ಅಂಬೇಡ್ಕರ್ ಅವಮಾನಿಸಿ ಸೋಲಿಸಿದ ಕಾಂಗ್ರೆಸ್ ವಿರುದ್ಧ ಜನಜಾಗೃತಿ: ಬಿಜೆಪಿ ಎಸ್‍ಸಿ ಮೋರ್ಚಾ

ಬೆಂಗಳೂರು: ಸಂವಿಧಾನ ಕರ್ತೃ ಹಾಗೂ ದಲಿತರ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಡಾ. ಬಾಬಾ ಸಾಬೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿ, ಸೋಲಿಸಿ ವಂಚಿಸಿದ್ದ ಕಾಂಗ್ರೆಸ್ ಪಕ್ಷವನ್ನು ದಲಿತರು ತಿರಸ್ಕರಿಸಲು ಜನಜಾಗೃತಿ ಮೂಡಿಸಲು ರಾಜ್ಯ ಬಿಜೆಪಿ ಎಸ್.ಸಿ. ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಬಿಜೆಪಿ ಎಸ್.ಸಿ ಮೋರ್ಚಾ ಪದಾಧಿಕಾರಿಗಳ ಸಭೆ ನಡೆಯಿತು. ಮುಂಬರುವ ದಿನಗಳಲ್ಲಿ ದಲಿತ ಕಾಳಜಿಯುಳ್ಳ, ದಲಿತರ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಬಿಜೆಪಿಯನ್ನು ಬೆಂಬಲಿಸಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಸದೃಢವಾಗಿ ಕಟ್ಟುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಇದನ್ನೂ ಓದಿ: ಈಗ ತಕ್ಷಣ ನಾನು ನಿಮಾನ್ಸ್‌ಗೆ ಹೋಗಿ ಚಿಕಿತ್ಸೆ ಪಡೆಯುತ್ತೇನೆ: ಡಿಕೆಶಿ


ರಾಜ್ಯದಲ್ಲಿ ಎಸ್.ಸಿ ಮೋರ್ಚಾ ಹಿಂದೆಂದಿಗಿಂತಲೂ ಈಗ ಸದೃಢವಾಗಿ ಬೆಳೆಯುತ್ತಿದ್ದು ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಪರಿಶಿಷ್ಟ ಸಮುದಾಯವು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲವಾಗಿ ನಿಲ್ಲಲಿದೆ. ಇದರೊಂದಿಗೆ ಕಾಂಗ್ರೆಸ್ ಪಕ್ಷದ ಸುಳ್ಳುಗಳನ್ನು ಜನಸಮುದಾಯಕ್ಕೆ ತಿಳಿಸಿ ಮತ್ತಷ್ಟು ಜನರನ್ನು ಬಿಜೆಪಿಗೆ ಸೇರ್ಪಡೆ ಮಾಡುವ ಮೂಲಕ ಪಕ್ಷವನ್ನು ಮತ್ತಷ್ಟು ಶಕ್ತಿಯುತವಾಗಿ ಕಟ್ಟಲು ಸಭೆಯಲ್ಲಿ ತೀರ್ಮಾನಿಸಲಾಯಿತು.

blank

ಕಾಂಗ್ರೆಸ್ ಪಕ್ಷ ಸದಾ ಸುಳ್ಳುಗಳನ್ನು ಹೇಳಿ ತಳ ಸಮುದಾಯಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುವ ಮೂಲಕ ದಲಿತರ ದಮನ ಮಾಡುತ್ತಿದ್ದು ದಲಿತರ ಏಳಿಗೆಗೆ ಕಾಂಗ್ರೆಸ್ ಆಡ್ಡಗಾಲಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿತು. ಕೇಂದ್ರದಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ತಳ ಸಮುದಾಯಗಳಿಗೆ ನೀಡುತ್ತಿರುವ ಪ್ರೋತ್ಸಾಹ ಮತ್ತು ಸೌಲಭ್ಯಗಳು, ತಮ್ಮ ಸಚಿವ ಸಂಪುಟದಲ್ಲಿ ದಲಿತರಿಗೆ ನೀಡಿದ ಶೇ.25 ಸ್ಥಾನಮಾನಗಳು ನಿಜಕ್ಕೂ ಪ್ರೋತ್ಸಾಹದಾಯಕ ಎಂದು ಶ್ಲಾಘಿಸಲಾಯಿತು. ಮೋದಿ ಹಾಗೂ ಬಿಜೆಪಿ ನಾಯಕತ್ವಕ್ಕೆ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು. ಇದನ್ನೂ ಓದಿ: ಅಫ್ಘಾನ್‍ನಿಂದ ವಾಪಸಾದ ಚಿಕ್ಕೋಡಿಯ ಯೋಧ- ಕುಟಂಬಸ್ಥರಲ್ಲಿ ಸಂತಸ

ಈ ಸಭೆಯಲ್ಲಿ ರಾಜ್ಯ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹಾಗೂ ರಾಷ್ಟ್ರೀಯ ಎಸ್.ಸಿ ಮೋರ್ಚಾ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಪ್ರಭಾರಿ ಎಸ್. ಕುಮಾರ್ ಮತ್ತು ರಾಜ್ಯದಿಂದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಜಯಕುಮಾರ್ ಕಾಂಗೆಯವರೂ ಪಾಲ್ಗೊಂಡಿದ್ದರು.

Source: publictv.in Source link