KGF-2 ರಿಲೀಸ್​ಗೆ ಮುಹೂರ್ತ ಫಿಕ್ಸ್! ಥಿಯೇಟರ್​ಗೆ ಯಾವಾಗ ಬರ್ತಾನೆ ಗೊತ್ತಾ ರಾಕಿ ಭಾಯ್​?

KGF-2 ರಿಲೀಸ್​ಗೆ ಮುಹೂರ್ತ ಫಿಕ್ಸ್! ಥಿಯೇಟರ್​ಗೆ ಯಾವಾಗ ಬರ್ತಾನೆ ಗೊತ್ತಾ ರಾಕಿ ಭಾಯ್​?

ಅಂತು ಇಂತು ರಾಕಿ ಭಾಯ್ ಎರಡನೇ ಕೆಜಿಎಫ್ ಮೂಲಕ ಅಖಾಡಕ್ಕೆ ಇಳಿಯೋ ಡೇಟ್ ಫೈನಲಿ ಫಿಕ್ಸ್ ಆಯ್ತು.. ನಾವು ಹೇಳ್ದಂಗೆ ನೀವು ಕೇಳ್ದಂಗೆ ನಾವು ಥಿಯೇಟರ್​ಗೆ ಬಂದೇ ಬರ್ತಿವಿ ಎಂದು ರಾಕಿಂಗ್ ಸ್ಟಾರ್ ಯಶ್ ಘೋಷಣೆ ಮಾಡಿದ್ದಾರೆ.. ಯಾವಾಗ ಕೆಜಿಎಫ್ ಚಾಪ್ಟರ್ 2 ರಿಲೀಸ್?​.

ಕಳೆದ ದಿನ ತೆಲುಗು ನಟ ಆಲಿ ಕೆಜಿಎಫ್ ಚಾಪ್ಟರ್ 2 ಬರೋ ನಿರೀಕ್ಷೆಯ ಬಗ್ಗೆ ಹೇಳಿದ್ದನ ನಾವು ನಿಮಗೆ ಎಳೆ ಎಳೆಯಾಗಿ ಹೇಳಿದ್ವಿ.. ಕೆಜಿಎಫ್ ಕನ್ನಡದ ಹಾಲಿವುಡ್ ಸಿನಿಮಾ ಅಂತೆಲ್ಲ ಬೆಟ್ಟದಷ್ಟು ನಿರೀಕ್ಷೆಯನ್ನ ಸಮಸ್ತ ಸಿನಿಮಾ ಪ್ರೇಕ್ಷಕರು ಇಟ್ಟುಕೊಂಡಿದ್ದಾರೆ.. ಬರಿ ಪ್ರೇಕ್ಷಕರಷ್ಟೆ ಅಲ್ಲ ಭಾರತೀಯ ಸಿನಿಮಾ ಮಂದಿ ಕೂಡ ಎರಡನೇ ಕೆಜಿಎಫ್​​​ ಬಗ್ಗೆ ಎದುರು ನೋಡ್ತಿದ್ದಾರೆ.. ಅಂತು ಇಂತು ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವಾದ್ಯಂತ ತೆರೆಕಾಣೋ ದಿನಾಂಕವನ್ನ ಮೂರನೇ ಬಾರಿಗೆ ನಿಗದಿ ಮಾಡಿದೆ ಹೊಂಬಾಳೆ ಫಿಲಂಸ್.. ​​

ಅಂತು ಇಂತು KGF-2 ರಿಲೀಸ್ ಮುಹೂರ್ತ ಫಿಕ್ಸ್
ಈ ವರ್ಷ ಬಿಟ್ಟು ಮುಂದಿನ ವರ್ಷ ಬರುತ್ತಿದೆ KGF-2

ನಾವು ನಿಮಗೆ ಕೆಲ ದಿನಗಳ ಹಿಂದೆ ಹೇಳಿದ್ವಿ.. ಈ ವರ್ಷ ಯಾವುದೇ ಕಾರಣಕ್ಕೂ ಕೆಜಿಎಫ್ ಚಾಪ್ಟರ್ 2 ಬರಲ್ಲ ಅಂತ.. ಕೆಜಿಎಫ್ ಎರಡನೇ ಅಧ್ಯಾಯದ ಕೆಲಸ ಕಾರ್ಯಗಳ ಬಾಕಿ ಇವೆ, ಕೆಜಿಎಫ್ ತಂಡದ ಮಾರುಕಟ್ಟೆಯ ಪ್ಲಾನ್​ ಬೇರೆನೇ ಇದೆ ಅಂತ.. ಫೈನಲಿ ನಮ್ಮ ಮಾಹಿತಿ ನಿಜವಾಗಿದೆ ಜೊತೆಗೆ ಎರಡನೇ ಕೆಜಿಎಫ್ ಬರೋ ಡೇಟ್ ಕೂಡ್ ಫಿಕ್ಸ್ ಆಗಿದೆ..

ಶುರು ಚಿತ್ರಪ್ರೇಮಿಗಳಲ್ಲಿ KGF-2 ಸಂಚಲನ
2022ರ ಏಪ್ರಿಲ್ 14ರಂದು KGF-2 ರಿಲೀಸ್

ಬರೊಬ್ಬರಿ 10 ನಿರೀಕ್ಷಿತ ಸಿನಿಮಾಗಳ ಸೇರಿ ಸೌಂಡ್ ಮಾಡಿದ್ರೇ ಏನಾಗುತ್ತೆ ಅನ್ನೋದನ್ನ ಊಹಿಸೋದಾದ್ರೆ ಕೆಜಿಎಫ್ ಸಿನಿಮಾ ಅಂತ ಹೇಳಿಬಿಡಬಹುದು.. ಕಳೆದು ಮೂರು ವರ್ಷದಿಂದ ಇಂಡಿಯಾದ ನಾರ್ಥ್ ನಿಂದ ಸೌಥ್ ನವರಿಗೆ ಈಸ್ಟ್​ನಿಂದ ವೆಸ್ಟ್​​​ನವರೆಗೆ ಕೆಜಿಎಫ್ ಸಿನಿಮಾದೇ ಹಾವಳಿ ಅಭಿಮಾನದ ಪ್ರಭಾವಳಿ.. ಕೊನೆಗೂ ಅಂತು ಇಂತು ಕೆಜಿಎಫ್-2 ಸಿನಿಮಾ ರಿಲೀಸ್ ಡೇಟ್ ಅಧಿಕೃತ ಘೋಷಣೆಯಾಗಿದೆ.. ಯಾರು ಊಹಿಸದ ಡೇಟ್​​​ಗೆ ಕೆಜಿಎಫ್ ಅಧ್ಯಾಯ 2 ಬಿಡುಗಡೆ ದಿನಾಂಕ ಘೋಷಣೆಯಾಗಿದೆ.. ಏಪ್ರಿಲ್ 14 2022 ರಂದು ಕೆಜಿಎಫ್​ ಚಾಪ್ಟರ್ 2 ಸಿನಿಮಾ ವಿಶ್ವಾದ್ಯಂತ ತೆರೆಕಾಣುತ್ತಿದೆ..

blank

ಸಮಸ್ತ ಕೆಜಿಎಫ್ ಸಿನಿಮಾ ಪ್ರೇಮಿಗಳಲ್ಲಿ ಒಂದೇ ಕೊರಿಕೆ.. ಈ ಹಿಂದಿನಂತೆ ಆಗದಿರಲಿ , ಕೆಜಿಎಫ್ 2 ಹೇಳಿದ ದಿನಾಂಕದಂತೆ ಬಿಡುಗಡೆಯಾಗಲಿ ಅಂತ.. ಅಭಿಮಾನಿಗಳ ಒಳ ಮನಸಿನ ಕೋರಿಕೆ ಇದು.. ಈ ಹಿಂದೆ ಒಂದನೇ ಲಾಕ್ ಡೌನ್ ಆಗೋದಕ್ಕೂ ಮುನ್ನ 2020 ಅಕ್ಟೋಬರ್ 23ರಂದು ಕೆಜಿಎಫ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿತ್ತು.. ಆದ್ರೆ ಒಂದನೇ ಲಾಕ್ ಡೌನ್ ಆಗಿ ಹೋಯ್ತು.. ತದ ನಂತರ ಈ ವರ್ಷದ ಅಂದ್ರೆ 2021ರ ಜುಲೈ 16ನೇ ತಾರೀಖ್ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗೋ ಡೇಟ್ ಫಿಕ್ಸ್ ಆಗಿತ್ತು.. ಆದ್ರೆ ಎರಡನೇ ಲಾಕ್ ಡೌನ್ ಕಾರಣ ರಿಲೀಸ್​​​ ಆಗ್ಲೇ ಇಲ್ಲ.. ಈಗ ಮೂರನೇ ಬಾರಿಗೆ ಕೋಲಾರ ಗೋಲ್ಡ್ ಫಿಲ್ಡ್ ರೋಚಕದ ಎರಡನೇ ಅಧ್ಯಾಯ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ.. ಮುಂದಿನ ವರ್ಷದ ಏಪ್ರಿಲ್ 22ರಂದು ನಿರೀಕ್ಷಿತ ಕೆಜಿಎಫ್-2 ವಿಶ್ವಾದ್ಯಂತ ತೆರೆಕಾಣಲಿದೆ..

ಈ ಹಿಂದೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಓಟಿಟಿ ಫ್ಲಾಟ್ ಪಾರ್ಮ್ ಒಂದರಿಂದ 255 ಕೋಟಿಗೆ ಸೇಲ್ ಆಗಲು ಆಫರ್ ಬಂದಿದೆ ಎನ್ನಲಾಗಿತ್ತು.. ಆದ್ರೆ ಈಗ ಓಟಿಟಿ ಆಫರ್ ಬಗ್ಗೆ ಚಿತ್ರತಂಡ ರಿಲೀಸ್ ಡೇಟ್ ಸಮೇತ ಉತ್ತರ ಕೊಟ್ಟಿದ್ದು ;‘‘ನಾವು ಹೇಳಿದಂತೆ ಥಿಯೇಟರ್​​ನಲ್ಲಿ ಬರುತ್ತೇವೆ, ನಿಮ್ಮನ ರಂಜಿಸುತ್ತೇವೆ’’ ಎಂದು ಉತ್ತರ ಕೊಟ್ಟಿದೆ.. ಒಟ್ಟಿನಲ್ಲಿ ಸಮಸ್ತ ಸಿನಿಮಾ ಪ್ರೇಮಿಗಳಿಗೆ ಯಶ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್2 ಧೀಡಿರ್ ರಿಲೀಸ್ ಅನೌನ್ಸ್​​ಮೆಂಟ್ ಅಚ್ಚರಿಯ ಆನಂದವನ್ನ ಉಂಟುಮಾಡಿದೆ..

Source: newsfirstlive.com Source link