ಬಲ ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಆಪ್ತರ ವಿಶ್ವಾಸ ಗಳಿಸಲು ಮುಂದಾದ್ರಾ ಡಿ.ಕೆ. ಶಿವಕುಮಾರ್..?

ಬಲ ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಆಪ್ತರ ವಿಶ್ವಾಸ ಗಳಿಸಲು ಮುಂದಾದ್ರಾ ಡಿ.ಕೆ. ಶಿವಕುಮಾರ್..?

ಭವಿಷ್ಯದಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳಲು ವಿಪಕ್ಷ ನಾಯಕ ಸಿದ್ದರಾಮಯ್ಯನವರ ಆಪ್ತರನ್ನ ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೈ ಹಾಕಿದ್ರಾ ಎಂಬ ಚರ್ಚೆ ಶುರುವಾಗಿದೆ. ಮೊದಲ ಪ್ರಯತ್ನವಾಗಿ ಅಂತರ ಕಾಯ್ದುಕೊಂಡಿದ್ದ, ಸಿದ್ದರಾಮಯ್ಯ ಬಣ ಸೇರಿ ಸೆಡ್ಡು ಹೊಡೆದಿದ್ದ ಸ್ವಪಕ್ಷೀಯ ಶಾಸಕ ಜಮೀರ್ ಅಹಮ್ಮದ್​ರನ್ನ ಸೆಳೆಯುವಲ್ಲಿ ಡಿಕೆಎಸ್ ಯಶಸ್ವಿಯಾಗಿದ್ದಾರಂತೆ.

ಇದನ್ನೂ ಓದಿ: ‘ಡಿಕೆಎಸ್​ಗಾಗಿ 1 ಒತ್ತಿ.. ಸಿದ್ದರಾಮಯ್ಯಗಾಗಿ 2 ಒತ್ತಿ.. ಖರ್ಗೆಗಾಗಿ 3 ಒತ್ತಿ” ಕಾಂಗ್ರೆಸ್ ಸೀಕ್ರೆಟ್ ಸರ್ವೆ..?

ಚಾಮರಾಜಪೇಟೆ ಕ್ಷೇತ್ರಕ್ಕೆ ಫುಡ್ ಕಿಟ್ ವಿತರಣೆಗೆ ಜಮೀರ್​ ಸಿದ್ದರಾಮಯ್ಯಗೆ ಮಾತ್ರ ಆಹ್ವಾನ ನೀಡುತ್ತಿದ್ದರು.. ಡಿಕೆಎಸ್​ ಅವರನ್ನ ದೂರವಿಟ್ಟು ಸಿದ್ದರಾಮಯ್ಯರನ್ನ ಹತ್ತಕ್ಕೂ ಹೆಚ್ಚು ಬಾರಿ ಜಮೀರ್ ತಮ್ಮ ಕ್ಷೇತ್ರಕ್ಕೆ ಕರೆಸಿದ್ದರು.. ಅಷ್ಟೇ ಏಕೆ ಚಾಮರಾಜಪೇಟೆ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಬಹಿರಂಗ ಆಹ್ವಾನ ನೀಡಿದ್ದರು. ಇಬ್ಬರೂ ನಾಯಕರಿಗೂ ಆಹ್ವಾನ ನೀಡದೆ ಕೇವಲ ಸಿದ್ದರಾಮಯ್ಯಗೆ ಜಮೀರ್ ಆದ್ಯತೆ ನೀಡುತ್ತಿದ್ದರು.. ಹೋದಲ್ಲಿ ಬಂದಲ್ಲಿ ಸಿದ್ದು ಮುಂದಿನ ಸಿಎಂ ಎಂದು ಘಂಟಾಘೋಷವಾಗಿ ಹೇಳಿಕೆ ನೀಡುತ್ತಿದ್ದರು ಎನ್ನಲಾಗಿದೆ.

blank

ಜಮೀರ್ ನಡೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇದೀಗ ಜಮೀರ್​ನ್ನ ತನ್ನತ್ತ ಸೆಳೆಯಲು ಇಡಿ ದಾಳಿ ಸಾಕ್ಷಿಯಾಯ್ತಾ ಎಂಬ ಚರ್ಚೆ ಶುರುವಾಗಿದೆ. ಇಡಿ ದಾಳಿ ಬಳಿಕ ಮುಜುಗರದ ಕಾರಣ ಜಮೀರ್ ರಿಂದ ಸಿದ್ದರಾಮಯ್ಯ ದೂರ ಉಳಿದಿದ್ದಾರಂತೆ. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖುದ್ದು ಜಮೀರ್ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ್ದ್ದಾರಂತೆ. ಈ ಮೂಲಕ ಸಂಕಷ್ಟದ ವೇಳೆ ತಮ್ಮ ಆಪ್ತನ ಬೆನ್ನಿಗೆ ಸಿದ್ದರಾಮಯ್ಯ ನಿಲ್ಲಲಿಲ್ಲ ಎಂಬುದನ್ನ ಬಿಂಬಿಸುವ ಯತ್ನ ಮಾಡಿದ್ದಾರಂತೆ.

blank

ಹತ್ತು ದಿನಗಳ ಬಳಿಕ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿದ್ದ ಬೆನ್ನಲ್ಲೇ ಡಿಕೆ ಶಿವಕುಮಾರ್ ಮನೆಗೂ ಜಮೀರ್ ಭೇಟಿ ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರಿ ನಿವಾಸದ ಸಮೀಪವೇ ಡಿಕೆಎಸ್ ಮನೆ ಇದ್ದರೂ ಒಂದು ದಿನವೂ ಅತ್ತ ಸುಳಿದಿರಲಿಲ್ಲವಂತೆ. ಇಡಿ ದಾಳಿ ಬಳಿಕ ಖುದ್ದು ಡಿಕೆಎಸ್​ ನಿವಾಸಕ್ಕೆ ಜಮೀರ್ ಭೇಟಿ ನೀಡಿದ್ದು ಭೇಟಿ ಬಗ್ಗೆ ಕೈಪಡೆಯಲ್ಲಿ ವಿಭಿನ್ನ ಚರ್ಚೆಗಳು ಶುರುವಾಗಿವೆ.

ಇದನ್ನೂ ಓದಿ: ಕಾಂಗ್ರೆಸ್ ಟಾರ್ಗೆಟ್ ಬಸವರಾಜ ಬೊಮ್ಮಾಯಿ; ಸಿಎಂಗೆ ಬ್ರೇಕ್ ಹಾಕೋಕೆ ಕಾಂಗ್ರೆಸ್​ 5 ಅಸ್ತ್ರಗಳು?

Source: newsfirstlive.com Source link