10 ವರ್ಷ ಮನಮೋಹನ್​ ಸಿಂಗ್​ ಇದ್ರು, ಮೋದಿ 7 ವರ್ಷ ಏನ್​ ಮಾಡಿದ್ರು..?

10 ವರ್ಷ ಮನಮೋಹನ್​ ಸಿಂಗ್​ ಇದ್ರು, ಮೋದಿ 7 ವರ್ಷ ಏನ್​ ಮಾಡಿದ್ರು..?

ಬೆಂಗಳೂರು: ಇಂದು ಸುದ್ದಿಗೋಷ್ಠಿ ನಡೆಸಿದ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಹಲವು ವಿಚಾರಗಳ ಕುರಿತು ಮಾತನಾಡಿದರು..

ನಮ್ಮ ರಾಜ್ಯದ ಹಿತಕ್ಕಾಗಿ ಪ್ರಾದೇಶಿಕ ಪಕ್ಷವಾಗಿ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದೇವೆ. ದೆಲ್ಲಿನಲ್ಲಿ ಯಾರು ರಾಜ್ಯ ಆಳ್ತಾರೋ ಅವರು ಈ ರೀತಿ ಹೋರಾಟ ಮಾಡೋಕಾಗಲ್ಲ.. 10 ವರ್ಷ ಮನಮೋಹನ್ ಸಿಂಗ್ ಇದ್ರು.. ಈಗ ಇವರಿದ್ದಾರೆ.. ಏನ್ ಮಾಡಿದ್ರು..? ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: ರಾಹುಲ್​​ ಗಾಂಧಿ ಯುವ ನಾಯಕ, ಯಾರೂ ಲಘುವಾಗಿ ಮಾತಾಡಬಾರದು -ದೇವೇಗೌಡ

ಹಣ ಒದಗಿಸೋದಕ್ಕೆ ನಿರ್ಣಯ ಮಾಡಿದ್ದು ಇವತ್ತಿಗೂ ನಡೆದುಕೊಂಡು ಹೋಗ್ತಿದೆ.. ವಾಜಪೇಯಿ, ಮನಮೋಹನ್ ಸಿಂಗ್ ಮೋದಿ ಯಾರೂ ಅದನ್ನ ತೆಗೆಲಿಲ್ಲ. ಈಗ ಸ್ವಲ್ಪ ಹಣ ಕಡಿಮೆ ಮಾಡಿಬಿಟ್ಟಿದ್ದಾರೆ. ನಾವು ಮೇಕೆದಾಟನ್ನ ಕಟ್ತೀವಿ.. ಕುಡಿಯೋ ನೀರಿಗೆ ಬಳಕೆ ಮಾಡ್ತೀವಿ ಅಂದ್ರೆ ಅವರು ಒಪ್ಪಲ್ಲ. ಅವರು ಹೊಗೆನಕಲ್​ನಲ್ಲಿ ಕಟ್ಟಿ ಅಂತಾರೆ. ಹೊಗೆನಕಲ್​ನಲ್ಲಿ ಕಟ್ಟಿದ್ರೆ ಕ್ಯಾಚ್​ಮೆಂಟ್ ಏರಿಯಾ ದೊಡ್ಡದು.. ನೀರಿನ ಶೇಖರಣೆ ಆಗಲ್ಲ ಎಂದರು.

Source: newsfirstlive.com Source link