬೊಮ್ಮಾಯಿ- ಸಿಎಂ ಬೊಮ್ಮಾಯಿಗೆ ಇದ್ಯಾ 13ರ ಕಂಟಕ?

Source: newsfirstlive.com Source link