ರಾಂಚಿ ಮೂಲದ ಯುವತಿ ಬೆಂಗಳೂರಲ್ಲಿ ಪತ್ತೆ.. ರಾಖಿ ಹಬ್ಬದಂದು ಅಣ್ಣ-ತಂಗಿಯನ್ನ ಒಂದು ಮಾಡಿದ ಪೊಲೀಸ್

ರಾಂಚಿ ಮೂಲದ ಯುವತಿ ಬೆಂಗಳೂರಲ್ಲಿ ಪತ್ತೆ.. ರಾಖಿ ಹಬ್ಬದಂದು ಅಣ್ಣ-ತಂಗಿಯನ್ನ ಒಂದು ಮಾಡಿದ ಪೊಲೀಸ್

ಬೆಂಗಳೂರು: ಕಾಣೆಯಾಗಿದ್ದ ತಂಗಿಯನ್ನ ಪತ್ತೆಮಾಡಿ ರಕ್ಷಾ ಬಂಧನದಂದು ಅಣ್ಣನಿಗೆ ಪೊಲೀಸರು ಒಪ್ಪಿಸಿದ ಘಟನೆ ನಗರದ ಅಮೃತ ಹಳ್ಳಿಯಲ್ಲಿ ನಡೆದಿದೆ.

ಆಗಸ್ಟ್ 6 ರಂದು ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಿಂದ ಕಾಣೆಯಾಗಿದ್ದ ರಿಮಿ ಅಡ್ಡಿಯನ್ನ ಪೊಲೀಸ್ ಠಾಣೆಯಲ್ಲೇ ರಾಖಿ ಕಟ್ಟುವ ಮೂಲಕ ಅಣ್ಣ ತಂಗಿಯನ್ನ ಮನೆಗೆ ಬರಮಾಡಿಕೊಂಡಿದ್ದಾನೆ. ಬೆಂಗಳೂರಿನ ಅಮೃತಹಳ್ಳಿ ಪೊಲೀಸರಿಂದ ನಾಪತ್ತೆಯಾಗಿದ್ದ ತಂಗಿಗಾಗಿ ಸುಮಾರು 50ಕ್ಕೂ ಹೆಚ್ಚು ಆಶ್ರಮ, ಡಿಜೆಹಳ್ಳಿ, ಗೋವಿಂದಪುರ, ಕೆಜಿ ಹಳ್ಳಿ ಸುತ್ತಮುತ್ತ  ಹುಡುಕಾಟ ನಡೆಸಿದ್ರು. ಅಷ್ಟೇ ಅಲ್ಲದೇ.. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಸುತ್ತಮುತ್ತ ಪರಿಶೀಲನೆ ನಡೆಸಿದ್ದ ಪೊಲೀಸರು ಕೊನೆಗೂ ರಾಂಚಿ ಮೂಲದ ಯುವತಿಯನ್ನ ಮಾಗಡಿ ಬಳಿ ಪೊಲೀಸ್ರು ಪತ್ತೆ ಮಾಡಿ, ಪೊಲೀಸ್ ಠಾಣೆಯಲ್ಲೇ ಕೇಕ್ ಕತ್ತರಿಸಿ ಅಣ್ಣನ ಕೈಲಿ ರಾಖಿ ಕಟ್ಟಿಸುವ ಮೂಲಕ ಅಣ್ಣನಿಗೆ ಪೊಲೀಸ್ರು ಒಪ್ಪಿಸಿದ್ದಾರೆ.

Source: newsfirstlive.com Source link