ವಿಭಿನ್ನವಾಗಿ ರಕ್ಷಾ ಬಂಧನ ಆಚರಿಸಿದ ಸೆಲೆಬ್ರಿಟಿಗಳು

ಬೆಂಗಳೂರು: ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ ರಕ್ಷಾ ಬಂಧನ ಸಹೋದರ-ಸಹೋದರಿಯ ಪ್ರೀತಿಯ ಪ್ರತೀಕವೇ ರಕ್ಷಾ ಬಂಧನ ಹಬ್ಬದ ವಿಶೇಷ. ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಸಹೋದರಿಯರು ತನ್ನ ಸಹೋದರರಿಗೆ ಪ್ರೀತಿಯ ಶ್ರೀರಕ್ಷೆಯನ್ನು ಕಟ್ಟುವುದು ಸಂಪ್ರದಾಯವಾಗಿದೆ. ಆದರೆ ರಕ್ಷಾ ಬಂಧನ ಹಬ್ಬವನ್ನು ಕೆಲ ತಾರೆಯರು ವಿಶಿಷ್ಟವಾಗಿ ಆಚರಿಸಿದ್ದಾರೆ.

ರಕ್ಷಾ ಬಂಧನ ಹಬ್ಬದ ಪ್ರಯುಕ್ತ ನಟಿ ಸುಧಾರಾಣಿ ಪುತ್ರಿ ನಿಧಿ ತಮ್ಮ ಮುದ್ದಿನ ಶ್ವಾನಗಳಿಗೆ ಆರತಿ ಮಾಡಿ, ತಿಲಕ ಇಟ್ಟು, ರಾಖಿ ಕಟ್ಟಿದ್ದಾರೆ. ಈ ವೀಡಿಯೋವನ್ನು ನಟಿ ಸುಧಾರಾಣಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ನೋಡಿದ ನೆಟ್ಟಿಗರು ವಾವ್ ಕ್ಯೂಟ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:  ಕೆಜಿಎಫ್‍ನಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡರೂ ಅದು ದೊಡ್ಡದೇ – ವಸಿಷ್ಠ ಸಿಂಹ

 

View this post on Instagram

 

A post shared by Sudharani (@sudharanigovardhan)

ತಮ್ಮ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡು ನಟಿ ತಾಪ್ಸಿ ಪಣ್ಣು ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ. ರಕ್ಷಕರಿಗೆ ಲಿಂಗ ಮುಖ್ಯವಲ್ಲ. ಹ್ಯಾಪಿ ರಕ್ಷಾ ಬಂಧನ. ನಾನು ಹಿರಿಯ ಸಹೋದರಿಯಾದ್ದರಿಂದ ನನಗೆ ರಾಖಿ ಕಟ್ಟುವಂತೆ ನಾನು ಬಲವಂತ ಮಾಡುತ್ತೇನೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ತಾಪ್ಸಿ ಪಣ್ಣು ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಸಹೋದರಿ ಶಗುನ್ ಪಣ್ಣು ಜೊತೆಗಿನ ಫೋಟೋವನ್ನೂ ಇನ್‍ಸ್ಟಾಗ್ರಾಮ್‍ನಲ್ಲಿ ತಾಪ್ಸಿ ಪಣ್ಣು ಹಂಚಿಕೊಂಡಿದ್ದಾರೆ.

 

View this post on Instagram

 

A post shared by Taapsee Pannu (@taapsee)

ನಮ್ಮ ಪ್ರೀತಿ, ರಕ್ಷಣೆ ಹಾಗೂ ಒಡನಾಟದ ಬಂಧನ ಹೀಗೇ ಸಾಗಲಿ ಎಂದು ನಟಿ ಕಾಜಲ್ ಅಗರ್‍ವಾಲ್ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ರಕ್ಷಾ ಬಂಧನದ ಶುಭಾಶಯಗಳನ್ನು ಸಹೋದರಿ ನಿಶಾ ಅಗರ್‍ವಾಲ್‍ಗೆ ತಿಳಿಸಿದ್ದಾರೆ. ನಿಶಾ ಅಗರ್‍ವಾಲ್ ಜೊತೆಗಿರುವ ಫೋಟೋವನ್ನೂ ಸೋಶಿಯಲ್ ಮೀಡಿಯಾದಲ್ಲಿ ಕಾಜಲ್ ಅಗರ್‍ವಾಲ್ ಹಂಚಿಕೊಂಡಿದ್ದಾರೆ.

ಅಣ್ಣ-ತಂಗಿಯರ ಬಾಂಧವ್ಯದ ಹಬ್ಬವನ್ನು ಅಕ್ಕ-ತಂಗಿಯರೂ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನೆಟ್ಟಿಗರು ಸಿನಿಮಾ ತಾರೆಯರು ವಿಭಿನ್ನವಾಗಿ ರಕ್ಷಾ ಬಂಧನವನ್ನು ಆಚರಿಸಿರುವುದನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Source: publictv.in Source link