ಅಭಿಮಾನಿ ಪ್ರೇಮಿಗಳನ್ನ ಒಂದು ಮಾಡಿದ ರನ್ನ.. ಎರಡು ಹೃದಯಗಳಿಗೆ ಸೇತುವೆಯಾದ ಕಿಚ್ಚ

ಅಭಿಮಾನಿ ಪ್ರೇಮಿಗಳನ್ನ ಒಂದು ಮಾಡಿದ ರನ್ನ.. ಎರಡು ಹೃದಯಗಳಿಗೆ ಸೇತುವೆಯಾದ ಕಿಚ್ಚ

ಇದು ಕಿಚ್ಚ ಸುದೀಪ್ ಫ್ಯಾನ್ಸ್ ನೋಡಲೇ ಬೇಕಾದ ಸ್ಟೋರಿ.. ಬರಿ ಸ್ಟೋರಿ ಅಲ್ಲ ರಿಯಲ್ ಲವ್ ಸ್ಟೋರಿ.. ಈ ಸ್ಟೋರಿಯಲ್ಲಿ ಕಿಚ್ಚ ಸುದೀಪ್ ಅವರ ಪಾತ್ರ ಬಲು ಎತ್ತರದ್ದು.. ಹಾಗಾದ್ರೆ ಈ ಲವ್ ಸ್ಟೋರಿ ಯಾರದ್ದು ಮತ್ತು ಎಂಥದ್ದು.. ಅಂತೀರಾ?

ಒಬ್ಬ ವ್ಯಕ್ತಿ.. ಆ ಒಬ್ಬ ವ್ಯಕ್ತಿ ಹೆಸರಿನ ಶಕ್ತಿ.. ಆ ಹೆಸರಿನ ಮೇಲಿನ ಮೇಲಿನ ಭಕ್ತಿ ಮತ್ತು ಸ್ಫೂರ್ತಿ ಎಲ್ಲಿಗೆ ಕರ್ಕೊಂಡು ಹೋಗುತ್ತೆ ನೋಡಿ.. ವ್ಯಕ್ತಿ – ಶಕ್ತಿ – ಭಕ್ತಿ – ಸ್ಫೂರ್ತಿಗಳು ಸೇರಿದ್ರೆ ಆಗೋದು ಅನ್ಸುತ್ತೆ ಈ ಅಭಿಮಾನ.. ಅಭಿಮಾನಕ್ಕೆ ಬೆಲೆ ಕಟ್ಟಲು ಆಗುತ್ತಾ ಹೇಳಿ? ನೋ ಚಾನ್ಸ್.. ಅಭಿಮಾನ ಅನ್ನೋದು ಬಹಳ ಶಕ್ತಿಶಾಲಿ.. ಮದುವೆ ಅನ್ನೋದೆ ಒಂದು ಋಣಾನುಬಂಧ.. ಈ ಋಣಾನು ಬಂಧಕ್ಕೆ ಅಭಿಮಾನ ಬೆರೆತ್ರೆ ಆಗೋದು ಈ ಸ್ಟೋರಿ..

ಚಿತ್ರಪ್ರೇಮಿಗಳೇ ಇದೊಂಥರ ಸಿನಿಮಾ ಲವ್ ಸ್ಟೋರಿ.. ಆದ್ರೆ ರಿಯಲ್ ಲವ್ ಸ್ಟೋರಿ.. ಆತ ಶಿವಮೊಗ್ಗದ ಹುಡ್ಗ , ಆಕೆ ಮಂಡ್ಯ ಹುಡ್ಗಿ.. ಇಬ್ಬರು ಬೆಂಗಳೂರೆಂಬ ಮಾಯ ನಗರಿಯಲ್ಲಿ ದುಡಿಮೆ ಮಾಡಿ ಓದಲು ಬಂದಿದ್ದರು.. ಹುಡ್ಗ ಡೆಲೆವರಿ ಬಾಯ್.. ಹುಡ್ಗಿ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಾ ಸ್ವಾಭಿಮಾನ ಬದುಕನ್ನ ಕಟ್ಟಿಕೊಂಡಾಕೆ.. ಇಬ್ಬರ ನಡುವೆ ಪ್ರೇಮವಾಗುತ್ತೆ, ಪ್ರೇಮ ಮನೆಯವರನ್ನ ಒಪ್ಪಿಸಿ ಮದುವೆ ಹಂತಕ್ಕೆ ತಂದು ನಿಲ್ಲಿಸುತ್ತೆ.. ಆದ್ರೆ ಈ ಬಡ ಪ್ರೇಮಿಗಳಿಗೆ ಮದುವೆ ಸಂಭ್ರಮಕ್ಕೆ ಆರ್ಥಿಕ ಸಂಕಷ್ಟ ಎದುರಾಗಿರುತ್ತೆ.. ಆಗ ಪ್ರೇಮಿಗಳ ನೆರವಿಗೆ ಬಂದವರು ಕಿಚ್ಚ ಸುದೀಪ್​​..

blank

ಅಭಿಮಾನಿ ಪ್ರೇಮಿಗಳನ್ನ ಒಂದು ಮಾಡಿದ ‘ರನ್ನ’
ಆ ಎರಡು ಹೃದಯಗಳಿಗೆ ಸೇತುವೆಯಾದ ಕಿಚ್ಚ

ಕಿಚ್ಚ ಸುದೀಪ್ ಅವರ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಸ್ನೇಹ ಬಳಗ ಅದ್ಭುತ ಕೆಲಸ ಕಾರ್ಯಗಳನ್ನ ಮಾಡ್ತಿದೆ.. ನಾಡು ನೆರೆಹಾನಿ ಎದುರಿಸಿದಾಗ, ಜನ ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಬಳಲುತ್ತಿದ್ದಾಗ, ಅಭಿಮಾನಿಗಳು ಕಷ್ಟ ಎಂದು ಬಂದಾಗ, ರಾಜ್ಯದ ಸರ್ಕಾರಿ ಕನ್ನಡ ಶಾಲೆಗಳು ಅವನತಿ ಹಾದಿ ಹಿಡಿದಾಗ, ವಯೋ ವೃದ್ಧರು ತಮ್ಮ ಮಕ್ಕಳಿಂದ ದೂರದಾಗ ಹೀಗೆ ಅನೇಕ ಅನೇಕ ಸಂದರ್ಭದಲ್ಲಿ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಅನನ್ಯ ಸೇವೆಯನ್ನ ಮಾಡಿದ್ದಾರೆ.. ಈಗ ಕಿಚ್ಚನ ಸಹೃದಯ ಬಳಗದಿಂದ ಒಂದೊಳ್ಳೆ ಕೆಲಸ ಮಾಡ್ತಿದ್ದಾರೆ.. ಇಬ್ಬರು ಪ್ರೇಮಿಗಳನ್ನ ಒಂದು ಮಾಡುತ್ತಿದ್ದಾರೆ.. ಸುದೀಪ್.

ರಾಜು ಅನ್ನೋ ಶಿವಮೊಗ್ಗ ಹುಡ್ಗ ಮಂಡ್ಯ ಪವಿತ್ರಾ ಎಂಬುವ ಹುಡ್ಗಿ ಹಲವು ವರ್ಷಗಳಿಂದ ಪ್ರೀತಿಸಿ ಈಗ ಮದುವೆಯಾಗಲು ಮುಂದಾಗಿದ್ದಾರೆ.. ಕಿಚ್ಚ ಸುದೀಪ್ ಅವರ ಕಡೆಯಿಂದ ತಾಳಿ ಪಂಚೆ, ಸೀರೆ ಹಣ ಸಹಾಯವು ಸಿಕ್ಕಿದೆ.. ಸೆಪ್ಟೆಂಬರ್ 1ನೇ ತಾರೀಖು ಈ ಜೋಡಿ ಧರ್ಮಸ್ಥಳದಲ್ಲಿ ಮದುವೆಯಾಗುತ್ತಿದೆ.. ಕಿಚ್ಚ ಸುದೀಪ್ ಅವರ ಅಭಿಮಾನಿಗಳಾಗಿರೋ ರಾಜು ಮತ್ತು ಪವಿತ್ರ ಸುದೀಪ್ ಅವರ ಬರ್ತ್​ಡೇ ದಿನ ಸೆಪ್ಟೆಂಬರ್ 2ನೇ ತಾರೀಖು ಆರತಕ್ಷತೆಯ ಕಾರ್ಯಕ್ರಮವನ್ನ ಇಟ್ಕೊಂಡಿದ್ದಾರೆ.

ತನ್ನ ಅಭಿಮಾನಿಗಳ ಹೊಸ ಜೀವನಕ್ಕೆ ಸುದೀಪ್ ಮತ್ತು ಅವರ ಧರ್ಮ ಪತ್ನಿ ಪ್ರಿಯಾ ಸುದೀಪ್ ಉಡುಗೊರೆ ಕೊಟ್ಟು ಬದುಕಲು ಆತ್ಮಸ್ಥೈರ್ಯವನ್ನ ಕೊಟ್ಟಿರೋದು ನಿಜಕ್ಕೂ ಖುಷಿಯ ವಿಚಾರ ಅಲ್ವಾ.. ಇದೇ ರೀತಿ ಸುದೀಪ್ ಬಳಗದಿಂದ ಚಿನ್ನದಂತ ಕೆಲಸಗಳು ಆಗ್ತಿರಲಿ.

Source: newsfirstlive.com Source link