ರಾಖಿ ಕಟ್ಟಿ ಸಂಭ್ರಮಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಸಹೋದರತೆಯ ಸಂಕೇತವಾಗಿರುವ ರಕ್ಷಬಂಧನವನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಂಭ್ರಮದಿಂದ ಆಚರಿಸಿದ್ದಾರೆ.

ಸಹೋದರ ಚನ್ನರಾಜ ಹಟ್ಟಿಹೊಳಿ ಅವರಿಗೆ ತಿಲಕವಿಟ್ಟು, ರಾಖಿ ಕಟ್ಟಿ ಆರತಿ ಬೆಳಗಿದ ಲಕ್ಷ್ಮಿ ಹೆಬ್ಬಾಳ್ಕರ್ ನಂತರ ಕ್ಷೇತ್ರದ ಜನರಿಗೆ ರಾಖಿ ಕಟ್ಟಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಜನರು ಆಗಮಿಸಿ ರಾಖಿ ಕಟ್ಟಿಸಿಕೊಂಡರು. ಕ್ಷೇತ್ರದ ಜನರು ಆಗಮಿಸಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ರಾಖಿ ಕಟ್ಟಿಸಿಕೊಂಡು ಸಿಹಿ ತಿಂದು ಖುಷಿಪಟ್ಟರು. ಈ ವೇಳೆ ಜನರಿಗೆ ಅಲ್ಪೋಪಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಹಿರಿಯರ ಕಾಲಿಗೆ ನಮಸ್ಕರಿಸಿ ಆಶಿರ್ವಾದ ಪಡೆದರೆ. ಇದನ್ನೂ ಓದಿ: ವಿಭಿನ್ನವಾಗಿ ರಕ್ಷಾ ಬಂಧನ ಆಚರಿಸಿದ ಸೆಲೆಬ್ರಿಟಿಗಳು

ಪ್ರತಿ ವರ್ಷ ರಾಖಿ ಕಟ್ಟುವ ಸಂಪ್ರದಾಯವನ್ನು ನಡೆಸಿಕೊಡು ಬರುತ್ತಿದ್ದೆ. ಆದರೆ ಕಳೆದ 2 ವರ್ಷ ಕೊರೊನಾ ಕಾರಣದಿಂದ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಾರಿಯೂ ದೊಡ್ಡ ಪ್ರಮಾಣದಲ್ಲಿ ಮಾಡಬಾರದೆಂದು ಯೋಚಿಸಿದ್ದೆ, ಆದರೆ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸದಿಂದಾಗಿ ಸಂಪ್ರದಾಯ ನಿಲ್ಲಿಸಲು ಸಾಧ್ಯವಾಗಲಿಲ್ಲ. ಜನರು ತಾವಾಗಿಯೇ ಆಗಮಿಸಿ ಪ್ರೀತಿ ತೋರಿಸುತ್ತಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ಇದನ್ನೂ ಓದಿ: ಈಗ ತಕ್ಷಣ ನಾನು ನಿಮಾನ್ಸ್‌ಗೆ ಹೋಗಿ ಚಿಕಿತ್ಸೆ ಪಡೆಯುತ್ತೇನೆ: ಡಿಕೆಶಿ

ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ್, ಡಾ.ಹಿತಾ, ಕುಟುಂಬಸ್ಥರು, ಗಣ್ಯರಾದ ಯುವರಾಜ ಕದಂ, ಅಡಿವೇಶ ಇಟಗಿ, ಮಹಾಂತೇಶ ಮತ್ತಿಕೊಪ್ಪ, ಬಸವರಾಜ ಮ್ಯಾಗೋಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Source: publictv.in Source link