ನೆಲಮಂಗಲ RTO ಅಧಿಕಾರಿಗಳಿಂದ ಸೀಜ್ ಆಯ್ತು ಅಮಿತಾಭ್ ಬಚ್ಚನ್ ಹೆಸರಿನಲ್ಲಿರೋ ಕಾರ್

ನೆಲಮಂಗಲ RTO ಅಧಿಕಾರಿಗಳಿಂದ ಸೀಜ್ ಆಯ್ತು ಅಮಿತಾಭ್ ಬಚ್ಚನ್ ಹೆಸರಿನಲ್ಲಿರೋ ಕಾರ್

ಬೆಂಗಳೂರು: ನೆಲಮಂಗಲ ಆರ್​ಟಿಓ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಕೋಟಿ ಕೋಟಿ ಬೆಲೆಬಾಳುವ 10 ಕ್ಕೂ ಹೆಚ್ಚು ವಾಹನಗಳನ್ನ ಸೀಜ್ ಮಾಡಿದ್ದಾರೆ. ಈ ಕಾರ್​​ಗಳನ್ನ JW MARRIOTT ಹೋಟೇಲ್ ಮುಂಭಾಗ ನಿಲ್ಲಿಸಿದ್ದ ಕಾರಣಕ್ಕೆ ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಅಚ್ಚರಿ ಎಂದರೆ ಅಮಿತಾಭ್ ಬಚ್ಚನ್ ಹೆಸರಿನಲ್ಲಿರುವ ಕಾರ್​ ಒಂದನ್ನು ಹಾಗೂ ರೌಡಿಶೀಟರ್ ಬಚ್ಚನ್ ಮಗನ ಕಾರ್​ನ್ನೂ ಸಹ ಜಪ್ತಿ ಮಾಡಲಾಗಿದೆ.

ಅಮಿತಾಭ್ ಬಚ್ಚನ್ ಹೆಸರಿನಲ್ಲಿರುವ ಕಾರ್ 9 ರಿಂದ 10 ಕೋಟಿ ಬೆಲೆಯದ್ದು ಎನ್ನಲಾಗಿದೆ. JW MARRIOTT ಹೋಟೇಲ್ ಮುಂಭಾಗದ ರಸ್ತೆ ಬದಿ ಈ ಕಾರುಗಳನ್ನು ನಿಲ್ಲಿಸಿದ್ದರು.. ಇವರಲ್ಲಿ ಕೆಲವರು ಮೋಜು ಮಸ್ತಿಗಾಗಿ ಬಂದಿದ್ದರು ಎನ್ನಲಾಗಿದೆ.

blank

ಈ ಹಿಂದೆ ಯುಬಿ ಸಿಟಿ ಬಳಿ ಗಲಾಟೆ ಆಗ್ತಿತ್ತು.. ಕುಡಿದು ಯುವಕರ ಗುಂಪು ಗಲಾಟೆ ಮಾಡುತ್ತಿತ್ತು.. ದೊಡ್ಡ ದೊಡ್ಡ ಕಾರ್​ಗಳಲ್ಲಿ ಶೋ ಅಪ್ ಮಾಡೋಕೆ ಕೆಲವರು ಬರ್ತಿದ್ದರು ಎನ್ನಲಾಗಿದೆ. ಗಾಡಿ ದಾಖಲೆಗಳ ಸಮೇತ ಬರುವಂತೆ ಆರ್​ಟಿಓ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ರಾಜಕಾರಣಿಗೆ ಸೇರಿದ ಎರಡು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಪಾಂಡಿಚೇರಿ ಹಾಗೂ ಹೈದರಾಬಾದ್​ನಲ್ಲಿ ಈ ಕಾರ್​ಗಳ ರಿಜಿಸ್ಟ್ರರ್ ಆಗಿದೆಯಂತೆ. ಕೆಲ ವಾಹನಗಳ ದಾಖಲಾತಿ ಸರಿ ಇಲ್ಲ ಎನ್ನಲಾಗಿದೆ.

ಒಂದು ಕಾರ್​ ಮಾಲೀಕ ಖಾನ್ ಎಂಬಾತ ಅಮಿತಾಭ್ ಬಚ್ಚನ್ ನನ್ನ ಸಂಬಂಧಿ ಎಂದಿದ್ದಾನಂತೆ.. ಅವರಿಂದನೇ ನಾನು ಕಾರು ಪಡೆದುಕೊಂಡಿದ್ದೆ. ಅವರು ನನ್ನ ರಿಲೇಷನ್ ಆ ಕಾರನ್ನ ನಾನು ಪರ್ಚೇಸ್ ಮಾಡಿದ್ದೀನಿ ಎನ್ನುತ್ತಿದ್ದಾನಂತೆ. ಕಾರ್ ನ ಇನ್ಸೂರೆನ್ಸ್ ಕಟ್ಟದ ಹಿನ್ನೆಲೆ ಜೊತೆಗೆ ಅಧಿಕಾರಿಗಳಿ ಆರ್ ಸಿ ಬುಕ್ ಕೊಟ್ಟಿಲ್ಲ.. ನೋ ಪಾರ್ಕಿಂಗ್​ನಲ್ಲಿ ಗಾಡಿ ನಿಲ್ಲಿಸಿದ್ದ ಎನ್ನಲಾಗಿದೆ. ಸದ್ಯ ನೆಲಮಂಗಲ ಆರ್​ಟಿಓಗೆ ಬರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಎರಡು ಗಾಡಿಗಳು ಎಂಎಲ್ ಸಿ ಫಾರೂಕ್​ ಹೆಸರಿನಲ್ಲಿವೆಯಂತೆ.

Source: newsfirstlive.com Source link